ನೆರೆ ಪೀಡಿತ ಪ್ರದೇಶಗಳಿಗೆ ಅನರ್ಹ ಶಾಸಕ ವಿಶ್ವನಾಥ್ ಭೇಟಿ

By Web DeskFirst Published Aug 10, 2019, 4:05 PM IST
Highlights

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾದ ಎಚ್.ವಿಶ್ವನಾಥ್ ಬಿಜೆಪಿ ಮುಖಂಡರೊಂದಿಗೆ ಪ್ರವಾಹ ಪೀಡಿತ ಕ್ಷೇತ್ರಗಳಲ್ಲಿ ಸಂಚರಿಸಿದ್ದಾರೆ. ಆ ಮೂಲಕ ತಮ್ಮನ್ನು ಆರಿಸಿರುವ ಜನರಿಗೆ ಸಹಕರಿಸಲು ಮುಂದಾಗಿದ್ದಾರೆ. 

ಮೈಸೂರು [ಆ.10]: ಜೆಡಿಎಸ್ ಅನರ್ಹ ಶಾಸಕ ಎಚ್. ವಿಶ್ವನಾಥ್ ತಮ್ಮನ್ನು ವಿಧಾನಸಭೆಗೆ ಆರಿಸಿ ಕಳುಹಿಸಿದ ಜನರು ದುಃಖ ಆಲಿಸಲು ಕ್ಷೇತ್ರದಲ್ಲಿ ಸಂಚರಿಸಿದ್ದಾರೆ. ಹುಣಸೂರು ವಿಧಾನಸಭಾ ವ್ಯಾಪ್ತಿಯಲ್ಲಿ ಲಕ್ಷ್ಣಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ನೆರೆಯಿಂದ ಜನರು ಪಡಬಾರದ ಪಾಡು ಪಡುತ್ತಿದ್ದಾರೆ. ಸಂತ್ರಸ್ತರ ಮನವಿ ಆಲಿಸಿದ್ದಾರೆ ವಿಶ್ವನಾಥ್.

ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿ ಅನರ್ಹರಾದ ಎಚ್. ವಿಶ್ವನಾಥ್ ಬಿಜೆಪಿ ಮುಖಂಡರ ಜೊತೆಯಲ್ಲಿಯೂ ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಶ್ವನಾಥ್ ಅವರ ಹುಣಸೂರಿನ ಮನೆ ಬಾಗಿಲಿಗೆ ಬಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಕರೆದೊಯ್ದಿದ್ದಾರೆ. ಬಳಿಕ ವಿಶ್ವನಾಥ್ ಹಾಗೂ ಸಂಸದ ಪ್ರತಾಪ್ ಸಿಂಹ ಜಂಟಿಯಾಗಿ ಜಿಲ್ಲೆಯ ಪ್ರವಾಸ ಮಾಡಿದ್ದು, ಜನರ ಸಮಸ್ಯೆ ಆಲಿಸಿದ್ದಾರೆ.

ವಿಶ್ವನಾಥ್ ಅವರು ದೋಸ್ತಿ ಸರ್ಕಾರದ ಆಡಳಿತದಿಂದ ಅಸಮಾಧಾನಗೊಂಡು ಜೆಡಿಎಸ್ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದರು. ಬಳಿಕ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್, ವಿಶ್ವನಾಥ್ ಅವರನ್ನು ಅನರ್ಹರನ್ನಾಗಿಸಿದರು. ಅದಾದ ಬಳಿಕ ಅವರನ್ನು ಜಿಡಿಎಸ್ ಉಚ್ಛಾಟಿಸಿದೆ. ಇದೀಗ ಬಿಜೆಪಿ ಮುಖಂಡರ ಜೊತೆ ಸಂಚರಿಸುತ್ತಿದ್ದು, ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.. 

click me!