ಗುಂಟೂರು ಮತ್ತು ಹೈದರಾಬಾದ್ ನಲ್ಲಿ ಮುಂದುವರೆದ ಮಳೆಯ ರೌದ್ರಾವತಾರ

By Internet DeskFirst Published Sep 24, 2016, 12:45 PM IST
Highlights

ಆಂಧ್ರಪ್ರದೇಶ (ಸೆ.24): ಗುಂಟೂರು ಮತ್ತು ಹೈದರಾಬಾದ್ ಜಿಲ್ಲೆಯಲ್ಲಿ ಮಳೆಯ ರೌದ್ರಾವತಾರ ಇಂದು ಸಹ ಮುಂದುವರೆದಿದೆ.

ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ್ದು, ಪ್ರವಾಹ ಭೀತಿ ಎದುರಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದ 5 ಸಾವಿರಕ್ಕೂ ಹೆಚ್ಚು ಜನರನ್ನ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿದವರನ್ನ ರಕ್ಷಿಸಲು ಎನ್‍ಡಿಆರ್‍ಎಫ್ ಸೇನೆ ಹರಸಾಹಸ ಪಡುತ್ತಿದೆ.

Latest Videos

ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ನಗರದ ರಸ್ತೆಗಳು ಸೇರಿದಂತೆ, ರೈಲ್ವೆ  ಹಳಿಗಳು ಕೂಡ ಜಲಾವೃತಗೊಂಡಿದ್ದು ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಕಳೆದ 16 ವರ್ಷಗಳ ನಂತರ ಇದು ದಾಖಲೆಯ ಮಳೆಯಾಗಿದೆ.

ಹೈದರಾಬಾದ್ ಹಾಗೂ ರಂಗ ರೆಡ್ಡಿ ಜಿಲ್ಲೆಯ ಎಲ್ಲ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

click me!