ಮೌಂಟ್‌ ಎವರೆಸ್ಟ್‌ನ ಪ್ರಸಿದ್ಧ ಹಿಲರಿ ಸ್ಟೆಪ್‌ ನಾಶ

By Suvarna Web DeskFirst Published May 23, 2017, 2:19 PM IST
Highlights

1953ರಲ್ಲಿ ಸರ್‌. ಎಡ್ಮಂಡ್‌ ಹಿಲರಿಯವರು ಮೊತ್ತ ಮೊದಲು ಮೌಂಟ್‌ ಎವರೆಸ್ಟ್‌ ಏರಿದ ಸ್ಮರಣಾರ್ಥ ಇದನ್ನು ‘ದ ಹಿಲರಿ ಸ್ಟೆಪ್‌' ಎಂದು ನಾಮಕರಣ ಮಾಡಲಾಗಿದೆ. ಬ್ರಿಟಿಷ್‌ ಪರ್ವತಾರೋಹಿ ಟಿಮ್‌ ಮೊಸಾಡೇಲ್‌ ಎಂಬವರು ಹಿಲರಿ ಸ್ಟೆಪ್‌ ನಶಿಸಿರುವ ಸುದ್ದಿ ಬಗ್ಗೆ ಫೇಸ್‌ಬುಕ್‌ನಲ್ಲಿ ದೃಢಪಡಿಸಿದ್ದಾರೆ.

ಲಂಡನ್‌: ಜಗತ್ತಿನ ಅತಿ ಎತ್ತರದ ಪರ್ವತವೆಂಬ ಹೆಗ್ಗಳಿಕೆಯ ಮೌಂಟ್‌ ಎವರೆಸ್ಟ್‌ ಶಿಖರದ ತುತ್ತತುದಿ ಸಮರ್ಥವಾಗಿ ಏರಲು ಸಹಕಾರಿಯಾಗಿದ್ದ ‘ದ ಹಿಲರಿ ಸ್ಟೆಪ್‌' ಕುಸಿದಿದೆ ಎಂದು ಪರ್ವಾತಾರೋಹಿಗಳು ತಿಳಿಸಿದ್ದಾರೆ.

ಈ ಪ್ರದೇಶ ಅತ್ಯಂತ ಅಪಾಯಕಾರಿ ಮತ್ತು ಸಮಯ ವ್ಯರ್ಥವಾಗಿಸುವಂಥ ಹಂತಕ್ಕೆ ತಲುಪಿದೆ ಎಂದಿರುವ ಪರ್ವಾತಾರೋಹಿಗಳು, ಇದೊಂದು ‘ಯುಗದ ಅಂತ್ಯ' ಎಂದು ಬಣ್ಣಿಸಿದ್ದಾರೆ.

ಮೌಂಟ್‌ ಎವರೆಸ್ಟ್‌ನ ತುತ್ತತುದಿಗೆ ತಲುಪುವುದಕ್ಕೂ ಮೊದಲು ಪರ್ವತ ಶ್ರೇಣಿಯ ಆಗ್ನೇಯ ಭಾಗದಲ್ಲಿ ಲಂಬಸ್ಥಿತಿಯಲ್ಲಿರುವ 12 ಮೀ. ಎತ್ತರದ ಅತ್ಯಂತ ಕಠಿಣ ಸವಾಲಿನ ಬಂಡೆಯೊಂದಿದೆ.

1953ರಲ್ಲಿ ಸರ್‌. ಎಡ್ಮಂಡ್‌ ಹಿಲರಿಯವರು ಮೊತ್ತ ಮೊದಲು ಮೌಂಟ್‌ ಎವರೆಸ್ಟ್‌ ಏರಿದ ಸ್ಮರಣಾರ್ಥ ಇದನ್ನು ‘ದ ಹಿಲರಿ ಸ್ಟೆಪ್‌' ಎಂದು ನಾಮಕರಣ ಮಾಡಲಾಗಿದೆ. ಬ್ರಿಟಿಷ್‌ ಪರ್ವತಾರೋಹಿ ಟಿಮ್‌ ಮೊಸಾಡೇಲ್‌ ಎಂಬವರು ಹಿಲರಿ ಸ್ಟೆಪ್‌ ನಶಿಸಿರುವ ಸುದ್ದಿ ಬಗ್ಗೆ ಫೇಸ್‌ಬುಕ್‌ನಲ್ಲಿ ದೃಢಪಡಿಸಿದ್ದಾರೆ.

ಮೇ 16ರಂದು ಪರ್ವತಾರೋಹಣ ಪೂರೈಸಿದ ಬಳಿಕ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿದ್ದು, ಇದೊಂದು ‘ಯುಗದ ಅಂತ್ಯ' ಎಂದು ಬಣ್ಣಿಸಿದ್ದಾರೆ.

click me!