
ಬೆಂಗಳೂರು(ಸೆ.23): ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಹೃದಯದ ಕವಾಟ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ನಗರದ ಅಪೋಲೋ ಆಸ್ಪತ್ರೆಯಲ್ಲಿ ಡಾ.ಸತ್ಯಕಿ ನೇತೃತ್ವದಲ್ಲಿ ಯಶಸ್ವಿ ಚಿಕಿತ್ಸೆ ನಡೆಸಲಾಗಿದ್ದು, 5 ರಿಂದ 7 ದಿನ ಕುಮಾರಸ್ವಾಮಿ ಆಸ್ಪತ್ರೆಯಲ್ಲೇ ಇರಬೇಕಾಗುತ್ತೆ. ಡಿಸ್ಚಾರ್ಜ್ ಬಳಿಕ 2 ವಾರ ವಿಶ್ರಾಂತಿ ಅಗತ್ಯವಿದೆ' ಎಂದು ಹೆಚ್'ಡಿಕೆಯವರ ಸಂಬಂಧಿಕರು ಆದ ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥ ಡಾ. ಸಿ. ಮಂಜುನಾಥ್ ತಿಳಿಸಿದರು.
ಸಂಜೆವರೆಗೆ ಎಚ್ಡಿಕೆ ವೆಂಟಿಲೇಟರ್ನಲ್ಲಿ ಇರಲಿದ್ದಾರೆ. ಕವಾಟದಲ್ಲಿ ಇನ್ಫೆಕ್ಷನ್ ಆಗಿದ್ದ ಹಿನ್ನೆಲೆ ಕೆಮ್ಮು ಜಾಸ್ತಿಯಾಗಿತ್ತು. ಟಿಶ್ಯೂವಾಲ್ವ್ ಬದಲು ಆಯೋಟಿಕ್ ವಾಲ್ವ್ ಅಳವಡಿಸಲಾಗಿದೆ. ಆಯೋಟಿಕ್ ವಾಲ್ವ್ 15 ವರ್ಷಗಳ ಕಾಲ ಬಾಳಿಕೆ ಬರಲಿದೆ. ಎಚ್ಡಿಕೆಗೆ ಸಕ್ಕರೆ ಕಾಯಿಲೆ. ತೂಕ ನಿಯಂತ್ರಣದಲ್ಲಿ ಇಡಬೇಕು. ಆಹಾರ ಪಥ್ಯ ತುಂಬಾ ಅಗತ್ಯವಿದೆ' ಎಂದು ಮಂಜುನಾಥ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.