ನಿರಪೇಕ್ಷಣ ಪತ್ರ ಹಸ್ತಾಂತರ: ಇಂದು ಭಾರತಕ್ಕೆ ಶ್ರೀ ದೇವಿ ಮೃತದೇಹ ತರುವುದು ಬಹುತೇಕ ಖಚಿತ

Published : Feb 27, 2018, 03:10 PM ISTUpdated : Apr 11, 2018, 12:47 PM IST
ನಿರಪೇಕ್ಷಣ ಪತ್ರ ಹಸ್ತಾಂತರ: ಇಂದು ಭಾರತಕ್ಕೆ ಶ್ರೀ ದೇವಿ ಮೃತದೇಹ ತರುವುದು ಬಹುತೇಕ ಖಚಿತ

ಸಾರಾಂಶ

ದುಬೈನಲ್ಲಿ ಶನಿವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಶ್ರೀದೇವಿ ಮೃತ ದೇಹದ ಪರೀಕ್ಷೆಯ  ಅಂತಿಮ ವಿಧಾನಗಳು ಪೂರ್ಣಗೊಂಡಿದ್ದು, ಕುಟುಂಬ ಸದಸ್ಯರಿಗೆ ನಿರಪೇಕ್ಷಣ ಪತ್ರವನ್ನು ಹಸ್ತಾಂತರ ಮಾಡಲಾಗಿದೆ.

ನವದೆಹಲಿ : ದುಬೈನಲ್ಲಿ ಶನಿವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಶ್ರೀದೇವಿ ಮೃತ ದೇಹದ ಪರೀಕ್ಷೆಯ  ಅಂತಿಮ ವಿಧಾನಗಳು ಪೂರ್ಣಗೊಂಡಿದ್ದು, ಕುಟುಂಬ ಸದಸ್ಯರಿಗೆ ನಿರಪೇಕ್ಷಣ ಪತ್ರವನ್ನು ಹಸ್ತಾಂತರ ಮಾಡಲಾಗಿದೆ.

ಇನ್ನು ಕೆಲವೇ ಕೆಲವು ಪ್ರಕ್ರಿಯೆಗಳು ಬಾಕಿ ಇದೆ. ಮೃತದೇಹವು ಸಂರಕ್ಷಣಾ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಪ್ರಕ್ರಿಯೆಗಾಗಿ ಶವಗಾರದಿಂದ ಫಿಸಿಕಲ್ ಫಿಟ್ನೆಸ್ ಸೆಂಟರ್ ಮುಹಾಸ್ನಾಗೆ ರವಾನಿಸಲಾಗುತ್ತದೆ.

 ಇದಕ್ಕೆ ಒಂದೆರಡು ಗಂಟೆಗಳ ಸಮಯಾವಕಾಶ ಹಿಡಿಯಲಿದ್ದು, ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು ಇಂದೇ ಶ್ರೀ ದೇವಿ ಅವರ ಮೃತದೇಹ ಭಾರತಕ್ಕೆ ತರುವ ಸಾಧ್ಯತೆಗಳು ಬಹುತೇಕ ಖಚಿತವಾಗಿದೆ.

ಅಂಬಾನಿ ಅವರ ಖಾಸಗಿ ಜೆಟ್ ಭಾನುವಾರವೇ ದುಬೈಗೆ ತೆರಳಿದ್ದು, ಇದರ ಮೂಲಕವೇ ಮೃತದೇಹವನ್ನು ಭಾರತಕ್ಕೆ ತರಲಾಗುತ್ತದೆ. ಇಲ್ಲಿಗೆ ಮೃತದೇಹ ಆಗಮಿಸಿದ ಬಳಿಕ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಟ್ಟು ಬಳಿಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!