ಮತ ನಿರಾಕರಣೆಗೆ ಹೈಕೋರ್ಟ್'ನಲ್ಲಿ ಪ್ರಶ್ನೆ : ಸಂಸದ ರಾಜೀವ್ ಚಂದ್ರಶೇಖರ್

By Internet DeskFirst Published Sep 28, 2016, 3:16 PM IST
Highlights

ಬೆಂಗಳೂರು(ಸೆ.28): ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತದಾನ ನಿರಾಕರಣೆ ವಿಚಾರದ ಕಾಂಗ್ರೆಸ್ ಕ್ರಮವನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
'ನಾವು ಕಾವೇರಿ ಕುರಿತ ಸರ್ವಪಕ್ಷ ಸಭೆಯಲ್ಲಿ ಭಾಗಹಿಸಿದ್ದೆವು. ಕಾಂಗ್ರೆಸ್​ನವರು ಸಭೆಯ ಮಧ್ಯೆಯೇ ಮತದಾನಕ್ಕೆ ಬಂದರು ಕಾಂಗ್ರೆಸ್​ನವರು ಸಭೆಯಲ್ಲಿ ಸಿಎಂ ಹೇಳಿಕೆಗೂ ಕಾಯಲಿಲ್ಲ. ನಾವು ಮಧ್ಯಾಹ್ನ 12 ಗಂಟೆಗೆ ಮತದಾನ ಮಾಡಲು ಹೋದೆವು. ಆದರೆ ವಿಳಂಬದ ಕಾರಣ ನೀಡಿ ಮತದಾನದ ಹಕ್ಕು ನೀಡಲಿಲ್ಲ. ಮೇಯರ್ ಅಷ್ಟೇ ಅಲ್ಲ ಉಪಮೇಯರ್ ಆಯ್ಕೆಗೂ ಮತದಾನದ ಹಕ್ಕು ನೀಡಲಿಲ್ಲ. ನಾವು ಹೋದಾಗ ಉಪಮೇಯರ್ ಚುನಾವಣೆ ಪ್ರಕ್ರಿಯೆಯೇ ಆರಂಭವಾಗಿರಲಿಲ್ಲ. ಹೀಗಿದ್ದರೂ ನಮಗೆ  ಮತದಾನದ ಹಕ್ಕು ನಿರಾಕರಿಸಿದ್ದು ಸರಿಯಲ್ಲ ಎಂದು ಸಂಸದರು ಪ್ರತಿಕ್ರಿಯಿಸಿದ್ದಾರೆ.
ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಸಂಸದಾರದ ರಾಜೀವ್ ಚಂದ್ರಶೇಖರ್,ಪಿ.ಸಿ. ಮೋಹನ್  ವಿಳಂಬವಾಗಿ ಬಂದ ಕಾರಣ ನೀಡಿ ಮತದಾನದ ಹಕ್ಕು ನೀಡಿರಲಿಲ್ಲ. ಮತದಾನದ ಹಕ್ಕು ನೀಡದ್ದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಹೋಗಲು ಇಬ್ಬರು ಸಂಸದರು ನಿರ್ಧರಿಸಿದ್ದಾರೆ.

click me!