
ಹಾಸನ(ಏ.11): ಜಿಲ್ಲಾಧಿಕಾರಿ ನನ್ನ ಸಂಬಂಧಿಕರಲ್ಲ ಬೇಕಿದ್ದರೆ ಹಾಸನ ಜಿಲ್ಲೆಗೆ ವಿಶೇಷ ತಂಡ ಕಳುಹಿಸಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ರಾಜ್ಯ ಸರ್ಕಾರಕ್ಕೆ ಮನವು ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ, ಚುನಾವಣಾ ಆಯೋಗದ ವಿರುದ್ಧ ಮಾಜಿ ಪ್ರಧಾನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಸಿದ್ದರಾಮಯ್ಯ ಅಂಡ್ ಟೀಂ ಜಿಲ್ಲೆಯಲ್ಲಿ ಏಳೂ ಸ್ಥಾನ ಗೆಲ್ಲಬೇಕು ಎಂದು ವೀರಾ ವೇಶದ ಮಾತುಗಳನ್ನಾಡಿದ್ದಾರೆ. ಜಿಲ್ಲೆಯ ಆಡಳಿತ ವ್ಯವಸ್ಥೆ ಇಷ್ಟು ಹದಗೆಡಲು ಸಿಎಂ ಅವರ ಕುಮ್ಮಕ್ಕು ಕಾರಣ ಎಂದು ಕಿಡಿಕಾರಿದರು.
ಬಾಗೂರು ಮಂಜೇಗೌಡ ಸಿಎಂ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಆ ಸ್ಥಾನದ ಗೌರವ ಕಳೆದುಕೊಂಡು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಿಎಂಗೆ ಚುನಾವಣಾ ನೀತಿ ಸಂಹಿತೆ ಲೆಕ್ಕಕ್ಕೆ ಇಲ್ಲದಂತಾಗಿದೆ. ಹಾಸನ ಜಿಲ್ಲೆಯಲ್ಲಿ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಯೋ ಬಗ್ಗೆ ಮಾಜಿ ಪ್ರಧಾನಿ ಅನುಮಾನ ವ್ಯಕ್ತಪಡಿಸಿದರು.
ನಾನು ಮುಖ್ಯ ಚುನಾವಣಾ ಆಯುಕ್ತ ರಾವತ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಮುಖ್ಯ ಕಾರ್ಯದರ್ಶಿ ಸರಕಾರದ ವಿರುದ್ಧ ಮಾತನಾಡಲ್ಲ. ಏಕೆಂದರೆ ಸಿಎಂ ಅವರಿಗೆ ಲೈಫ್ ಕೊಟ್ಟಿದ್ದಾರೆ. ರಾಜ್ಯದ ಆಡಳಿತ ಯಂತ್ರ ನೀತಿ ಸಂಹಿತೆಗೆ ಮಾನ್ಯತೆ ಕೊಡದೆ ಕಡತ ವಿಲೇವಾರಿ ಮಾಡುತ್ತಿದೆ. ನಾನು ಮತ್ತೆ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಭೇಟಿ ಮಾಡುವೆ' ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.