
ನವದೆಹಲಿ (ಫೆ.07): ದೇಶಾದ್ಯಂತ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಅಪೂರ್ಣ ಮಾಹಿತಿಯುಳ್ಳ 845 ಪುಟಗಳ ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೊರ್ಟ್, ಸರ್ವೋಚ್ಛ ನ್ಯಾಯಾಲಯ ‘ತ್ಯಾಜ್ಯ ಸಂಗ್ರಹಕಾರ’ ಅಲ್ಲ ಎಂದಿದೆ. ದೇಶಾದ್ಯಂತ ಘನ ತ್ಯಾಜ್ಯ ವಿಲೇವಾರಿ ನಿಯಮಗಳು 2016ರ ಜಾರಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ವೇಳೆ ಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದೆ. ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲು ಕೇಂದ್ರದ ನ್ಯಾಯವಾದಿ ಮುಂದಾದಾಗ, ನ್ಯಾ. ಬಿ. ಲೋಕುರ್ ಮತ್ತು ನ್ಯಾ. ದೀಪಕ್ ಗುಪ್ತಾ ನ್ಯಾಯಪೀಠ, ಅಫಿಡವಿಟ್ ಸ್ವೀಕರಿಸಲು ನಿರಾಕರಿಸಿತು.
‘ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ? ನಮ್ಮನ್ನು ಮೆಚ್ಚಿಸಲು ಯತ್ನಿಸುತ್ತಿದ್ದೀರಾ? ನಮಗೆ ಮೆಚ್ಚುಗೆಯಾಗಿಲ್ಲ. ನೀವು ಪ್ರತಿಯೊಂದನ್ನೂ ನಮ್ಮತ್ತ ಎಸೆಯಲು ನೋಡುತ್ತಿದ್ದೀರಿ. ನಾವು ಅದನ್ನು ಸ್ವೀಕರಿಸುತ್ತಿಲ್ಲ. ಈ ರೀತಿ ಮಾಡದಿರಿ. ಅನುಪಯುಕ್ತವಾದುದನ್ನು ನಮ್ಮ ಮುಂದೆ ಎಸೆಯುತ್ತಿದ್ದೀರಿ. ನಾವು ತ್ಯಾಜ್ಯ ಸಂಗ್ರಹಕಾರರಲ್ಲ, ಈ ಬಗ್ಗೆ ಸ್ಪಷ್ಟತೆಯಿರಲಿ’ ಎಂದು ಕೇಂದ್ರದ ಪರವಾಗಿ ಹಾಜರಾದ ನ್ಯಾಯವಾದಿ ವಸೀಂ ಎ. ಖಾದ್ರಿಯವರಿಗೆ ಕೋರ್ಟ್ ತಿಳಿಸಿತು.
2016ರ ನಿಯಮನುಸಾರ ರಾಜ್ಯ ಮಟ್ಟದ ಸಲಹಾ ಸಮಿತಿ ರಚಿಸಲಾಗಿದೆಯೇ? ಎಂಬ ಕುರಿತು ಮೂರು ವಾರಗಳೊಳಗೆ ವರದಿ ಸಲ್ಲಿಸುವಂತೆ ಕೋರ್ಟ್ ಸರ್ಕಾರಕ್ಕೆ ತಿಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.