ಉರಿಗಾಗಿ ಪಾಕ್ ವಿರುದ್ಧ ತಿರುಗಿ ಬಿದ್ದ ರಷ್ಯಾ: ಸಮರಾಭ್ಯಾಸ ರದ್ದು

By Internet DeskFirst Published Sep 24, 2016, 11:57 AM IST
Highlights

ನವದೆಹಲಿ(ಸೆ.24): ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ದನಿ ಎತ್ತಿದ ಪರಿಣಾಮ ರಷ್ಯಾವು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್'ನಲ್ಲಿ  ಜಂಟಿ ಸಮರಾಭ್ಯಾಸವನ್ನು ರದ್ದುಪಡಿಸಿದೆ. ಕೇವಲ ಪೇಶಾವರದ ಚರಾಟ್ ಮಾತ್ರ ಜಂಟಿ ಸಮರಾಭ್ಯಾಸ ನಡೆಸಲು ನಿರ್ಧರಿಸಿದೆ.

ರಷ್ಯಾ ಸಹ ಪಾಕ್ ಸೇನಾ ನೆರವಿನಿಂದ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಡೆಸಿರುವ ದಾಳಿಯನ್ನು ತೀರ್ವವಾಗಿ ಖಂಡಿಸಿದೆ. ಭಾರತವು ಸಹ ಹಲವು ವರ್ಷಗಳಿಂದ ರಷ್ಯಾದ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದೆ.  ಮುಂದಿನ ತಿಂಗಳು ಅಕ್ಟೋಬರ್ 15 ರಂದು ಭಾರತ ಮತ್ತು ರಷ್ಯಾ ನಡುವೆ ವಾರ್ಷಿಕ ಶೃಂಗಸಭೆ ನಡೆಯಲಿದೆ. ಈ ಶೃಂಗಸಭೆಯಲ್ಲಿ ಐದನೇ ಪೀಳಿಗೆಯ ಯುದ್ಧ ಜೆಟ್'ಗಳ ಖರೀದಿಗೆ ಪ್ರಮುಖ ಒಪ್ಪಂದವಾಗುವ ಸಂಭವವಿದೆ.

Latest Videos

ರಷ್ಯಾ ನೆರವಿನ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ನೂತನ ಪರಮಾಣು ವಿದ್ಯುತ್ ಸ್ಥಾವರ ನಿರ್ಮಿಸುವುದಕ್ಕೆ 2 ದೇಶಗಳು ನಡುವೆ ಒಪ್ಪಂದವಾಗುವ ನಿರೀಕ್ಷೆಯಿದೆ.

click me!