ಸರ್ಕಾರಿ ಬ್ಯಾಂಕ್‌ಗಳಿಗೆ 83,000 ಕೋಟಿ!

By Web DeskFirst Published Dec 21, 2018, 8:55 AM IST
Highlights

ಪ್ರಸ್ತುತ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಇನ್ನೂ 83000 ಕೋಟಿ ರು. ಬಂಡವಾಳ ಹೂಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರಕಟಿಸಿದ್ದಾರೆ. 

ನವದೆಹಲಿ: ಪ್ರಸ್ತುತ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಇನ್ನೂ 83000 ಕೋಟಿ ರು. ಬಂಡವಾಳ ಹೂಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರಕಟಿಸಿದ್ದಾರೆ. 

ಕೆಲ ತಿಂಗಳ ಹಿಂದೆ ಸರ್ಕಾರ ಬ್ಯಾಂಕ್‌ಗಳಿಗೆ 65000 ಕೋಟಿ ರು. ಬಂಡವಾಳ ನೀಡುವುದಾಗಿ ಹೇಳಿತ್ತು.ಈ ಪೈಕಿ 23000 ಕೋಟಿ ರು.ಗಳನ್ನು ಈಗಾಗಲೇ ನೀಡಲಾಗಿದೆ. ಉಳಿದ 42000 ಕೋಟಿ ರು.ಗಳನ್ನು ಶೀಘ್ರವೇ ನೀಡಲಾಗುತ್ತದೆ. 

ಇದರ ಜೊತೆಗೆ ಹೆಚ್ಚುವರಿಯಾಗಿ 41000 ಕೋಟಿ ರು. ನೀಡಲು ಉದ್ದೇಶಿಸಲಾಗಿದೆ. ಇದರೊಂದಿಗೆ ಪ್ರಸಕ್ತ ವರ್ಷದಲ್ಲಿ ಬ್ಯಾಂಕ್‌ಗಳಿಗೆ ಒಟ್ಟಾರೆ 1.06 ಲಕ್ಷ ಕೋಟಿ ರು. ಬಂಡವಾಳ ಒದಗಿಸಿದಂತೆ ಆಗುತ್ತದೆ ಎಂದು ಹೇಳಿದ್ದಾರೆ. ಈ ಹೆಚ್ಚುವರಿ ಹಣಕ್ಕೆ ಸರ್ಕಾರ ಗುರುವಾರ ಸಂಸತ್ತಿನ ಅನುಮೋದನೆ ಕೋರಿದೆ.

click me!