ನಂದಿ ಬೆಟ್ಟಕ್ಕೆ ಹೋಗೋರಿಗೆ ಶಾಕ್

Published : Dec 21, 2018, 09:06 AM IST
ನಂದಿ ಬೆಟ್ಟಕ್ಕೆ ಹೋಗೋರಿಗೆ ಶಾಕ್

ಸಾರಾಂಶ

ಬೆಂಗಳೂರು ಹತ್ತಿರದ ಗಿರಿಧಾಮ ನಂದಿ ಬೆಟ್ಟದ ಪ್ರವೇಶ ಶುಲ್ಕ ಮತ್ತು ವಾಹನ ನಿಲ್ದಾಣ ಶುಲ್ಕವನ್ನು ಹೆಚ್ಚಳ ಮಾಡಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.  

ಬೆಂಗಳೂರು :  ರಾಜ್ಯ ರಾಜಧಾನಿ ಬೆಂಗಳೂರಿಗೆ ಅತ್ಯಂತ ಹತ್ತಿರಲ್ಲಿರುವ ಗಿರಿಧಾಮ ನಂದಿ ಬೆಟ್ಟದ ಪ್ರವೇಶ ಶುಲ್ಕ ಮತ್ತು ವಾಹನ ನಿಲ್ದಾಣ ಶುಲ್ಕವನ್ನು ಹೆಚ್ಚಳ ಮಾಡಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ಮನೋರಂಜನೆ ವಿಭಾಗಕ್ಕೂ ವಿಧಿಸಿದೆ. ಪರಿಣಾಮ ಶುಲ್ಕ ಹೆಚ್ಚಳ ಅನಿವಾರ್ಯವಾಗಿದೆ. ಆದ್ದರಿಂದ ಪ್ರಸಕ್ತದ ಟೆಂಡರ್‌ ಪೂರ್ಣಗೊಂಡ ಬಳಿಕ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮನೋರಂಜನೆ ವಿಭಾಗಗಳಿಗಾಗಿ ಜಿಎಸ್‌ಟಿ ರಿಯಾಯಿತಿ ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆದರೆ, ಈ ಮನವಿಗೆ ಸ್ಪಂದಿಸಿಲ್ಲ. ಆದ್ದರಿಂದ ಶೇ.18 ಶುಲ್ಕವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ನಂದಿ ಬೆಟ್ಟದ ವಿಶೇಷಾಧಿಕಾರಿ ಎನ್‌.ರಮೇಶ್‌ ತಿಳಿಸಿದ್ದಾರೆ.

ಹೊಸದಾಗಿ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜನವರಿ 24ಕ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆ ನಂತರ ಶುಲ್ಕ ಹೆಚ್ಚಳ ಜಾರಿಯಾಗಲಿದೆ ಎಂದು ಅವರು ಹೇಳಿದರು.

ಅತಿಥಿಗೃಹಗಳ ನವೀಕರಣ:  ನಂದಿಬೆಟ್ಟದಲ್ಲಿ ತೋಟಗಾರಿಕೆ ಇಲಾಖೆ ವ್ಯಾಪ್ತಿಯಡಿ ಬರುವ ಅತಿಥಿ ಗೃಹದ 24 ಕೊಠಡಿಗಳನ್ನು ನವೀಕರಿಸಲಾಗುತ್ತಿದೆ. ನೆಹರು ನಿಲಯದ ಸೂಟ್‌, ಡಿಲಕ್ಸ್‌ ಕೊಠಡಿಗಳು (18 ರೂಂಗಳು) ಹಾಗೂ 6 ಕಾಟೇಜ್‌ಗಳನ್ನು ನವೀಕರಿಸಲಾಗುತ್ತಿದೆ. ಹಿಮದ ವಾತಾವರಣದಿಂದಾಗಿ ಈ ಕೊಠಡಿಗಳ ಛಾವಣಿ ಹಾಳಾಗಿತ್ತು. ಇವುಗಳನ್ನು ಇದೀಗ ದುರಸ್ತಿಗೊಳಿಸಲಾಗುತ್ತಿದೆ. ಅತಿಥಿಗೃಹಗಳ ನವೀಕರಣಕ್ಕೆ .2 ಕೋಟಿ ಅನುದಾನವನ್ನು ತೋಟಗಾರಿಕೆ ಇಲಾಖೆಯ ಸುವರ್ಣ ಉದ್ಯಾನಗಳ ಟ್ರಸ್ಟ್‌ ಅಡಿ ಭರಿಸಲಾಗಿದೆ. ಕಾಮಗಾರಿ ಜುಲೈನಲ್ಲಿ ಆರಂಭವಾಗಿದ್ದು, ಜನವರಿ 15ರ ಅಂತ್ಯದ ವೇಳೆಗೆ ಎಂದು ರಮೇಶ್‌ ಮಾಹಿತಿ ನೀಡಿದ್ದಾರೆ.


ಬೆಲೆ ವಿವರ    ಈಗಿರುವ ಮೊತ್ತ    ಹೆಚ್ಚ​ಳ (ರು.ಗಳಲ್ಲಿ)

ವಯಸ್ಕರು    10    20

ದ್ವಿ ಚಕ್ರವಾಹನ    20    30

ಬೆಳಗ್ಗೆ 6ರಿಂದ ಸಂಜೆ 6ರವರೆಗೆ ದ್ವಿಚಕ್ರವಾಹನದ ಜೊತೆಗೆ ಒಬ್ಬ ವ್ಯಕ್ತಿ    40    50

ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ದ್ವಿಚಕ್ರವಾಹನದ ಜೊತೆಗೆ ಇಬ್ಬರು ವ್ಯಕ್ತಿಗಳಿಗೆ    60    70

ನಾಲ್ಕು ಆಸನ ಸಾಮರ್ಥ್ಯದ ಕಾರು ಪಾರ್ಕಿಂಗ್‌ ಬಳಿ    100    125

ನಾಲ್ಕು ಆಸನ ಸಾಮರ್ಥ್ಯದ ಕಾರು ಬೆಟ್ಟದ ಮೇಲೆ ಪ್ರವೇಶಿಸಿದರೆ    150    175

ಐದು ಆಸನಕ್ಕೂ ಮೇಲ್ಪಟ್ಟಕಾರುಗಳು    130    150

ಐದು ಆಸನಕ್ಕೂ ಮೇಲ್ಪಟ್ಟಕಾರು ಬೆಟ್ಟದ ಮೇಲೆ ಪ್ರವೇಶಿಸಿದರೆ    150    175

ಆಟೋ ಪಾರ್ಕಿಂಗ್‌ ಬಳಿ    50    70

ಆಟೋ ಬೆಟ್ಟದ ಮೇಲೆ ಪ್ರವೇಶಿಸಿದರೆ    60    80

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅತಿ ಕಡಿಮೆ ದುಡ್ಡಿನಲ್ಲಿ ಮನೆಯಲ್ಲಿ ಕೂತು ಸೀರೆ ಇತ್ಯಾದಿಗಳನ್ನು Online ಮಾರಾಟ ಮಾಡೋದು ಹೇಗೆ?
ಅಕ್ರಮ ಸಂಬಂಧ ನೋಡಿದ ಮಾವ; ಪ್ರಿಯಕರನೊಂದಿಗೆ ಸೇರಿ ನಡು ರಸ್ತೆಯಲ್ಲಿ ಮಾವನಿಗೆ ಬೆಂಕಿ ಹಚ್ಚಿದ ಸೊಸೆ!