
ನಾಗಪುರ[ಸೆ.23]: ಇಲ್ಲಿನ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ಅ.8 ರಂದು ನಡೆಯುವ ವಿಜಯದಶಮಿ ಕಾರ್ಯಕ್ರಮದಲ್ಲಿ ಎಚ್‌ಸಿಎಲ್ ಸಂಸ್ಥಾಪಕ ಮುಖ್ಯಸ್ಥ, ಪದ್ಮಭೂಷಣ ಗೌರವಾನ್ವಿತ ಶಿವ ನಾಡಾರ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ನಾಗಪುರ ಮಹಾನಗರ ಸಂಚಾಲಕ ರಾಜೇಶ್ ಲೊಯಾ ಭಾನುವಾರ ತಿಳಿಸಿದ್ದಾರೆ.
ಪ್ರತಿವರ್ಷ ನಡೆಯವ ಮತ್ತು ರಾಜಕೀಯವಾಗಿ ವಿಶೇಷವಾಗಿರುವ ಈ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಸಂಘಟನೆಯ ಮುಖ್ಯಸ್ಥರು ಮಾಡುವ ಭಾಷಣವು ಸಂಘಟನೆ ಮತ್ತು ಇತರ ಅಂಗಸಂಸ್ಥೆಗಳ ಮುಂದಿನ ವರ್ಷದ ಕಾರ್ಯಸೂಚಿಯನ್ನು ಪ್ರತಿಬಿಂಬಿಸುತ್ತದೆ.
ದೇಶದ ಎಲ್ಲ ನಾಗರಿಕರು ಕಾರ್ಯಕ್ರಮದ ಮೇಲೆ ಗಮನ ಹರಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.