ಪರಸ್ಪರ ವಾಗ್ದಾಳಿಯಲ್ಲಿ ತೊಡಗಿರುವ ಬಿಜೆಪಿ-ಕಾಂಗ್ರೆಸ್ ಜನರ ಹಿತ ಮರೆತಿವೆ

By Suvarna Web DeskFirst Published Feb 27, 2018, 4:05 PM IST
Highlights

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೈತರ ಬಗ್ಗೆ ತುಟಿ ಬಿಚ್ಚಿಲ್ಲ. ಅಮಿತ್ ಶಾಗೆ ಕನಿಷ್ಟ  ತಿಳುವಳಿಕೆಯೂ ಕೂಡ ಇಲ್ಲ. ಮಹದಾಯಿ ಹೋರಾಟಗಾರರು ಕಳೆದ 2 ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ.

ಬೆಂಗಳೂರು : ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೈತರ ಬಗ್ಗೆ ತುಟಿ ಬಿಚ್ಚಿಲ್ಲ. ಅಮಿತ್ ಶಾಗೆ ಕನಿಷ್ಟ  ತಿಳುವಳಿಕೆಯೂ ಕೂಡ ಇಲ್ಲ. ಮಹದಾಯಿ ಹೋರಾಟಗಾರರು ಕಳೆದ 2 ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ಇನ್ನು ರಾಜ್ಯಕ್ಕೆ ಬಂದ ರಾಹುಲ್ ಗಾಂಧಿ ರೈತರೊಂದಿಗೆ ಮತಾನಾಡುತ್ತೇನೆ ಎಂದವರು ದೆಹಲಿಗೆ ಪಲಾಯನ ಮಾಡಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಜೆಡಿಎಸ್ ಮುಖಂಡರಾದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ದೇವೇಗೌಡ ಅವರು ಪ್ರಧಾನ ಮಂತ್ರಿಯಾಗಿದ್ದಾಗ ನಾರಾಯಣಪುರ ಡ್ಯಾಂ ನಿರ್ಮಾಣ ಮಾಡಲು ಮುಂದಾಗಿದ್ದರು. ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ 3600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ರೈತರ ಮನೆಗೆ ತೆರಳಿ ಸಾಂತ್ವನ ಹೇಳಿದ್ದೇನೆ. ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎರಡೂವರೆ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ ಎಂದು ಎಚ್’ಡಿಕೆ ಹೇಳಿದ್ದಾರೆ.

ಆದರೆ ಕಾಂಗ್ರೆಸ್ ಸರ್ಕಾರ 50 ಸಾವಿರ ಸಾಲ ಮನ್ನಾ ಮಾಡಲು 14 ಷರತ್ತುಗಳನ್ನು ಮಾಡಿದ್ದಾರೆ. ನಾನು ಇಸ್ರೇಲ್’ಗೆ ಹೋಗಿ ಅಲ್ಲಿನ ಕೃಷಿ ಪದ್ಧತಿ ತಿಳಿದುಕೊಂಡಿದ್ದೇನೆ. ಇಸ್ರೇಲ್ ಕೃಷಿ ಪದ್ಧತಿ ಕರ್ನಾಟಕದಲ್ಲಿ ತರಲು ಪ್ಲಾನ್ ಮಾಡಿಕೊಂಡಿದ್ದೇನೆ. ಇದನ್ನು ಸೇರಿ ಹಲವು ರೀತಿಯ ಚಿಂತನೆಗಳು ನನ್ನ ಬಳಿ ಇವೆ.  ಗರ್ಭಿಣಿಯರಿಗೆ 6 ತಿಂಗಳು 6 ಸಾವಿರ ನೀಡುವ ಯೋಜನೆ ಇದೆ.

ಕಾಂಗ್ರೆಸ್ – ಬಿಜೆಪಿ ಪರಸ್ಪರ ವಾಗ್ದಾಳಿಯಲ್ಲಿ ತೊಡಗಿಕೊಂಡಿವೆ. ಆದರೆ ಜನರಿಗಾಗಿ ಅವರು ಕಾರ್ಯನಿರ್ವಹಿಸುತ್ತಿಲ್ಲ. ಆದರೆ ನಮ್ಮ ಸರ್ಕಾರ ಜನರಿಗಾಗಿ ಕಾರ್ಯನಿರ್ವಹಿಸುತ್ತದೆ. ಜನರ ಸರ್ಕಾರವಾಗಲಿದೆ. ಎಂದು ಕುಮಾರಸ್ವಾಮಿ ಹೇಳಿದ್ದಾರೆ.

click me!