IAS ಅಭ್ಯರ್ಥಿಗಳಿಗೆ ಕಹಿ: ಪರೀಕ್ಷೆ ಮತ್ತು ನೇಮಕಾತಿಯಲ್ಲಿ ವ್ಯಾಪಕ ಬದಲಾವಣೆ?

By Web DeskFirst Published Dec 21, 2018, 9:02 AM IST
Highlights

ನಾಗರಿಕ ಸೇವೆ ಪರೀಕ್ಷೆ ಹಾಗೂ ನೇಮಕಾತಿಯಲ್ಲಿ ಕೆಲ ಮಹತ್ವದ ಬದಲಾವಣೆ ಮಾಡುವಂತೆ ಸರ್ಕಾರಕ್ಕೆ ನೀತಿ ಆಯೋಗದ ಸಲಹೆ ನೀಡಿದೆ.

ನವದೆಹಲಿ[ಡಿ.21]: ನಾಗರಿಕ ಸೇವೆ (ಸಿವಿಲ್‌ ಸರ್ವೀಸ್‌) ಪರೀಕ್ಷೆಗಳು ಹಾಗೂ ನೇಮಕಾತಿಯಲ್ಲಿ ವ್ಯಾಪಕ ಬದಲಾವಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನೀತಿ ಆಯೋಗ ಸಲಹೆಗಳನ್ನು ನೀಡಿದೆ.

ಐಎಎಸ್‌ನಂತಹ ನಾಗರಿಕ ಸೇವಾ ಹುದ್ದೆಗಳಿಗೆ ಸೇರಿಕೊಳ್ಳಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಈಗ ಇರುವ ಗರಿಷ್ಠ ವಯೋಮಿತಿಯನ್ನು 30ರಿಂದ 27ಕ್ಕೆ ಇಳಿಸುವಂತೆ ನೀತಿ ಆಯೋಗವು ಸರ್ಕಾರಕ್ಕೆ ಸಲಹೆ ಮಾಡಿದೆ. 2022-23ರವರೆಗೆ ಹಂತಹಂತವಾಗಿ ಈ ಯೋಜನೆ ಜಾರಿಗೊಳಿಸುವಂತೆ ಅದು ಸಲಹೆ ನೀಡಿದೆ.

‘75 ವರ್ಷ ತುಂಬಲಿರುವ ಭಾರತಕ್ಕೆ ರಣನೀತಿ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿರುವ ನೀತಿ ಆಯೋಗ ಅದರಲ್ಲಿ ಈ ಅಂಶವನ್ನು ಒತ್ತಿ ಹೇಳಿದೆ.

ಇದೇ ವೇಳೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ 60ಕ್ಕೂ ಹೆಚ್ಚು ಸಿವಿಲ್‌ ಸವೀರ್‍ಸ್‌ಗಳು ಇದ್ದು, ಅವುಗಳ ಸಂಖ್ಯೆ ಕಡಿಮೆಗೊಳಿಸುವಂತೆ ಕೂಡ ಅದು ಒತ್ತಾಯಿಸಿದೆ.

ನೇಮಕಗೊಂಡ ಅಭ್ಯರ್ಥಿಗಳನ್ನು ಮೊದಲು ಕೇಂದ್ರದ ಪಟ್ಟಿಯಲ್ಲಿ ಇರಿಸಬೇಕು. ಅವರ ಕ್ಷಮತೆಯನ್ನು ಆಧರಿಸಿ ಬೇರೆಬೇರೆ ಸೇವೆಗಳಿಗೆ ಹಂಚಬೇಕು. ಅಂತೆಯೇ ಸಿವಿಲ್‌ ಸವೀರ್‍ಸ್‌ ಪರೀಕ್ಷೆಗಳ ಸಂಖ್ಯೆಗಳನ್ನು ಇಳಿಸಿ ಎಲ್ಲವನ್ನೂ ಆಲ್‌-ಇಂಡಿಯಾ ರಾರ‍ಯಂಕಿಂಗ್‌ಗೆ ಒಳಪಡಿಸಬೇಕು. ರಾಜ್ಯಗಳು ಈ ಮೂಲಕವೇ ನೇಮಕ ಮಾಡಿಕೊಳ್ಳುವಂತೆ ಆಗಬೇಕು ಎಂದು ಅದು ಶಿಫಾರಸಿನಲ್ಲಿ ತಿಳಿಸಿದೆ.

click me!