ಲೋಕಸಭೆಯಲ್ಲಿ ಮೊದಲು ಬಾರಿಗೆ ಅತ್ತಿದ್ದ ದೇವೇಗೌಡರು :ಈ ವಯಸ್ಸಿನಲ್ಲೂ ನಾನು ಅಳಬೇಕೇ?

By Internet DeskFirst Published Sep 28, 2016, 3:55 PM IST
Highlights

ಬೆಂಗಳೂರು(ಸೆ.28): ನನ್ನ ರಾಜಕೀಯ ಜೀವನದಲ್ಲಿ ಲೋಕಸಭೆಯಲ್ಲಿ ಯಾವತ್ತು ಅತ್ತಿರಲಿಲ್ಲ. ಆದರೆ ಮೊದಲ ಬಾರಿಗೆ ಅತ್ತಿದ್ದು ಕಾವೇರಿ ವಿಷಯದಲ್ಲಿ ಭಾಷಣ ಮಾಡುವಾಗ ಎಂದು ತಿಳಿಸಿದ್ದಾರೆ.

ಲೋಕಸಭೆ ಅಧಿವೇಶನದಲ್ಲಿ ಕಾವೇರಿ ವಿಷಯದಲ್ಲಿ ಭಾಷಣ ಮಾಡುವಾಗ ನಾನು ಮೊದಲ ಬಾರಿಗೆ ಅತ್ತಿದ್ದೆ. ಈ ವಯಸ್ಸಿನಲ್ಲೂ ನಾನು ಅಳಬೇಕೇ? ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಮೆಟ್ಟೂರುನಲ್ಲಿ 50 ಟಿಎಂಸಿ ನೀರಿದೆ. ಇಲ್ಲಿ ಕುಡಿಯೋದಕ್ಕೆ ನೀರಿಲ್ಲ. ಮೂರು ದಿನ ನೀರು ಬಿಡದೇ ಇದ್ದರೆ ತಮಿಳುನಾಡಿನ ರೈತರ ಬೇಳೆ ಒಣಗಿ ಹೋಗ್ತಾ ಇರಲಿಲ್ಲ ಎಂದು ಸುಪ್ರಿಂ ಕೋರ್ಟ್'ಗೆ ಪರೋಕ್ಷವಾಗಿ ದೇವೇಗೌಡರು ಚಾಟಿ ಬೀಸಿದ್ದಾರೆ.

Latest Videos

ಕಾವೇರಿ ವಿಚಾರವಾಗಿ ರಾಜ್ಯ ಪರ ವಕೀಲ ಮೋಹನ್ ಕಾತರಕಿ ಜೊತೆ ದೂರವಾಣಿ ಸಂಭಾಷಣೆ ನಡೆಸಿದ ದೇವೇಗೌಡರು ಮುಂದಿನ ವಿಚಾರಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಸಮರ್ಥವಾಗಿ ವಾದ ಮಂಡಿಸುವಂತೆ ತಿಳಿಸಿದ್ದಾರೆ.                          

ಕಾವೇರಿ ತೀರ್ಪಿಗೆ ತೀರ್ವ ಬೇಸರಗೊಂಡಿರುವ ದೇವೇಗೌಡರು ಯಾರನ್ನೇ ಆಗಲಿ ಗೋಡೆಯ ತನಕ ತಳ್ಳಬಹುದು. ಆಮೇಲೆ ಅವರು ತಿರುಗಿಬೀಳುತ್ತಾರೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನ್ಯಾಯಾಧೀಶರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಲ್ಲ. ತಮಿಳುನಾಡಿನ ಹಠ ನೀರು ಬಿಡಿಸಲೇಬೇಕು ಅಂತಾ. ಆಸ್ಪತ್ರೆಯಲ್ಲೇ ಮಲಗಿಕೊಂಡು ತೀರ್ಪನ್ನು ಅಭಿನಂದಿಸುತ್ತಾರೆ ಎಂದು ತಮ್ಮ ಜಯಲಲಿತಾ ಪರೋಕ್ಷವಾಗಿ ಟೀಕಿಸಿದರು.

ಮೂರು ದಿನಗಳ ಕಾಲ ಕಾಯುವ ವ್ಯವದಾನ ಸುಪ್ರಿಂಕೋರ್ಟಿ'ಗೆ ಇರಲಿಲ್ವೆ. ಸಾಮನ್ಯ ವ್ಯಕ್ತಿ ಇಂತಹ ಯೋಚನೆ ಮಾಡುತ್ತೇನೆ ಅಂದರೆ ಸುಪ್ರೀಂಕೋರ್ಟ್'ಗೆ ಇರಲಿಲ್ವಾ. ಪರೋಕ್ಷವಾಗಿ ಸುಪ್ರಿಂ ನಡೆಗೆ ಅಸಮಾಧಾನವ್ಯಕ್ತಪಡಿಸಿದರು. ಬಿಜೆಪಿಯವರು ಸರ್ವ'ಪಕ್ಷ ಸಭೆಗೆ ಬಂದಿದ್ದು ಸಂತೋಷ. ನೀರು ಬಿಡದಿರುವ ಬಗ್ಗೆ ನಿಲುವು ತಗೆದುಕೊಂಡಿದ್ದನ್ನು ಅಭಿನಂದಿಸುತ್ತೇನೆ. ಕಾವೇರಿ ವಿಚಾರವಾಗಿ ನಾಳೆ ಕೇಂದ್ರದ ಮದ್ಯಸ್ಥಿಕೆಯಲ್ಲಿ ನಡೆಯುವ ಸಭೆಗೆ ನನಗೆ ಆಹ್ವಾನ ಇಲ್ಲ ಹಾಗಾಗಿ ನಾನು ಸಭೆಗೆ ಹೋಗಲ್ಲ ಎಂದು ತಿಳಿಸಿದರು.

click me!