ಲೋಕಸಭಾ ಎಲೆಕ್ಷನ್: ಒಗ್ಗಟ್ಟಿನ ರಣಕಹಳೆ ಊದಿದ ದೇವೇಗೌಡ

By Web DeskFirst Published Dec 16, 2018, 7:00 PM IST
Highlights

ಮಧ್ಯಪ್ರದೇಶ, ರಾಜಸ್ಥಾನದ ನೂತನ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ಎಚ್.ಡಿ ದೇವೇಗೌಡ ಅವರು ಮುಂಬರುವ ಲೋಕಸಭಾ ಎಲೆಕ್ಷನ್ ಗೆ ಒಗ್ಗಟ್ಟಿನ ರಣಕಹಳೆ ಊದಿದ್ದಾರೆ.

ಬೆಂಗಳೂರು, [ಡಿ.16]: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರೋಧಿ ಬಣಗಳನ್ನು ಒಗ್ಗೂಡಿಸಿದೆ.

ಇನ್ನು ನಾಳೆ [ಸೋಮವಾರ] ಮಧ್ಯಪ್ರದೇಶ, ರಾಜಸ್ಥಾನದ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭ ನಡೆಯಲಿದೆ.  ಈ ಕಾರ್ಯಕ್ರಮ ಮಹಾಮೈತ್ರಿಯ ಮತ್ತೊಂದು ವೇದಿಕೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ,  ಟ್ವೀಟ್ ಮೂಲಕ ಕಮಲ್‌ನಾಥ್, ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 

ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಕಮಲ್‌ನಾಥ್, ರಾಜಸ್ಥಾನ ಮುಖ್ಯಮಂತ್ರಿಯಾಗಿ ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ಸೋಮವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. 

ಈ ಸಮಾರಂಭದಲ್ಲಿ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದು, ಈ ಮೂಲಕ ಮುಂಬರುವ ಲೋಕಭಾ ಚುನಾವಣೆಗೆ ಒಗ್ಗಟ್ಟು ಪ್ರದರ್ಶಿಸಿಲಿದ್ದಾರೆ. ಇನ್ನು ದೇವೇಗೌಡ ಅವರು ಟ್ವೀಟ್ ಮಾಡಿದ್ದು ಹೀಗಿದೆ.

ರಾಜಸ್ಥಾನ,ಮಧ್ಯಪ್ರದೇಶದಲ್ಲಿ ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ಅಶೋಕ್ ಗೆಹ್ಲೋಟ್, ಕಮಲ್ ನಾಥ್,ಯುವ ನಾಯಕ ಸಚಿನ್ ಪೈಲಟ್ ಅವರಿಗೆ ನನ್ನ ಶುಭಾಶಯ. ಮುಖ್ಯವಾಗಿ ನಾಳೆ ನಡೆಯಲಿರುವ ಸಮಾರಂಭಗಳು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ್ದು.ದೇಶದಲ್ಲಿ ನಮ್ಮನ್ನು ಬಿಟ್ಟರೆ ಮತ್ತೊಬ್ಬರಿಲ್ಲ ಎನ್ನುವವರಿಗೆ ಸ್ಪಷ್ಟ ಸಂದೇಶ. ಮಹಾಮೈತ್ರಿಯ ಮತ್ತೊಂದು ವೇದಿಕೆ.

— H D Devegowda (@H_D_Devegowda)

 

 

click me!
Last Updated Dec 16, 2018, 7:01 PM IST
click me!