
ಉತ್ತರ ಪ್ರದೇಶ(ಮಾ.21): ಯೋಗಿ ಆದಿತ್ಯನಾಥ್, ಉ. ಪ್ರದೇಶ ಸಿಎಂ ಆದ ಬಳಿಕ ಈಗ ದೇಶಾದ್ಯಂತ ಚರ್ಚೆಯಲ್ಲಿರುವ ವ್ಯಕ್ತಿ. ಯೋಗಿ ಆದಿತ್ಯನಾಥ್ ಮುಸ್ಲಿಂ ವಿರೋಧಿ ಅನ್ನೋದು ಅವರ ವಿರೋಧಿಗಳ ವಾದ. ಇದಕ್ಕೆ ತಕ್ಕಂತೆ ಯೋಗಿ ಆದಿತ್ಯನಾಥ್'ರ ಹಲವು ಹೇಳಿಕೆಗಳನ್ನೂ ನೋಡಿರಬಹುದು. ಆದರೆ, ಯೋಗಿ ಆದಿತ್ಯನಾಥರ ಮಠದ ಒಳಗೆ ಕಾಣುವ ಚಿತ್ರಣವೇ ಬೇರೆ. ಯೋಗಿಯ ಮಠದಲ್ಲಿ ಮುಸ್ಲಿಮರದ್ದೇ ಕಾಯಕ.
ಗೋರಖ್ಪುರದ ಮಠ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರ ಕರ್ಮಭೂಮಿ. ಯೋಗಿ ಆದಿತ್ಯನಾಥರ ಹೇಳಿಕೆಗಳನ್ನು ನೋಡಿದವರು, ಕೇಳಿದವರಿಗೆ ಕಾಣಿಸುವ ಯೋಗಿಯೇ ಬೇರೆ. ನಿಜವಾದ ಯೋಗಿಯೇ ಬೇರೆ. ಅದು ಅವರ ಮಠದಲ್ಲಿ ಎದ್ದು ಕಾಣುತ್ತದೆ.
‘ಯೋಗಿ’ಯ ಮಠದಲ್ಲಿ ಮುಸ್ಲಿಮರೇ ಕಾಯಕ ಯೋಗಿಗಳು
-ಯಾಸಿನ್ ಅನ್ಸಾರಿ - ಗೋರಖನಾಥ ದೇಗುಲದ ಕ್ಯಾಷಿಯರ್
-ಮೊಹಮ್ಮದ್ ಮುಥಾಕಿಂ - ದೇಗುಲದಲ್ಲಿ ಬಳೆ ಅಂಗಡಿ ವ್ಯಾಪಾರಿ
-ಹಮೀದಾ ಬೇಗಂ - ಗೋರಖನಾಥ ಮಠದ ಅಡುಗೆ ಮನೆ ಉಸ್ತುವಾರಿ
-ಯಾಸ್ಮಿನ್ ಅನ್ಸಾರಿ - ಮಠ ಮತ್ತು ದೇಗುಲದ ಸೂಪರ್ ವೈಸರ್
ಇವರೆಲ್ಲ ನಿನ್ನೆ ಮೊನ್ನೆಯಿಂದ ಇರುವವರಲ್ಲ. ಆದಿತ್ಯನಾಥರು ರಾಜಕೀಯಕ್ಕೆ ಬರುವ ಮುನ್ನ, ಸುಮಾರು 20-30 ವರ್ಷಗಳಿಂದ ಮಠವನ್ನು ನೋಡಿಕೊಳ್ಳುತ್ತಿರುವವರು. ಆದಿತ್ಯನಾಥರ ಮುದ್ದಿನ ಹಸು ನಂದಿನಿಯನ್ನು ನೋಡಿಕೊಳ್ಳುವವ ಕೂಡಾ ಮುಸ್ಲಿಂ.
ಅವರೆಲ್ಲ ಯೋಗಿ ಆದಿತ್ಯನಾಥರನ್ನ ಚೋಟೇ ಮಹಾರಾಜ್ ಎನ್ನುತ್ತಾರಂತೆ..!
ಆದಿತ್ಯನಾಥ್ ಸಿಎಂ ಆದ ದಿನ ಇಲ್ಲಿನ ಮುಸ್ಲಿಮರೂ ಕುಣಿದು ಕುಪ್ಪಳಿಸಿದ್ದರು. ಏಕೆಂದರೆ, ಒಂದಾನೊಂದು ಕಾಲದಲ್ಲಿ ಸ್ಮಗ್ಲರ್ಗಳು, ರೌಡಿಗಳ ಕೊಂಪೆಯಾಗಿದ್ದ ಗೋರಖ್ಪುರದಲ್ಲಿ ರಕ್ಷಣೆ ಕೊಟ್ಟಿದ್ದು ಸರ್ಕಾರವಲ್ಲ. ಯೋಗಿ ಆದಿತ್ಯನಾಥ್.
ಶುದ್ಧವಾಗುತ್ತಿದೆ ಉ.ಪ್ರದೇಶ ಮುಖ್ಯಮಂತ್ರಿ ನಿವಾಸ..!
ಇಷ್ಟಿದ್ದರೂ, ಯೋಗಿ ಆದಿತ್ಯನಾಥ್ ಸಂಪೂರ್ಣ ಆಸ್ತಿಕ. ಸಂಪ್ರದಾಯ ಶರಣ. ಸಿಎಂ ಆದ ನಂತರ ಮುಖ್ಯಮಂತ್ರಿ ನಿವಾಸಕ್ಕೆ ಶುದ್ಧೀಕರಣ ಮಾಡಿಸುತ್ತಿದ್ಧಾರೆ. 9 ಪುರೋಹಿತರಿಂದ ಅಖಿಲೇಶ್ ಇದ್ದ ಮನೆಯಲ್ಲಿ ಹೋಮ ಹವನ ಮಾಡಿಸುತ್ತಿದ್ಧಾರೆ. ಗಂಗಾಜಲ ಚಿಮುಕಿಸಿ, ಮನೆಯಲ್ಲಿ ಸ್ವಸ್ತಿಕ್ ಚಿಹ್ನೆ ಬರೆಸಿದ್ದಾರೆ. ಎಲ್ಲವೂ ಆದ ಮೇಲೆ ಮುಖ್ಯಮಂತ್ರಿಯಾಗಿ ಗೃಹ ಪ್ರವೇಶ ಮಾಡಲಿದ್ದಾರೆ ಯೋಗಿ ಆದಿತ್ಯನಾಥ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.