ಕರ್ನಾಟಕ, ಕೇರಳಕ್ಕೆ ಮತ್ತೊಂದು ಶಾಕಿಂಗ್ ನ್ಯೂಸ್

By Kannadaprabha NewsFirst Published Aug 18, 2018, 12:33 PM IST
Highlights

ಮುನಿಸಿಕೊಂಡಿರುವ ನಿಸರ್ಗ ಸದ್ಯಕ್ಕೆ ಶಾಂತವಾಗುವಂತೆ ಕಾಣುತ್ತಿಲ್ಲ. ಕೇರಳ ಮತ್ತು ಕರ್ನಾಟಕದಲ್ಲಿ ಈ ವಾರದ ಅಂತ್ಯದಲ್ಲೂ ಭಾರೀ ಮಳೆಯಾಗಲಿದೆ ಎಂದಿ ಎಂದು ಹವಾಮಾನ  ಇಲಾಖೆ ತಿಳಿಸಿದೆ.

ಚೆನ್ನೈ[ಆ.18]  ಈಗಾಗಲೇ ಸತತ ಭೀಕರ ಮಳೆಯಿಂದ ತತ್ತರಿಸಿರುವ ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಮುಂಗಾರು ಕೇರಳದಲ್ಲಿ ಬಿರುಸಿನಿಂದ ಕೂಡಿದೆ ಮತ್ತು ತೆಲಂಗಾಣ, ಲಕ್ಷದ್ವೀಪ, ಕರಾವಳಿ ಕರ್ನಾಟಕ, ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿದೆ ಎಂದು ಪ್ರಾದೇಶಿಕ ಹವಾಮಾನ ಕಚೇರಿ ಮೂಲಗಳು ತಿಳಿಸಿವೆ. ಕರಾವಳಿ ಕರ್ನಾಟಕದಲ್ಲಿ ಶನಿವಾರ ಹಾಗೂ ಭಾನುವಾರವೂ ಭೀಕರ ಮಳೆ ಮುಂದುವರಿಯಲಿದೆ. ಇನ್ನುಳಿದಂತೆ ಕೇರಳ, ಲಕ್ಷದ್ವೀಪ, ಕರ್ನಾಟಕದ ದಕ್ಷಿಣ ಒಳನಾಡು, ತೆಲಂಗಾಣ, ತಮಿಳುನಾಡಿನಲ್ಲೂ ಭಾರೀ ಮಳೆಯಾಗಲಿದೆ.

ಮಳೆ ಬಂದರೆ ಕೊಡಗು, ದಕ್ಷಿಣ ಕನ್ನಡದಲ್ಲಿ ಭೂಮಿ ಏಕೆ ಕುಸಿಯುತ್ತೆ?

ಕೇರಳದಲ್ಲಿ 400ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದು ಕೊಡಗಿನಲ್ಲಿಯೂ ವರುಣನ ಆರ್ಭಟವಿದೆ. ಒಂದು ಕಡೆ ಮಳೆ ಹಾನಿ ಪರಿಹಾರಕ್ಕೆ ಸರಕಾರಗಳು, ಆಡಳಿತ, ಜನರು, ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸುತ್ತಿವೆ. ಆದರೆ ಮುನಿಸಿಕೊಂಡಿರುವ ನಿಸರ್ಗ ಸದ್ಯಕ್ಕೆ ಶಾಂತವಾಗುವ ಲಕ್ಷಣ ಕಾಣುತ್ತಿಲ್ಲ.

click me!