ಉಗ್ರರ ದಾಳಿ ಭೀತಿಗೆ ದೆಹಲಿ ಹೈ ಅಲರ್ಟ್, BSYಗೆ ಕಾಂಗ್ರೆಸ್ ಸಪೋರ್ಟ್; ಜು.20ರ ಟಾಪ್ 10 ಸುದ್ದಿ!

By Suvarna NewsFirst Published Jul 20, 2021, 4:46 PM IST
Highlights

ಸ್ವಾತಂತ್ರ್ಯ ದಿನಾಚರಣೆ  ಗುರಯಾಗಿಸಿ ದೆಹಲಿಯಲ್ಲಿ ಉಗ್ರರ ದಾಳಿ ಸಾಧ್ಯತೆ ಕುರಿತು ಎಚ್ಚರಿಕೆ ನೀಡಲಾಗಿದೆ. ಪೆಗಾಸಸ್ ಬಳಿಕ ಛತ್ತೀಸ್‌ಗಢ ಫೋನ್ ಟ್ಯಾಪಿಂಗ್ ಸದ್ದು ಮಾಡುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ 2.11 ಕೋಟಿ ಲಸಿಕೆ ಬಳಕೆಯಾಗದೆ ಉಳಿದಿದೆ. ಯಡಿಯೂರಪ್ಪಗೆ ಇದೀಗ ಕಾಂಗ್ರೆಸ್ ಮುಖಂಡರು ಬೆಂಬಲ ನೀಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಸೆಕ್ಸ್‌ಗೆ ನಿಷೇಧ, ಇಂಧನ ತೆರಿಗೆಯಿಂದ ಕೇಂದ್ರಕ್ಕೆ 3.35 ಲಕ್ಷ ಕೋಟಿ ಆದಾಯ ಸೇರಿದಂತೆ ಜುಲೈ 20ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

75ನೇ ಸ್ವಾತಂತ್ರ್ಯ ದಿನಾಚರಣೆ ಗುರಿಯಾಗಿಸಿ ಉಗ್ರರ ದಾಳಿ ಸಾಧ್ಯತೆ; ದೆಹಲಿಯಲ್ಲಿ ಹೈಅಲರ್ಟ್!

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಹಲವು ವಿಶೇಷತೆಗಳಿವೆ. ಆಗಸ್ಟ್ 15 ರಂದು ಭಾರತ 75ನೇ ಸ್ವಾತಂತ್ರ್ಯ ದಿನಾಚರಿಸಲಿದೆ. ಈಗಾಗಲೇ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿ ಎಂದಿನಂತೆ ದೇಶವನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ಆದರೆ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಮೇಲೆ ಉಗ್ರರ ಕರಿನೆರೆಳು ಬಿದ್ದಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಡಿಫೆನ್ಸ್ ಲ್ಯಾಂಡ್ ಮಾರಾಟಕ್ಕೆ ಅವಕಾಶ: 250 ವರ್ಷ ಹಿಂದಿನ ಕಾನೂನು ಬದಲಾವಣೆಗೆ ಸಿದ್ಧತೆ!

ರಕ್ಷಣಾ ಪಡೆಯ ಭೂ ನೀತಿಯಲ್ಲಿ ಕೇಂದ್ರ ಸರ್ಕಾರ ಪ್ರಮುಖ ಬದಲಾವಣೆಗಳನ್ನು ಮಾಡಲಿದೆ. 250 ವರ್ಷಗಳ ಹಳೆಯ ನೀತಿಯನ್ನು ಬದಲಾಯಿಸಿ ಹೊಸ ನಿಯಮಗಳನ್ನು ಅಂಗೀಕರಿಸಲು ಸಿದ್ಧತೆ ನಡೆಸಿದೆ. ಹೊಸ ಬದಲಾವಣೆಗಳ ಬಳಿಕ, ಸೇನಾ ಭೂಮಿಯನ್ನು ಸಾರ್ವಜನಿಕ ಯೋಜನೆಗಳಿಗೆ ಕೂಡಾ ಬಳಸಬಹುದು. ರಕ್ಷಣಾ ಭೂಮಿಯನ್ನು ಪಡೆದು, ಅವರಿಗೆ ಅದೇ ಪ್ರಮಾಣದ ಭೂಮಿಯನ್ನು ಅಥವಾ ಆ ಜಮೀನಿಗೆ ಬದಲಾಗಿ ಪಾವತಿಸಬಹುದು.

ಪೆಗಾಸಸ್ ಬಳಿಕ ಛತ್ತೀಸ್‌ಗಢ ಫೋನ್ ಟ್ಯಾಪಿಂಗ್ ಸದ್ದು, ಗಾಂಧಿ ಕುಟುಂಬಕ್ಕೆ ಸವಾಲು!

ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಛತ್ತೀಸ್‌ಗಢದಲ್ಲಿ ನಡೆದ, ಅಕ್ರಮ ಫೋನ್ ಟ್ಯಾಪಿಂಗ್ ಪ್ರಕರಣದ ವಿಚಾರ ಸದ್ದು ಮಾಡುತ್ತಿದೆ. ಅಲೋಕ್ ಭಟ್ ಎಂಬವರು 2019 ರಲ್ಲಿ ವಿವಾದ ಸೃಷ್ಟಿಸಿದ್ದ ಛತ್ತೀಸ್‌ಗಢದ ಫೋನ್ ಟ್ಯಾಪಿಂಗ್ ಪ್ರಕರಣದ ಬಗ್ಗೆ ಟ್ವೀಟ್ ಮಾಡಿ ಸೋನಿಯಾ ಮತ್ತು ರಾಹುಲ್ ಗಾಂಧಿಗೆ ಸವಾಲೆಸೆದಿದ್ದಾರೆ.

ಬಿಎಸ್‌ವೈ ಬದಲಾವಣೆ ವಿಚಾರ : ಕಾಂಗ್ರೆಸ್ ಮುಖಂಡರಿಂದಲೂ ಸಿಎಂಗೆ ಸಪೋರ್ಟ್

ಬಿಎಸ್ವೈ ಬದಲಾವಣೆ ಕೂಗು ಜೋರಾಗಿದೆ. ಇದೇ ವೇಳೆ ಲಿಂಗಾಯತ ಸಮುದಾಯವೇ ಸಿಡಿದೆದ್ದಿದೆ. ನಾಯಕತ್ವ ಬದಲಾವಣೆ ಆದರೆ ಸರ್ವನಾಶ ಆಗಲಿದೆ ಎಂದು ಎಚ್ಚರಿಸಿದ್ದಾರೆ. ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಎಂ.ಬಿ.ಪಾಟೀಲ್ ಹಾಗೂ ಶಾಮನೂರು ಶಿವಶಂಕರಪ್ಪ ಸೆರಿದಂತೆ ಪಕ್ಷಾತೀತವಾಗಿ ಬೆಂಬಲ ದೊರಕದೆ. 

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಕ್ಸ್‌ಗೆ ನಿಷೇಧ..!

 ಜಪಾನ್‌ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಸುರಕ್ಷಿತವಾಗಿ ಟೋಕಿಯೋ ಒಲಿಂಪಿಕ್ಸ್‌ ಆಯೋಜಿಸಲು ಹಗಲು-ರಾತ್ರಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್‌ ಆತಂಕವನ್ನು ದೂರಾಗಿಸಿ ಯಶಸ್ವಿಯಾಗಿ ಕ್ರೀಡಾಕೂಟ ನಡೆಸುವುದು ಜಪಾನ್‌ ಹಾಗೂ ಐಒಸಿಯ ಗುರಿಯಾಗಿದೆ. ಇದಕ್ಕಾಗಿ ಪರಿಸ್ಥಿತಿಗೆ ತಕ್ಕಂತೆ ನಿಯಮಗಳನ್ನು ಬದಲಿಸುತ್ತ, ಹೊಸ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

ಮತ್ತೆ ಅಂತರಿಕ್ಷ ಸಾಹಸ: ಜೆಫ್‌ ಬೆಜೋಸ್‌ ಗಗನಯಾನ!

ಉದ್ಯಮಿ ರಿಚರ್ಡ್‌ ಬ್ರಾನ್ಸನ್‌ ತಮ್ಮ ವರ್ಜಿನ್‌ ಗ್ಯಾಲಾಕ್ಟಿಕ್‌ ನೌಕೆಯ ಮೂಲಕ ಬಾಹ್ಯಾಕಾಶ ಯಾನ ಮಾಡಿ ಬಂದ ಬೆನ್ನಲ್ಲೇ, ಮಂಗಳವಾರ ವಿಶ್ವದ ಶ್ರೀಮಂತ ವ್ಯಕ್ತಿ, ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಮಂಗಳವಾರ ತಮ್ಮ ಮೊಟ್ಟಮೊದಲ ಬಾಹ್ಯಾಕಾಶ ಯಾನಕ್ಕೆ ಮುನ್ನುಡಿ ಬರೆಯಲಿದ್ದಾರೆ. ಇದು ರಾಕೆಟ್‌ ಮೂಲಕ ವಾಣಿಜ್ಯ ಉದ್ದೇಶದಿಂದ ಬಾಹ್ಯಾಕಾಶಕ್ಕೆ ಕೈಗೊಳ್ಳುತ್ತಿರುವ ಮೊದಲ ಉಡ್ಡಯನವಾಗಿದೆ.

ಪೆಟ್ರೋಲ್‌, ಡೀಸೆಲ್‌ ತೆರಿಗೆಯಿಂದ ಕೇಂದ್ರಕ್ಕೆ 3.35 ಲಕ್ಷ ಕೋಟಿ ಆದಾಯ!

 ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ ನಂತರ ಕೇಂದ್ರ ಸರ್ಕಾರಕ್ಕೆ 2020-21ನೇ ವಿತ್ತೀಯ ವರ್ಷದಲ್ಲಿ 3.35 ಲಕ್ಷ ಕೋಟಿ ರು. ಆದಾಯ ಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಎರಡು ತೈಲೋತ್ಪನ್ನಗಳ ತೆರಿಗೆ ಸಂಗ್ರಹ ಶೇ.88ರಷ್ಟುಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರವೇ ಲೋಕಸಭೆಗೆ ಸೋಮವಾರ ಈ ಮಾಹಿತಿ ನೀಡಿದೆ.

ಎಲೆಕ್ಟ್ರಿಕ್ ದ್ವಿಚಕ್ರವಾಹನ ಖರೀದಿಸಿದರೆ ಸ್ಟೇಟ್ GST ರಿಫಂಡ್!

ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸುತ್ತಿವೆ. ಈ ಸಾಲಿಗೆ ಹೊಸದಾಗಿ ರಾಜಸ್ಥಾನ ಸರ್ಕಾರವು ಸೇರಿದೆ. ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರವಾಹನಗಳ ಖರೀದಿಸುವ ಗ್ರಾಹಕರಿಗೆ ಸರ್ಕಾರವು ಸ್ಟೇಟ್ ಜಿಎಸ್‌ಟಿಯನ್ನು ಮರುಪಾವತಿಸುವ ಯೋಜನೆಯನ್ನು ಪ್ರಕಟಿಸಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿದೆ 2.11 ಕೋಟಿ ಲಸಿಕೆ!

ಕೊರೋನಾ ವೈರಸ್ ವಿರುದ್ಧ ದೇಶದಲ್ಲಿ ಪರಿಣಾಮಕಾರಿಯಾಗಿ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಜನವರಿ 16 ರಂದು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.  ಜೂನ್ 21 ರಿಂದ ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುತ್ತಿದೆ. ಇದರ ಪರಿಣಾಮ ಖಾಸಗಿ ಆಸ್ಪತ್ರೆಗಳಲ್ಲಿನ ಲಸಿಕಾ ಅಭಿಯಾನದ ಬೇಡಿಕೆ ಕಡಿಮೆಯಾಗಿದೆ. ಇದರಿಂದ ದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಬರೋಬ್ಬರಿ 2.11 ಕೋಟಿ ಲಸಿಕೆ ಬಳಕೆಯಾಗದೇ ಉಳಿದುಕೊಂಡಿದೆ.

click me!