ಈ ಭಾರತೀಯನಿಗೆ ದುಬೈಯಲ್ಲಿ 500 ವರ್ಷ ಜೈಲು ಶಿಕ್ಷೆ!

Published : Apr 11, 2018, 06:07 PM ISTUpdated : Apr 14, 2018, 01:13 PM IST
ಈ ಭಾರತೀಯನಿಗೆ ದುಬೈಯಲ್ಲಿ 500 ವರ್ಷ ಜೈಲು ಶಿಕ್ಷೆ!

ಸಾರಾಂಶ

ಗೋವಾದ ಸಿಡ್ನಿ ಲೆಮೋಸ್’ಗೆ 500 ವರ್ಷ ಜೈಲು! ಬೋಗಸ್ ಯೋಜನೆಗಳಲ್ಲಿ ಹಣ ಹೂಡುವಂತೆ ಮಾಡಿ ವಂಚನೆ

ಬೆಂಗಳೂರು: 200 ಮಿಲಿಯನ್ ಡಾಲರ್ ಹಗರಣವೊಂದಕ್ಕೆ ಸಂಬಂಧಿಸಿದಂತೆ ಭಾರತೀಯ ಹಾಗೂ ಆತನ ಸಹೋದ್ಯೋಗಿಗೆ ದುಬೈಯಲ್ಲಿ 500 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಗೋವಾದ ಸಿಡ್ನಿ ಲೆಮೋಸ್ ಹಾಗೂ  ಹಣಕಾಸು ತಜ್ಞ ರೆಯಾನ್ ಡಿ’ಸೋಜಾ ಎಂಬವರು 500 ವರ್ಷ ಜೈಲು ಶಿಕ್ಷೆಗೊಳಗಾದವರು.

ಬೋಗಸ್ ಯೋಜನೆಗಳಲ್ಲಿ ಹಣ ಹೂಡುವಂತೆ ಮಾಡಿ ಇವರಿಬ್ಬರು, ಸಾವಿರಾರು ಹೂಡಿಕೆದಾರರನ್ನು ವಂಚಿಸಿದದ್ದಾರೆನ್ನಲಾಗಿದೆ.

ತಮ್ಮ ಕಂಪನಿಯ ಮೂಲಕ $25000 ಹೂಡಿದರೆ ಶೇ.120 ರಷ್ಟು ವಾರ್ಷಿಕ ಲಾಂಭಾಂಶ ಪಡೆಯಬಹುದೆಂದು ಹೇಳಿ ಸಾವಿರಾರು ಮಂದಿಯಿಂದ ಕೋಟ್ಯಾಂತರ ಹಣವನ್ನು ಸಂಗ್ರಹಿಸಿದ್ದರು.

ಮೊದಮೊದಲು ಕೆಲ ಸಮಯದವರೆಗೆ ಲಾಭಾಂಶವನ್ನು ನೀಡುತ್ತಿದ್ದರು, ಬಳಿಕ ಲಾಭಾಂಶ ಪಾವತಿಸುವುದನ್ನು ನಿಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ಬಳಿಕ ಜುಲೈ, 2016ರಲ್ಲಿ  ಆ ಕಂಪನಿ ಕಚೇರಿಯನ್ನು ದುಬೈ ಅಧಿಕಾರಿಗಳು ಜಪ್ತಿ ಮಾಡಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೀರಿಯಲ್‌ ನಟಿ ಅ*ತ್ಯಾಚಾರ ಮಾಡಿ ಬೆದರಿಸಿ ಮದುವೆ, ಈಗ ನಡುರಸ್ತೆಯಲ್ಲಿಯೇ ಅತ್ತೆ-ಮಾವನ ಮೇಲೆ ಹಲ್ಲೆ!
2 ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿಗೆ ಹೋಯ್ತು?, ವಿಪಕ್ಷಗಳ ಆಕ್ರೋಶಕ್ಕೆ ಹೆಬ್ಬಾಳ್ಕರ್ ಭಾವುಕ, ನಾನು ಮಹಿಳೆ ಎಂಬ ಕಾರಣಕ್ಕೆ ಹೀಗೆ ಮಾಡ್ತೀರಾ ಎಂದ ಸಚಿವೆ