ಹೈಕೋರ್ಟ್‌ ಆದೇಶ: ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ ಮರುಸರ್ವೆ

Published : Feb 05, 2017, 07:41 AM ISTUpdated : Apr 11, 2018, 12:45 PM IST
ಹೈಕೋರ್ಟ್‌ ಆದೇಶ: ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ ಮರುಸರ್ವೆ

ಸಾರಾಂಶ

ರಾಜಕಾಲುವೆ ಒತ್ತುವರಿ ಆರೋಪ | ನಾಳೆ ಸರ್ವೆ ನಡೆಸಲಿರುವ ಪಾಲಿಕೆ

ಬೆಂಗಳೂರು (ಫೆ.06): ಜೆ.ಸಿ.ನಗರದ ಮಠದ ಹಳ್ಳಿಯ ಬಳಿ ರಾಜಕಾಲುವೆ ಒತ್ತುವರಿ ಆರೋಪ ಎದುರಿಸುತ್ತಿರುವ ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ ಪ್ರಕರಣ ಸಂಬಂಧ ವಾರದೊಳಘೆ ಸರ್ವೆ ನಡೆಸಿ ಕ್ರಮಕೈಗೊಳ್ಳುವಂತೆ ಹೈಕೋರ್ಟ್‌ ಆದೇಶಿಸಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಮರುಸರ್ವೆಗೆ ಸಿದ್ಧತೆ ನಡೆಸಿದೆ.

ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ ಒತ್ತುವರಿ ಸಂಬಂಧ ಫೆ.2ರಂದು ಹೈಕೋರ್ಟ್‌ ಆದೇಶ ಹೊರಡಿಸಿದ್ದು, ವಾರದೊಳಗೆ ಮರುಸರ್ವೆ ನಡೆಸಿ, ಕ್ರಮ​ಕೈಗೊಳ್ಳುವಂತೆ ಪಾಲಿಕೆಗೆ ಸೂಚನೆ ನೀಡಿದೆ. ಈ ಹಿನ್ನೆ​ಲೆಯಲ್ಲಿ ಬೃಹತ್‌ ಮಳೆನೀರುಗಾಲುವೆ ವಿಭಾ​ಗದ ಮುಖ್ಯ ಎಂಜಿನಿಯರ್‌, ಕಂದಾಯ ಇಲಾ​ಖೆಯ ಭೂ ದಾಖಲೆಗಳ ಜಂಟಿ ಆಯುಕ್ತರಿಗೆ ಪತ್ರ ಬರೆದು ಮರುಸರ್ವೆ ನಡೆಸುವಂತೆ ಕೋರಿದ್ದಾರೆ.

ಅದರಂತೆ ಸೋಮವಾರ ಅಪಾರ್ಟ್‌ಮೆಂಟ್‌ ಸರ್ವೆ ನಡೆಯಲಿದ್ದು, ಒತ್ತುವರಿಯಾಗಿರುವುದು ಸಾಬೀತಾದರೆ ಕೂಡಲೇ ತೆರವು ಕಾರ್ಯಾಚರಣೆ ನಡೆಸಲಾಗುವುದು. ಒಂದೊಮ್ಮೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗದಿದ್ದರೆ ಅದು ನ್ಯಾಯಾಂಗ ನಿಂದನೆಯಾಗಲಿದೆ. ಹೀಗಾಗಿ ಸೋಮವಾರ ಮರುಸರ್ವೆ ನಡೆಸಿ ಕೂಡಲೇ ಕಟ್ಟಡ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆಯ ಬೃಹತ್‌ ಮಳೆ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಸಿದ್ದೇಗೌಡ ತಿಳಿಸಿದ್ದಾರೆ.
ಈ ಹಿಂದೆ ಅಪಾರ್ಟ್‌ಮೆಂಟ್‌ ಒತ್ತುವರಿಯಾಗಿ ರುವ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಹಾಗೂ ಸ್ಥಳೀಯ ಶಾಸಕ ವೈ.ನಾರಾಯಣಸ್ವಾಮಿ ಒತ್ತುವರಿ ತೆರವು ಕಾರ್ಯಾ​ಚರಣೆ ನಡೆಸದಂತೆ ಬಿಬಿಎಂಪಿ ಅಧಿಕಾರಿ​ಗಳನ್ನು ತಡೆದಿದ್ದರು. ಜತೆಗೆ ಪಾಲಿಕೆಯ ಕ್ರಮವನ್ನು ಖಂಡಿಸಿ ಹೈಕೋರ್ಟ್‌ ಮೊರೆಹೋಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾವೇರಿ: ಪರೀಕ್ಷೆಗೆ ಹೆದರಿ ಮೊರಾರ್ಜಿ ವಸತಿ ಶಾಲೆಯ 5 ವಿದ್ಯಾರ್ಥಿಗಳ ರಾತ್ರೋ ರಾತ್ರಿ ಕಾಂಪೌಂಡ್‌ ಜಿಗಿದು ನಾಪತ್ತೆ
'ರಾಮ-ಸೀತೆ' ನೋಡಿದಂತೆ ಆಗ್ತಿದೆ.. ರಶ್ಮಿಕಾ-ವಿಜಯ್ ಮದುವೆ ಫೋಟೋ ನೋಡಿ ಬಾಲಿವುಡ್‌ ಪೇಜ್ ಜೈಕಾರ!