ಮನೆ ಕಟ್ಟೋಕೆ ಅಲ್ಲ -ಸ್ಮಶಾನಕ್ಕೆ ಜಾಗ ಕೊಡಿ-ಸಿಎಂಗೆ ಮನವಿ

Published : Aug 09, 2018, 01:55 PM ISTUpdated : Aug 09, 2018, 02:13 PM IST
ಮನೆ ಕಟ್ಟೋಕೆ ಅಲ್ಲ -ಸ್ಮಶಾನಕ್ಕೆ ಜಾಗ ಕೊಡಿ-ಸಿಎಂಗೆ ಮನವಿ

ಸಾರಾಂಶ

ಮನೆ ಕಟ್ಟಲು ಜಾಗ ಕೊಡಿ ಎಂದು ಪ್ರತಿ ದಿನ ಸಿಎಂ ಕಚೇರಿಗೆ ಮನವಿಗಳು ಸಲ್ಲಿಕೆಯಾಗೋದೆಷ್ಟು ಅನ್ನೋದು ಲೆಕ್ಕವಿಲ್ಲ. ಆದರೆ ರಾಮನಗರದ ನಿವಾಸಿಗಳು ತಮ್ಮ ವಿಶೇಷ ಮನವಿಯೊಂದಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ.  ರಾಮನಗರ ನಿವಾಸಿಗಳ ಆಗ್ರಹವೇನು? ಇಲ್ಲಿದೆ ವಿವರ.

ರಾಮನಗರ(ಆ.09): ವಿಶೇಷ ಬೇಡಿಕೆಗಾಗಿ ರಾಮನಗರದ ಜನತೆ ಇಂದು ಬೆಂಗಳೂರಿನತ್ತ ಮುಖಮಾಡಿದ್ದರು. ತಮಗೆ ಮನ ಕಟ್ಟಲು ಜಾಗ ಬೇಡ. ಆದರೆ ಸ್ಮಶಾನಕ್ಕೆ ಜಾಗ ನೀಡಿ ಎಂದು ಇಲ್ಲಿನ ಚಾಮುಂಡಿಪುರದ ನಿವಾಸಿಗಳು  ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿಗೆ ಮನವಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದಾರೆ.

ಕುಮಾಸ್ವಾಮಿಯ ಜೆಪಿ‌ನಗರದ ಸಿಎಂ ನಿವಾಸಕ್ಕೆ ತೆರಳಿ ಮನವಿ ಮಾಡಲು ನಿವಾಸಿಗಳು ಮುಂದಾಗಿದ್ದಾರೆ. ಚಾಮುಂಡಿಪುರದಲ್ಲಿ ದಲಿತ ಸಮುದಾಯದವರಿಗೆ ಸ್ಮಶಾನವಿಲ್ಲದೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಸಿಂಗ್ರಾಬೋವಿದೊಡ್ಡಿದಲ್ಲಿ ಸ್ಮಶಾನಕ್ಕೆ ಜಾಗ ಬೇಕು ಅಂತ  ಸಿಎಂ ಗೆ ಮನವಿ ಮಾಡಿದ್ದಾರೆ.

ಚಾಮುಂಡಿಪುರದ ನಿವಾಸಿಗಳಿಗೆ ಮನೆ ಇದೆ. ಆದರೆ ಸ್ಮಶಾನವಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಸುಮಾರು 60 ಜನರು ತಂಡ ಸಿಎಂ ಕುಮಾರಸ್ವಾಮಿಗೆ ಮನವಿ ಸಲ್ಲಿಸಲು ರಾಮನಗರದಿಂದ ಬೆಂಗಳೂರಿಗೆ ಆಗಮಿಸಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!
ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!