
ಕ್ಯಾನ್ಬೆರಾ[ಏ.22]: ಓರ್ವ ಅನಾಥ ವ್ಯಕ್ತಿ ಸಾಕಿದ್ದ ಇಲಿ ಮರಿ ಇದ್ದಕ್ಕಿದ್ದಂತೆ ನಪತ್ತೆಯಾಗಿತ್ತು. ಇದರಿಂದ ಚಿಂತೆಗೀಡಾದ ಆ ವೃದ್ಧ ಮುದ್ದಿನ ಇಲಿಯ ಹುಡುಕಾಟ ಆರಂಭಿಸಿದ್ದ. ಇದನ್ನು ಗಮನಿಸಿದ ಪೊಲೀಸರು ಕೊನೆಗೂ ಆ ವೃದ್ಧ ಸಾಕಿದ್ದ ಇಲಿ ಮರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ವೃದ್ಧನಿಗೆ ತಲುಪಿಸಿದ್ದಾರೆ. ತನ್ನ ಮುದ್ದಿನ ಇಲಿ ಮರಿಯನ್ನು ಕಂಡ ಆ ವೃದ್ಧನ ಖುಷಿ ಹೇಳತೀರದು. ಸದ್ಯ ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಆಸ್ಟ್ರೇಲಿಯಾದ ನ್ಯೂ ಸೌತ್ ವೆಲ್ಸ್ ಪೊಲೀಸರು ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ಅನಾಥ ವೃದ್ಧ ಸಾಕಿದ್ದ ಇಲಿ ಮರಿ ಕಳೆದ ಒಂದು ವಾರದಿಂದ ನಾಪತ್ತೆಯಾಗಿತ್ತು. ಸದ್ಯ ಇದನ್ನು ಪತ್ತೆ ಹಚ್ಚಿದ್ದೇವೆ ಎಂದು ಪೊಲೀಸರು ಬರೆದುಕೊಂಡಿದ್ದಾರೆ.
ಈ ಘಟನೆ ಏಪ್ರಿಲ್ 6ರಂದು ನಡೆದಿದೆ. ಮಧ್ಯಾಹ್ನ ಸುಮಾರು 2 ಗಂಟೆಗೆ ಅನಾಥ ವೃದ್ಧ ತಾನು ಸಾಕಿದ್ದ ಇಲಿ ಮರಿಯನ್ನು ಬಾಕ್ಸ್ ಒಂದರಲ್ಲಿ ಹಾಕಿ ನಡೆದುಕೊಂಡು ಹೋಗುತ್ತಿದ್ದ. ಹೀಗಿರುವಾಗ ದಾರಿ ಮಧ್ಯೆ ಸಾಕು ಇಲಿಯನ್ನು ರಸ್ತೆ ಬದಿಯಲ್ಲಿಟ್ಟು, ಶೌಚಾಲಯಕ್ಕೆ ತೆರಳಿದ್ದಾನೆ. ಇದೇ ವೇಳೆ ರಸ್ತೆ ಬರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಆ ಇಲಿಯನ್ನು ನೋಡಿದ್ದಾಳೆ. ಯಾರೋ ಇಲಿಯನ್ನು ಬೇಕೆಂದೇ ಬಿಟ್ಟು ಹೋಗಿದ್ದಾರೆಂದು ತನ್ನ ಮನೆಗೆ ಕರೆದೊಯ್ದಿದ್ದಾಳೆ. ಇತ್ತ ವೃದ್ಧ ಹೊರ ಬಂದಾಗ ತನ್ನ ಸಾಕು ಇಲಿ ನಾಪತ್ತೆಯಾಗಿರುವುದನ್ನು ಕಂಡು ಪೊಲೀಸ್ ಠಾಣೆಗೆ ತೆರಳಿದ್ದಾರೆ ಹಾಗೂ ತಾವೂ ಹುಡುಕಾಟ ಆರಂಭಿಸಿದ್ದಾರೆ.
'ಇಲಿಯನ್ನು ಪತ್ತೆ ಹಚ್ಚಿದ ಶ್ರೇಯಸ್ಸು ನಮ್ಮ ಫೇಸ್ ಬುಕ್ ಖಾತೆಯ ಫಾಲೋವರ್ಸ್ ಗೆ ಸಲ್ಲಬೇಕು. ಇವರೇ ಈ ಸಾಕು ಇಲಿ ತನ್ನ ಮಾಲೀಕನ ಮಡಿಲು ಸೇರುವಂತೆ ಮಾಡಿದ್ದು' ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.