
ಬೆಳಗಾವಿ[ಸೆ.06]: ನಾಳೆ ಬೆಳಗಾವಿ ಪಿ ಎಲ್ ಡಿ ಬ್ಯಾಂಕ್ ಚುನಾವಣಾ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಬೆಂಬಲಿತ 9 ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರನ್ನು ಗೌಪ್ಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
"
ಮಹಾಂತೇಶ ಪಾಟೀಲ, ಮುಷಪ್ಪ ಹಟ್ಟಿ, ಬಾಪುಸಾಹೇಬ್ ಜಮಾದಾರ್,ಚಿದಂಬರ ಕುಡಚಿ, ಬಾಪುಗೌಡ ಪಾಟೀಲ, ಪರುಶರಾಮ ಪಾಟೀಲ, ಮಹಾದೇವ
ಪಾಟೀಲ,ರೇಖಾ ಕುತ್ರೆ,ಗೀತಾ ಪಿಂಗಟ್ ಸ್ಥಳಾಂತರಗೊಂಡ ನಿರ್ದೇಶಕರು.
"
14 ನಿರ್ದೇಶಕರಿರುವ ಪಿ ಎಲ್ ಡಿ ಬ್ಯಾಂಕಿನಲ್ಲಿ ಸತೀಶ್ ಜಾರಕಿಹೊಳಿ ಪರ ರಾಮಪ್ಪ ಗೋಳಿ, ಪ್ರಸಾದ ಪಾಟೀಲ, ಸಚಿನ ಕೋಲಾರ, ಶಂಕರ ನಾವಗೆಕರ, ಮಾಂತೇಶ ಉಳ್ಳಾಗಡ್ಡಿ ಇದ್ದಾರೆ. ನಾಳೆ ಬೆಳಗ್ಗೆ 6 ರಿಂದ ಸಂಜೆ 8 ವರೆಗೆ ಚುನಾವಣಾ ನಡೆಯಲಿದ್ದು ಚುನಾವಣಾ ಸ್ಥಳದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಸೂಕ್ತ ಭದ್ರತೆ ಒದಗಿಸಲಾಗಿದ್ದು, ಎಲ್ಲ ನಿರ್ದೇಶಕರು ನಾಳೆ ಚುನಾವಣಾ ಸಮಯಕ್ಕೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ಆಯುಕ್ತರಾದ ಡಿ.ಸಿ.ರಾಜಪ್ಪ ತಿಳಿಸಿದ್ದಾರೆ. ಪಿ ಎಲ್ ಡಿ ಚುನಾವಣೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ.
"
ಈ ಸುದ್ದಿಯನ್ನು ಓದಿ: ಬೆಳಗಾವಿ ಪಾಲಿಟಿಕ್ಸ್, ಏನು ಫಿಕ್ಸ್, ಏನು ಮಿಕ್ಸ್?: ಇಲ್ಲಿದೆ ಡಿಟೇಲ್ಸ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.