
ಬೆಂಗಳೂರು(ಜು.31): ಅರಣ್ಯ ಸಚಿವ ರಮಾನಾಥ ರೈ ರಾಜ್ಯದ ಗೃಹ ಸಚಿವರಾಗುತ್ತಾರೆ ಎನ್ನಲಾಗುತ್ತಿದೆ. ಒಂದು ವೇಳೆ ಅವರು ಗೃಹ ಸಚಿವರಾದರೂ ಕೇವಲ ನಾಮ್ ಕೇ ವಾಸ್ತೆ ಆಗಿರುತ್ತಾರೆ. ಅವರ ಕೆಲಸ ಹೆಬ್ಬೆಟ್ಟು ಒತ್ತುವುದು ಮಾತ್ರ. ನಿಜವಾದ ಗೃಹ ಸಚಿವ ಮಾಜಿ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರೇ ಆಗಿರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ 45 ದಿನಗಳ 144 ಸೆಕ್ಷನ್ ವಿಧಿಸಲಾದ ಪ್ರಥಮ ಜಿಲ್ಲೆ ದಕ್ಷಿಣ ಕನ್ನಡ. ಅಂತಹ ಸಂದರ್ಭದಲ್ಲೂ ಮೌನವಾಗಿದ್ದ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಕರೆದು ಯಾರನ್ನು ಬಂಧಿಸಬೇಕು ಎಂದು ಆದೇಶಿಸಿ ವಿವಾದಕ್ಕೆ ಕಾರಣರಾಗಿದ್ದಾರೆ.
ಈಗ ಅವರನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಮಂತ್ರಿಯನ್ನಾಗಿ ಮಾಡಲು ಹೊರಟಿದ್ದಾರೆ. ಅಂದರೆ ಮಾಜಿ ಪೊಲೀಸ್ ಅಧಿಕಾರಿ ಕೆಂಪಯ್ಯ ಅಧಿಕಾರ ನಡೆಸಲಿದ್ದಾರೆ. ಸರ್ಕಾರಕ್ಕೆ ಕೆಂಪಯ್ಯ ಯಾಕೆ ಅನಿವಾರ್ಯ ಎಂಬುದನ್ನು ಸಿದ್ದರಾಮಯ್ಯ ಅವರೇ ಹೇಳಬೇಕು ಎಂದು ಹೇಳಿದರು.
ಗ್ರೆಸ್ ಮಾಡಿದ್ದನ್ನು ಉಣ್ಣುತ್ತಿದೆ:
ಬಿಜೆಪಿ ದೇಶದಾದ್ಯಂತ ಇತರೆ ಪಕ್ಷಗಳನ್ನು ನಾಶ ಮಾಡುತ್ತಿದೆ. ಆದರೆ ಈವರೆಗೆ ಸುಮ್ಮನಿದ್ದ ಕಾಂಗ್ರೆಸ್‌ಗೆ ಗುಜರಾತ್‌ನಲ್ಲಿ ಬಿಜೆಪಿಯಿಂದ ಅಪಾಯವಾದಾಗ ಎಚ್ಚರವಾಗುತ್ತಿದೆ. ಕಾಂಗ್ರೆಸ್ ಈಗ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದು ಮಾಡಿ ದ್ದುಣ್ಣೋ ಮಾರಾಯಾ ಎಂಬಂತಾಗಿದೆ ಎಂದು ಹೇಳಿದರು. ಈ ಹಿಂದೆ ರಾಜ್ಯದಲ್ಲಿ ಜೆಡಿಎಸ್‌ನ 7 ಶಾಸಕರನ್ನು ಕಾಂಗ್ರೆಸ್ ಹೈಜಾಕ್ ಮಾಡಿತ್ತಲ್ಲ, ಆಗ ಕಾಂಗ್ರೆಸ್‌ಗೆ ಇದು ತಪ್ಪು ಅಂತ ಅನ್ನಿಸಿರಲಿಲ್ಲ. ಬಿಡದಿಯ ರೆಸಾರ್ಟ್‌ನಲ್ಲಿ ಕೂಡಿ ಹಾಕಿರುವ ಗುಜರಾತ್‌ನ ಕಾಂಗ್ರೆಸ್ ಶಾಸಕರಿಗೆ ರಾಜ್ಯದ ಪೊಲೀಸರಿಂದ ರಕ್ಷಣೆ ನೀಡುತ್ತಿರುವ ಸರ್ಕಾರ, ಮೊದಲು ರಾಜ್ಯದ ಜನತೆಗೆ ರಕ್ಷಣೆ ನೀಡುವ ಬಗ್ಗೆ ಗಮನ ಹರಿಸಲಿ ಎಂದರು.
ಅಹಿಂದ ಘೋಷಣೆಗೆ ಸೀಮಿತ: ರಾಜ್ಯದಲ್ಲಿ ಲಿಂಗಾಯತ ಧರ್ಮ ಸ್ಥಾಪನೆಯಿಂದ ಯಾರಿಗೂ ಲಾಭವಿಲ್ಲ. ಈಗ ಚುನಾವಣೆ ಹತ್ತಿರಕ್ಕೆ ಬಂದಾಗ ಈ ರೀತಿಯ ವಿಚಾರಗಳು ಹುಟ್ಟಿಕೊಳ್ಳುವುದು ಸಾಮಾನ್ಯ. ರಾಜಕೀಯ ಪಕ್ಷಗಳು ತಲೆತೂರಿಸದೆ ಲಿಂಗಾಯತ ಮಠಾಧೀಶರಿಗೆ ಈ ವಿಷಯ ಬಿಟ್ಟು ಬಿಡುವುದು ಒಳಿತು ಎಂದರು.
ಅಹಿಂದ ಘೋಷಣೆಗೆ ಸೀಮಿತ:
ರಾಜ್ಯದಲ್ಲಿ ಲಿಂಗಾಯತ ಧರ್ಮ ಸ್ಥಾಪನೆಯಿಂದ ಯಾರಿಗೂ ಲಾಭವಿಲ್ಲ. ಈಗ ಚುನಾವಣೆ ಹತ್ತಿರಕ್ಕೆ ಬಂದಾಗ ಈ ರೀತಿಯ ವಿಚಾರಗಳು ಹುಟ್ಟಿಕೊಳ್ಳುವುದು ಸಾಮಾನ್ಯ. ರಾಜಕೀಯ ಪಕ್ಷಗಳು ತಲೆತೂರಿಸದೆ ಲಿಂಗಾಯತ ಮಠಾಧೀಶರಿಗೆ ಈ ವಿಷಯ ಬಿಟ್ಟು ಬಿಡುವುದು ಒಳಿತು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.