
ಬೆಂಗಳೂರು(ಏ.22): ಸುಮಾರು 84 ಲಕ್ಷಕ್ಕೂ ಅಧಿಕ ಜೀವರಾಶಿಗಳ ಆವಾಸ ಸ್ಥಾನವಾಗಿರುವ ವಸುಧೆಯನ್ನು, ಮಾನವ ಎಂಬ ಜೀವಿ ಹಾನಿ ಮಾಡುವಷ್ಟು ಮತ್ತಿನ್ಯಾವ ಜೀವಿಯೂ ಮಾಡಲಾರದು.
ಇದಕ್ಕೆ ಶ್ರೀಲಂಕಾದಲ್ಲಿ ನಿನ್ನೆ ನಡೆದ ಬಾಂಬ್ ದಾಳಿಯೇ ಸಾಕ್ಷಿ. ಧರ್ಮ, ರಾಜಕೀಯ, ಅಧಿಕಾರದ ಅಮಲೇರಿಸಿಕೊಂಡಿರುವ ಮಾನವ, ತನ್ನ ಬುದ್ದಿಮತ್ತೆಯನ್ನು ಈ ಭೂಮಿಯನ್ನು ನಾಶ ಮಾಡಲೆಂದೇ ಬಳಸಿಕೊಳ್ಳುತ್ತಿದ್ದಾನೆ.
ಆದರೆ ಬಿಲಿಯಾಂತರ ವರ್ಷಗಳಿಂದ ತನ್ನನ್ನೇ ನಾಶ ಮಾಡುತ್ತಿರುವ ಮಾನವನನ್ನೂ ಸೇರಿದಂತೆ ಇತರೆಲ್ಲಾ ಜೀವಿಗಳನ್ನು ವಸುಧೆ ಸಲುಹುತ್ತಿದ್ದಾಳೆ. ಆಕೆಗೆ ತನ್ನ ರಕ್ಷಣೆಯ ಅರಿವಿದೆ.
ಅದರಂತೆ ಇಂದು ವಿಶ್ವ ಭೂ ದಿನ. ಜಗತ್ತಿನಾದ್ಯಂತ ಏಪ್ರಿಲ್ 22ನ್ನು ಭೂಮಿಯ ದಿನವನ್ನಗಿ ಆಚರಿಸಲಾಗುತ್ತಿದೆ. ಪರಿಸರ ರಕ್ಷಣೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗೂಗಲ್ ವಿಶೇಷ ಡೂಡಲ್ ಅರ್ಥ್ ಡೇ 2019 ಆಚರಿಸುತ್ತಿದೆ.
ಡೂಡಲ್ ನಲ್ಲಿ ಅಲೆಮಾರಿ ಕಡಲುಕೋಳಿ, ಕೋಸ್ಟರ್ ರೆಡ್ ವುಡ್, ಪೆಡೋಫ್ರೈನ್ ಅಮಾವೆನ್ಸಿಸ್, ಅಮೆಜಾನ್ ವಾಟರ್ ಲಿಲ್ಲಿ, ಕೋಲಾಕಂತ್ ಮತ್ತು ಡೀಪ್ ಕೇವ್ ಸ್ಟ್ರಿಂಗ್ ಟೇಲ್ ಹೆಸರಿನ ಅಪರೂಪದ ಜೀವಿಗಳನ್ನು ಚಿತ್ರಿಸಿದೆ. ಈ ಜೀವಿಗಳ ಬಗ್ಗೆ ಸಂಕ್ಷೀಪ್ತ ವಿವರಣೆಯನ್ನೂ ಡೂಡಲ್ ನಲ್ಲಿ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.