ನಿತ್ಯವೂ ಈ ಹಳ್ಳಿಯಲ್ಲಿ ಧ್ವನಿವರ್ಧಕಗಳ ಮೂಲಕ ಗ್ರಾಮಸ್ಥರಿಂದ ರಾಷ್ಟ್ರಗೀತೆಯ ಝೇಂಕಾರ

Published : Jan 06, 2018, 09:12 PM ISTUpdated : Apr 11, 2018, 12:41 PM IST
ನಿತ್ಯವೂ ಈ ಹಳ್ಳಿಯಲ್ಲಿ ಧ್ವನಿವರ್ಧಕಗಳ ಮೂಲಕ ಗ್ರಾಮಸ್ಥರಿಂದ ರಾಷ್ಟ್ರಗೀತೆಯ ಝೇಂಕಾರ

ಸಾರಾಂಶ

ಫರಿದಾಬಾದ್ ಜಿಲ್ಲೆಯ ಜಮ್ಮಿಕುಂಟಾ ಗ್ರಾಮ ನಿತ್ಯವೂ ರಾಷ್ಟ್ರಗೀತೆ ಮೇಳೈಸುವ ಗ್ರಾಮ.

ಫರಿದಾಬಾದ್(ಜ.06): ಈ ಗ್ರಾಮದಲ್ಲಿ ನಿತ್ಯ ಬೆಳಗಾದರೆ ರಾಷ್ಟ್ರಗೀತೆಯ ಝೇಂಕಾರ ಮೊಳಗುತ್ತದೆ. ಮುಂಜಾನೆ 8 ಗಂಟೆಗೆ ಹಳ್ಳಿಯ 5 ಸಾವಿರ ಜನ 'ಜನಗಣಮನ' ಹಾಡುತ್ತಾರೆ.

ರಾಷ್ಟ್ರಗೀತೆ ಹಾಡುವುದಕ್ಕಾಗಿಯೆ ಗ್ರಾಮದಾದ್ಯಂತ 20 ಲೌಡ್' ಸ್ಪೀಕರ್'ಗಳನ್ನು ಅಳವಡಿಸಲಾಗಿದೆ. ಜೊತೆಗೆ 20 ಸಿಸಿ ಟಿವಿಗಳು ಕೂಡ ಇವೆ. ಫರಿದಾಬಾದ್ ಜಿಲ್ಲೆಯ ಜಮ್ಮಿಕುಂಟಾ ಗ್ರಾಮ ನಿತ್ಯವೂ ರಾಷ್ಟ್ರಗೀತೆ ಮೇಳೈಸುವ ಗ್ರಾಮ. ಇದೇ ಮೊದಲ ಬಾರಿಗೆ ಹರ್ಯಾಣದ ಗ್ರಾಮವೊಂದು ರಾಷ್ಟ್ರಗೀತೆ ಹಾಡಲು ಲೌಡ್ ಸ್ಪೀಕರ್ ಸೌಲಭ್ಯ ಹೊಂದಿದ್ದು,  ಭಾರತದಲ್ಲಿ ಈ ರೀತಿ ಸೌಲಭ್ಯ ಹೊಂದಿರುವ ಎರಡನೇ ಗ್ರಾಮವಾಗಿರುವುದು ಭಕನ್'ಪುರ್.

ಈ ವ್ಯವಸ್ಥೆ ಜಾರಿಗೊಳಿಸುವುದಕ್ಕಾಗಿಯೇ ಗ್ರಾಮದ ಮುಖ್ಯಸ್ಥರಾದ ಸಚಿನ್ 8 ಲಕ್ಷ ರೂ. ಹಣ ವ್ಯಯಿಸಿದ್ದು, ತಮ್ಮ ಮನೆಯಿಂದಲೇ ಧ್ವನಿವರ್ಧಕ ಹಾಗೂ ಸಿಸಿಟಿವಿ ಕಂಟ್ರೋಲ್ ಹೊಂದಿದ್ದು, ಯಾರೊಬ್ಬರೂ ರಾಷ್ಟ್ರಗೀತೆ ಹಾಡುವುದನ್ನು ತಪ್ಪಿಸಿಕೊಳ್ಳದಂತೆ ಮಾಡುವುದು ಈ ಉದ್ದೇಶವಾಗಿದೆ' ಎನ್ನುತ್ತಾರೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Live: IPL 2026 - ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!
Karnataka News Live: ಮುಳ್ಳಯ್ಯನಗಿರಿಯಲ್ಲಿ ಸೃಷ್ಟಿಯಾಯ್ತು ‘ಮಿನಿ ಹಿಮಾಲಯ’ - ಮುಂಗಾರಿಗೂ ಮುನ್ನವೇ ಮಂಜಿನ ನಗರಿಯಾದ ಕಾಫಿನಾಡು!