ಅಂಬ್ಯುಲೆನ್ಸ್ ಸಿಗದ ಕಾರಣ ಪ್ಲಾಸ್ಟಿಕ್ ಚೀಲದಲ್ಲಿ ಶವವನ್ನು ಕೊಂಡೊಯ್ದ ಸಂಬಂಧಿಕರು

Published : Sep 28, 2016, 03:10 PM ISTUpdated : Apr 11, 2018, 12:35 PM IST
ಅಂಬ್ಯುಲೆನ್ಸ್ ಸಿಗದ ಕಾರಣ ಪ್ಲಾಸ್ಟಿಕ್ ಚೀಲದಲ್ಲಿ ಶವವನ್ನು ಕೊಂಡೊಯ್ದ ಸಂಬಂಧಿಕರು

ಸಾರಾಂಶ

ಕತಿಹಾರ್/ಬಿಹಾರ (ಸೆ.28): ಅಂಬುಲೆನ್ಸ್ ಸಿಗದ ಕಾರಣ ಸಂಬಂಧಿಕರೊಬ್ಬರ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹೊತ್ತೊಯ್ದ ಮನಕಲಕಿಸುವ ಘಟನೆ ಬಿಹಾರದ ಕತಿಹಾರ್ ನಲ್ಲಿ ನಡೆದಿದೆ.

ಕುರ್ಸೈಲಾ ನಿವಾಸಿಯಾದ ಶೈಂತು ಶಾ 14 ದಿನಗಳ ಹಿಂದೆ ಗಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದರು. ಅವರ ಸಂಬಂಧಿಕರು ಪೋಸ್ಟ್ ಮಾರ್ಟಮ್ ಗಾಗಿ ಶವವನ್ನು ಕತಿಹಾರ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಇಲ್ಲಿ ಮರಣೋತ್ತರ ಪರೀಕ್ಷೆ ನಡೆಸುತ್ತೇವೆ ಎಂದು ವೈದ್ಯರು ಹೇಳಿದ್ದರು.

ಆದರೆ ದೇಹ ಕೊಳೆತದ್ದರಿಂದ ಮರಣೋತ್ತರ ಪರೀಕ್ಷೆಯನ್ನು ನಿರಾಕರಿಸಿದ ವೈದ್ಯರು ಬಗಲ್ ಪುರದಲ್ಲಿರುವ ಜವಹರ್ ಲಾಲ್ ನೆಹರು ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲು ಸೂಚಿಸಿದರು. ಆದರೆ ತಕ್ಷಣಕ್ಕೆ ಅಂಬ್ಯುಲೆನ್ಸ್ ಸಿಗದ ಕಾರಣ ಮೂವರು  ಸಂಬಂಧಿಕರು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಸುತ್ತಿ ಕೊಂಡೊಯ್ದಿದ್ದಾರೆ. ಈ ದೃಶ್ಯ ನೋಡುಗರ ಮನಕಲಕಿಸುವಂತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬ್ಯಾಂಕ್‌ನಿಂದ ರೈತರವರೆಗೆ: ಜನವರಿ 2026ರಿಂದ ಬದಲಾಗುತ್ತಿರುವ ಪ್ರಮುಖ ನಿಯಮಗಳು
ರಾಜ್ಯದಾದ್ಯಂತ ಲೋಕಾಯುಕ್ತ ದಾಳಿ ಸರಣಿ: ವಿಜಯಪುರ, ರಾಯಚೂರು ಸೇರಿ ನಾಲ್ಕು ಜಿಲ್ಲೆಗಳಲ್ಲಿ ಭ್ರಷ್ಟರ ಭೇಟೆ!