ವಿದ್ಯಾರ್ಥಿ ಮುಂದೆ ಮಂಡಿಯೂರಿದ ಹೆಡ್‌ಮಾಸ್ಟರ್‌!

By Suvarna Web DeskFirst Published Feb 7, 2018, 10:59 AM IST
Highlights

ಆಂಧ್ರದ ಪೋಲೀಸ್‌ ಅಧಿಕಾರಿ ಯೊಬ್ಬರು ರಸ್ತೆ ನಿಯಮ ಉಲ್ಲಂಘಿಸಿದ ಬೈಕ್‌ ಸವಾರನ ಮುಂದೆ ಕೈ ಜೋಡಿಸಿ ಮನವಿ ಮಾಡಿಕೊಂಡ ಫೋಟೋವೊಂದು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದೀಗ ತಮಿಳುನಾಡಿನಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಯ ಮುಂದೆ ಮಂಡಿಯೂರಿ ಕುಳಿತು ವಿದ್ಯಾಭ್ಯಾಸ ಮಾಡುವಂತೆ ಕೈಮುಗಿದು ಬೇಡುತ್ತಿರುವ ಫೋಟೋ ಭಾರೀ ವೈರಲ್‌ ಆಗಿದೆ. 

ಚೆನ್ನೈ (ಫೆ.07): ಆಂಧ್ರದ ಪೋಲೀಸ್‌ ಅಧಿಕಾರಿ ಯೊಬ್ಬರು ರಸ್ತೆ ನಿಯಮ ಉಲ್ಲಂಘಿಸಿದ ಬೈಕ್‌ ಸವಾರನ ಮುಂದೆ ಕೈ ಜೋಡಿಸಿ ಮನವಿ ಮಾಡಿಕೊಂಡ ಫೋಟೋವೊಂದು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದೀಗ ತಮಿಳುನಾಡಿನಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಯ ಮುಂದೆ ಮಂಡಿಯೂರಿ ಕುಳಿತು ವಿದ್ಯಾಭ್ಯಾಸ ಮಾಡುವಂತೆ ಕೈಮುಗಿದು ಬೇಡುತ್ತಿರುವ ಫೋಟೋ ಭಾರೀ ವೈರಲ್‌ ಆಗಿದೆ.

ತಮಿಳುನಾಡಿನ ವಿಲ್ಲುಪುರಂನಲ್ಲಿರುವ ಸರ್ಕಾರಿ ಪ್ರೌಢ ಶಾಲೆಯೊಂದರ ಮುಖ್ಯಶಿಕ್ಷಕ ಜಿ. ಬಾಲು ಎನ್ನುವವರು ತರಗತಿಗೆ ಹಾಜರಾಗದ ವಿದ್ಯಾರ್ಥಿಗಳ ಮನೆಗೆ ಸ್ವತಃ ತೆರಳಿ, ಶಾಲೆಗೆ ಆಗಮಿಸುವಂತೆ ಮತ್ತು ಉತ್ತಮ ವಿದ್ಯಾಭ್ಯಾಸ ಪಡೆಯುವಂತೆ ಕೈಮುಗಿದು ಬೇಡಿಕೊಂಡು ಅವರ ಮನವೊಲಿಸುತ್ತಿದ್ದಾರೆ. ಜ.24ರಂದು ವಿದ್ಯಾರ್ಥಿಯೊಬ್ಬನ ಮನಗೆ ತೆರಳಿ ಆತನ ಮುಂದೆ ಕೈಮುಗಿದು ಬೇಡುತ್ತಿರುವ ಚಿತ್ರ ಇದೀಗ ವೈರಲ್‌ ಆಗಿದೆ. ಮೂರು ವರ್ಷದ ಹಿಂದೆ ಬಾಲು ಅವರು ಇಂಥದ್ದೊಂದು ವಿನೂತನ ಕ್ರಮಕ್ಕೆ ಮುಂದಾಗಿದ್ದರು. ಇದುವರೆಗೆ ಅವರು 150 ವಿದ್ಯಾರ್ಥಿಗಳ ಮನೆಗೆ ಖುದ್ದಾಗಿ ತೆರಳಿ ವಿದ್ಯಾಭ್ಯಾಸ ಕೈಗೊಳ್ಳುವಂತೆ ಕೈಮುಗಿದು ಕೇಳಿಕೊಂಡಿದ್ದಾರೆ.

-ಸಾಂದರ್ಭಿಕ ಚಿತ್ರ

 

click me!