
ಹೈದರಾಬಾದ್(ಅ.11): ಒಲಿಂಪಿಕ್ಸ್ ಜಮ್ನಾಸ್ಟಿಕ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಸಾಧನೆ ಮಾಡಿದ ದೀಪಾ ಅವರು ತಮಗೆ ಬಂದಿದ್ದ ಐಷಾರಾಮಿ ಕಾರು ಉಡುಗೊರೆಯನ್ನು ಹಿಂತಿರುಗಿಸಲು ನಿರ್ಧರಿಸಿದ್ದಾರೆ.
ದೀಪಾ ಅವರ ಸಾಧನೆಗೆ ಮೆಚ್ಚಿ ಹೈದರಾಬಾದಿನ ಬಾಡ್ಮಿಂಟನ್ ಅಸೋಸಿಯೇಷನ್ನ ಅಧ್ಯಕ್ಷ ವಿ ಚಾಮುಂಡೇಶ್ವರನಾಥ್ ಅವರು ಬಿಎಂಡಬ್ಲ್ಯೂ ಕಾರನ್ನು ಉಡಗೊರೆಯಾಗಿ ನೀಡಿದ್ದರು.
ಚಾಮುಂಡೇಶ್ವರನಾಥ್ ಅವರ ಅಪ್ತ ಮಿತ್ರ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸೆಪ್ಟೆಂಬರ್ ತಿಂಗಳಿನಲ್ಲಿ ದೀಪಾ ಅವರಿಗೆ ಕಾರಿನ ಕೀ ನೀಡಿದ್ದರು.
ದೀಪಾ ಅವರ ಆಪ್ತ ವರ್ಗದವರ ಪ್ರಕಾರ, ದೀಪಾ ಅವರಿಗೆ ಈ ಐಷಾರಾಮಿ ಕಾರನ್ನು ನಿಭಾಯಿಸಲು ಕಷ್ಟವಾಗುತ್ತಿದೆಯಂತೆ. ಅಗರ್ತಲಾದಂಥ ಸಣ್ಣ ನಗರದಲ್ಲಿ ಇಂಥ ಕಾರನ್ನು ಇಟ್ಟುಕೊಂಡು ನಿಭಾಯಿಸುವುದು ಕಷ್ಟ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.