ಸುಳ್ಳು ಸುದ್ದಿ ಹಬ್ಬಿಸಲು ಕೆಬಿಸಿಗೆ ಪಾಕ್‌ ಮೊರೆ!

By Web DeskFirst Published Sep 23, 2019, 10:30 AM IST
Highlights

ಸುಳ್ಳು ಸುದ್ದಿ ಹಬ್ಬಿಸಲು ಕೆಬಿಸಿಗೆ ಪಾಕ್‌ ಮೊರೆ| ವಾಟ್ಸಪ್‌ ಗ್ರೂಪ್‌ ಸೃಷ್ಟಿಸಿ ಟ್ರಾಪ್‌| ಪಾಕ್‌ನಿಂದ ಮಾಹಿತಿ ಕಳ್ಳತನಕ್ಕೆ ಮತ್ತೊಂದು ಕುತಂತ್ರ

ನವದೆಹಲಿ[ಸೆ.23]: ಹನಿ ಟ್ರಾಪ್‌, ಕಂಪ್ಯೂಟರ್‌ ಹ್ಯಾಕಿಂಗ್‌ ಮೂಲಕ ಭಾರತೀಯ ನಾಗರಿಕರ ಹಾಗೂ ಸೇನೆಯ ವೈಯಕ್ತಿಕ ಮಾಹಿತಿಗೆ ಕನ್ನ ಹಾಕುತ್ತಿದ್ದ ಪಾಕಿಸ್ತಾನ, ಈಗ ಹೊಸದೊಂದು ತಂತ್ರದ ಮೂಲಕ ಮಾಹಿತಿ ಕಳ್ಳತನ ಮಾಡುತ್ತಿದೆ ಎನ್ನುವ ವಿಚಾರ ಬೆಳೆಕಿಗೆ ಬಂದಿದೆ.

ಫೇಕ್‌ ನ್ಯೂಸ್‌ ವಿರುದ್ಧ ಸಮರ ಯಾವ ದೇಶದಲ್ಲಿ ಹೇಗಿದೆ?

Latest Videos

ನಕಲಿ ಸಮಾಜಿಕ ಜಾಲತಾಣ ಖಾತೆಗಳ ಮೂಲಕ ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ನಡೆಸಿಕೊಡುವ ಕೌನ್‌ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದ ಹೆಸರಿನಲ್ಲಿ ವೈಯಕ್ತಿಕ ಮಾಹಿತಿಗಳನ್ನು ಕದ್ದು, ಸುಳ್ಳು ಸುದ್ದಿ ಹರಡಲಾಗುತ್ತದೆ ಎಂದು ತಿಳಿದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ಸುಳ್ಳು ಸುದ್ದಿ ಹಬ್ಬಿಸಿದರೆ 5 ಕೋಟಿ ದಂಡ, 10 ವರ್ಷ ಜೈಲು ಶಿಕ್ಷೆ ಖಚಿತ!

ವಾಟ್ಸಪ್‌ ಗ್ರೂಪ್‌ಗಳ ಮೂಲಕ ನಕಲಿ ಕೆಬಿಸಿ ಪ್ರಶ್ನೆಗಳನ್ನು ಕಳುಹಿಸಿ, ಮಾಹಿತಿ ಸಂಗ್ರಹಿಸಲಾಗುತ್ತದೆ. ಗ್ರೂಪ್‌ಗಳ ಅಡ್ಮಿನ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿಗಳು ಇದ್ದು, ಭಾರತೀಯರ ಗೌಪ್ಯ ಮಾಹಿತಿಗೆ ಕನ್ನ ಹಾಕುತ್ತಿದ್ದಾರೆ ಎಂದು ಸೈಬರ್‌ ಸೆಲ್‌ ರಕ್ಷಣಾ ಇಲಾಖೆಗೆ ಮಾಹಿತಿ ನೀಡಿದ್ದು, ಎಚ್ಚರದಿಂದ ಇರುವಂತೆ ರಕ್ಷಣಾ ಇಲಾಖೆ ನಾಗರಿಕರಿಗೆ ಸೂಚನೆ ನೀಡಿದೆ. ಅಲ್ಲದೇ ಇಂಥ ಗ್ರೂಪ್‌ಗಳಿಂದ ತಕ್ಷಣ ಹೊರ ಬರಬೇಕು. ವಾಟ್ಸಪ್‌ ಸೆಕ್ಯೂರಿಟಿಯನ್ನು ಬಳಕೆದಾರರು ಬಲಿಷ್ಠಗೊಳಿಸಬೇಕು ಎಂದು ಹೇಳಿದೆ.

ಬಿಸಿಯೂಟ ತಯಾರಿಕೆಗೆ ಕೆಬಿಸಿಯಲ್ಲಿ 1 ಕೋಟಿ!

ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಪಾಕಿಸ್ತಾನ, ನಾಗರಿಕರನ್ನು ಹಾಗೂ ಸೇನೆಯನ್ನು ಗುರಿಯಾಗಿಸಿಕೊಂಡು ಮಾಹಿತಿ ಕದಿಯುವ ಪ್ರಯತ್ನಗಳನ್ನು ಹೆಚ್ಚಾಗಿ ಮಾಡುತ್ತಿದ್ದು, ಕೆಲ ದಿನಗಳ ಹಿಂದೆಯಷ್ಟೇ ಹಾಲಿ ಹಾಗೂ ಮಾಜಿ ಸೇನಾಧಿಕಾರಿಗಳ ಹೆಸರಿನಲ್ಲಿದ್ದ ನೂರಾರು ಸಾಮಾಜಿಕ ಜಾಲತಾಣಗಳನ್ನು ಡಿಲೀಟ್‌ ಮಾಡಲಾಗಿತ್ತು.

ಉತ್ತರ ಗೊತ್ತಿದ್ರೂ ಏಳು ಕೋಟಿ ಜಸ್ಟ್‌ ಮಿಸ್‌!

click me!