ಹಂಪಿಯ ಹಿನ್ನೆಲೆಯಲ್ಲಿ ಯೋಗ, ಹೂಸ್ಟನ್‌ನಲ್ಲಿ ಭಾರತೀಯ ಸಂಸ್ಕೃತಿ ಕಲರವ!

By Web Desk  |  First Published Sep 23, 2019, 10:16 AM IST

ಹೂಸ್ಟನ್‌ನಲ್ಲಿ ಭಾರತೀಯ ಸಂಸ್ಕೃತಿ ಕಲರವ, ಹೂಸ್ಟನ್‌ ಭಾರತಮಯ| ಚೆಂಡೆ, ಡೋಲು ಸದ್ದಿಗೆ ಸಖತ್‌ ಡ್ಯಾನ್ಸ್‌| ಜಾನಪದ, ದೇಸಿ ಸೊಗಡಿನ ಕಾರ್ಯಕ್ರಮದ ರಸದೌತಣ| ಮುಗಿಲು ಮುಟ್ಟಿದ ಭಾರತ ಪರ ಘೋಷಣೆ


ಹೂಸ್ಟನ್‌[ಸೆ.23]: ಭಾರೀ ನಿರೀಕ್ಷೆ ಮೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕದ ಭೇಟಿಯಲ್ಲಿನ ಹೌಡಿ ಮೋದಿ ಕಾರ್ಯಕ್ರಮ ಹೊಸ ಇತಿಹಾಸ ರಚಿಸುವಲ್ಲಿ ಯಶಸ್ಸು ಕಂಡಿದೆ. ಭಾರತ ಮತ್ತು ಅಮೆರಿಕ ನಡುವಣ ಸಂಬಂಧವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿ ಈ ಕಾರ್ಯಕ್ರಮ, ಭಾರತ ಮತ್ತು ಅಮೆರಿಕ ಎರಡೂ ದೇಶಗಳಲ್ಲಿ ಹೊಸ ಅಲೆ ಸೃಷ್ಟಿಸುವಲ್ಲೂ ಫಲಪ್ರದವಾಗಿದೆ. ಇಲ್ಲಿನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ, ಟೆಕ್ಸಾಸ್‌ ಭಾರತೀಯ ವೇದಿಕೆ ಸಂಘಟಿಸಿದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ ದಾಖಲೆ ಬರೆದರು.

ಭಾರೀ ಪೂರ್ವಸಿದ್ಧತೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾವಿರಾರು ಭಾರತೀಯರು ಭಾನುವಾರ ಬೆಳಗ್ಗೆಯಿಂದಲೇ ಕೈಯಲ್ಲಿ ತ್ರಿವರ್ಣ ಧ್ವಜ, ಪ್ಲೇ ಕಾರ್ಡ್‌ ಹಿಡಿದುಕೊಂಡು, ಸಾಂಸ್ಕೃತಿಕ ಉಡುಗೆ, ಪ್ರಧಾನಿ ಮೋದಿಗೆ ಸ್ವಾಗತ ಬಯಸುವ ಟೀ ಶರ್ಟ್‌ ಧರಿಸಿಕೊಂಡು ಸ್ಟೇಡಿಯಂನತ್ತ ಧಾವಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಲೆಂದೇ ಟೆಕ್ಸಾಸ್‌ನ ಸುತ್ತಮತ್ತಲಿಂದಲೇ 140 ಬಸ್‌ಗಳನ್ನು ನಿಯೋಜಿಸಲಾಗಿತ್ತು.

Tap to resize

Latest Videos

undefined

ಹೌಡಿ ಮೋದಿ? ಎಲ್ಲ ಚೆನ್ನಾಗಿದೆ!: ಅಮೆರಿಕಾದಲ್ಲಿ ಕನ್ನಡ ಮಾತನಾಡಿದ ಮೋದಿ!

ಭಾರತೀಯ ಕಾಲಮಾನ ರಾತ್ರಿ 8 ಗಂಟೆ ವೇಳೆಗೆ ಸಾಂಸ್ಕೃತಿ ಕಾರ್ಯಕ್ರಮಗಳು ಆರಂಭವಾದವು. ಸುಮಾರು 90 ನಿಮಿಷಗಳ ಕಾಲ ನಡೆದ ಸಾಂಸ್ಕೃತಿ ಕಾರ್ಯಕ್ರಮಗಳು ಭಾರತದ ಸಂಸ್ಕೃತಿ ಹಾಗೂ ವಿವಿಧತೆಗೆ ಹಿಡಿದ ಕೈಗನ್ನಡಿಯಂತಿತ್ತು. ನೂರಾರು ಇಂಡೋ-ಅಮೆರಿಕ ಕಲಾವಿದರಿಂದ ಭಾರತದ ಭವ್ಯ ಸಂಸ್ಕೃತಿ, ಧಾರ್ಮಿಕ, ಸಾಮಾಜಿಕ ಹಾಗೂ ಭಾಷಾ ವೈವಿಧ್ಯತೆ, ಉಭಯ ದೇಶಗಳ ಆಚರಣೆಗಳ ಕುರಿತಾಗಿ ನೃತ್ಯ, ಗಾಯನ ಹಾಗೂ ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಿತು. ವೇದಿಕೆ ಹಿಂಬಾಗದಲ್ಲಿ ಅಳವಡಿಸಲಾದ ಬೃಹತ್‌ ಎಲ್‌ಸಿಡಿ ಪರದೆಯಲ್ಲಿ ಭಾರತ ಸಂಸ್ಕೃತಿ, ಸಾಧನೆ ಹಾಗೂ ವೈಶಿಷ್ಟ್ಯವನ್ನು ಸಾರುವ ಫೋಟೋ ಹಾಗೂ ಚಿತ್ರಗಳು ಗಮನ ಸೆಳೆದವು. ಇದೇ ವೇಳೆ ಭಾರತ ಹಾಗೂ ಅಮೆರಿಕ ನಡುವಣ ಸಂಬಂಧ ಕುರಿತಾದ ಡಾಕ್ಯುಮೆಂಟರಿ ಕೂಡ ಪ್ರದರ್ಶಿಸಲಾಯ್ತು.

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಭಾರತ್‌ ಮಾತಾ ಕಿ ಜೈ, ಇಂಡಿಯಾ ಇಂಡಿಯಾ, ಹೌಡಿ ಮೋದಿ ಹಾಗೂ ಮೋದಿ ಮೋದಿ ಎನ್ನುವ ಘೋಷಣೆಗಳನ್ನು ಮೊಳಗಿಸಿದರು. ಮೋದಿ ಹಾಗೂ ಟ್ರಂಪ್‌ ವೇದಿಕೆಗೆ ಆಗಮಿಸುವ ವೇಳೆ ಹಾಗೂ ಮೋದಿ ಭಾಷಣದುದ್ದಕ್ಕೂ ಜನರ ಘೋಷಣೆ, ಚಪ್ಪಳೆ, ಶಿಳ್ಳೆ, ಸಂಭ್ರಮ ಮುಗಿಲು ಮುಟ್ಟಿದ್ದವು. 50 ಸಾವಿರ ಮಂದಿಗೆ ಮಾತ್ರ ಅವಕಾಶ ಕಲ್ಪಿಸಿದ್ದರಿಂದ ಕ್ರೀಡಾಂಗಣದ ಹೊರಗಡೆ ಕೂಡ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಮಾಯಿಸಿದ್ದರು. ಸ್ಟೇಡಿಯಂ ಸುತ್ತ ಮುತ್ತ ಮೋದಿಗೆ ಸ್ವಾಗತ ಕೋರಿ ಬೃಹತ್‌ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಅಮೆರಿಕ ಅನ್ನುವುದು ಬಿಟ್ಟರೆ ಇಡೀ ಹೂಸ್ಟನ್‌ ಭಾರತಮಯವಾಗಿತ್ತು.

‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ..ಇನ್ನೊಂದಷ್ಟನ್ನು ಬೀಳ್ಕೊಡಬೇಕಿದೆ’

ಹಂಪಿಯ ಹಿನ್ನೆಲೆಯಲ್ಲಿ ಯೋಗ

ಸಾಂಸ್ಕೃತಿಕ ಕಾರ್ಯಕ್ರಮದ ನಡುವೆ ಭಾರತದ ಯೋಗ ಪರಂಪರೆಯನ್ನು ಪ್ರದರ್ಶಿಸಲಾಯಿತು. ಈ ವೇಳೆ ಯೋಗಪಟುಗಳ ಹಿನ್ನೆಲೆಯಲ್ಲಿ ಕರ್ನಾಟಕದ ಹಂಪಿಯ ದೇಗುಲ ಸಮೀಪದ ದೃಶ್ಯಗಳನ್ನು ಬಳಸಿಕೊಂಡಿದ್ದು ಗಮನ ಸೆಳೆಯಿತು.

ಹೂಸ್ಟನ್‌ ಮೇಯರ್‌ಇಂದ ಸ್ವಾಗತ ಸಿಲ್ವೆಸ್ಟರ್‌ ಟರ್ನರ್‌

50,000- ಸ್ಟೇಡಿಯಂನೊಳಗಿದ್ದ ಜನ

90 ನಿಮಿಷ- ಸಾಂಸ್ಕೃತಿಕ ಕಾರ್ಯಕ್ರಮದ ಅವಧಿ

400- ಒಟ್ಟು ಕಲಾವಿದರು

27- ಕಲಾ ತಂಡ

ಸ್ನೇಹಕ್ಕೆ ಸ್ನೇಹ..ಪ್ರೀತಿಗೆ ಪ್ರೀತಿ... ಮೋದಿ-ಟ್ರಂಪ್ ಜುಗಲ್‌ಬಂದಿ, ಪಾಕ್‌ಗೆ ಫಜೀತಿ

click me!