
ನವದೆಹಲಿ (ಜು.03): ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಆಂದೋಲನ ನಡೆದ ಬಳಿಕ ಬಿಎಂಆರ್’ಸಿಲ್ ಮೆಜೆಸ್ಟಿಕ್, ಚಿಕ್ಕಪೇಟೆಯಲ್ಲಿ ಮೇಟ್ರೋ ಬೋರ್ಡ್’ಗಳಲ್ಲಿ ಹಿಂದಿಯನ್ನು ಅಳಿಸಿ ಹಾಕಿದೆ.
ಮೆಟ್ರೋ ಬೋರ್ಡ್’ಗಳಲ್ಲಿ ಹಿಂದಿಯನ್ನು ಎರಡನೇ ಭಾಷೆಯಾಗಿ ಮಾಡಿರುವುದಕ್ಕೆ ಕೇಂದ್ರ ಸರ್ಕಾರವು ನಮ್ಮ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಕನ್ನಡ ಪರ ಸಂಘಟನೆಗಳು, ಬೆಂಗಳೂರಿನ ನಾಗರೀಕರು ಪ್ರತಿಭಟನೆ ಮಾಡಿದ್ದರು. ಟ್ವಿಟರ್’ನಲ್ಲಿ # #NammaMetroHindiBeda ಟ್ರೆಂಡ್ ಶುರುವಾಯ್ತು. ಬಳಿಕ ಫೇಸ್’ಬುಕ್’ ಟ್ವಿಟರ್’ನಲ್ಲಿ ಭಾರೀ ಪ್ರಮಾಣದ ಆಂದೋಲನವೇ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಭಟನಾಕಾರರ ಜೊತೆ ಮಾತನಾಡಿ, ಬೆಂಗಳೂರು ಮೆಟ್ರೋ ಕೇಂದ್ರ ಸರ್ಕಾರದ ಯೋಜನೆಯಲ್ಲ. ಹಾಗಾಗಿ ಬೋರ್ಡ್’ಗಳಲ್ಲಿ ಹಿಂದಿ ಬಳಕೆ ಬೇಡ ಎಂದಿದ್ದಾರೆ.
ಕನ್ನಡ ಪರ ಸಂಘಟನೆಗಳು ಮೆಜೆಸ್ಟಿಕ್ ಮತ್ತು ಚಿಕ್ಕಪೇಟೆ ಮೆಟ್ರೋ ಸ್ಟೇಷನ್’ಗೆ ನುಗ್ಗಿ ಬೋರ್ಡ್’ಗಳಿಗೆ ಕಪ್ಪುಮಸಿ ಬಳೆಯಲು ಪ್ಲಾನ್ ಮಾಡಿದ್ದರು. ಮುಂಜಾಗ್ರತಾ ಕ್ರಮವಾಗಿ ಉಪ್ಪಾರ ಪೇಟೆ ಪೊಲೀಸರು ಬೋರ್ಡ್’ನಿಂದ ಹೊಂದಿಯನ್ನು ಅಳಿಸಿ ಹಾಕಿಸಿದ್ದಾರೆ. ಜೊತೆಗೆ ಎರಡೂ ಸ್ಟೇಷನ್’ಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.