ಜಾಕಿಯಾ ಜಾಫ್ರಿಗೆ ಹಿನ್ನಡೆ; 2002 ರ ಗುಜರಾತ್ ಗಲಭೆಯಲ್ಲಿ ಮೋದಿ ಪಾತ್ರವಿಲ್ಲ ಎಂದ ನ್ಯಾಯಾಲಯ

By Suvarna Web DeskFirst Published Oct 5, 2017, 3:52 PM IST
Highlights

2002 ರ ಗುಜರಾತ್ ಗಲಭೆಯ ಬಗ್ಗೆ ಎಸ್’ಐಟಿ ಸಲ್ಲಿಸಿದ್ದ ವರದಿಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಜಾಕಿಯಾ ಜಾಫ್ರಿಗೆ ಹಿನ್ನಡೆಯಾಗಿದೆ. ಅಹ್ಮದಾಬಾದ್ ಹೈಕೋರ್ಟ್ ಎಸ್’ಐಟಿ ವರದಿಯನ್ನು ಎತ್ತಿ ಹಿಡಿದಿದೆ.

ನವದೆಹಲಿ (ಅ.05): 2002 ರ ಗುಜರಾತ್ ಗಲಭೆಯ ಬಗ್ಗೆ ಎಸ್’ಐಟಿ ಸಲ್ಲಿಸಿದ್ದ ವರದಿಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಜಾಕಿಯಾ ಜಾಫ್ರಿಗೆ ಹಿನ್ನಡೆಯಾಗಿದೆ. ಅಹ್ಮದಾಬಾದ್ ಹೈಕೋರ್ಟ್ ಎಸ್’ಐಟಿ ವರದಿಯನ್ನು ಎತ್ತಿ ಹಿಡಿದಿದೆ.

2002 ರಲ್ಲಿ ನಡೆದ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 59 ಮಂದಿ ಸಚಿವರು ಪಿತೂರಿ ನಡೆಸಿಲ್ಲ. ಗಲಭೆಯಲ್ಲಿ ಅವರ ಪಾತ್ರವಿಲ್ಲ ಎಂದು ವಿಶೇಷ ತನಿಖಾ ತಂಡ ಸಲ್ಲಿಸಿದ್ದ ವರದಿಯನ್ನು ಅಹ್ಮದಾಬಾದ್ ಹೈಕೋರ್ಟ್ ಎತ್ತಿ ಹಿಡಿದಿದೆ.

ಗಲಭೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಮುಖಂಡ ಇಶಾನ್ ಜಾಫ್ರಿ  ಪತ್ನಿ ಜಾಕಿಯಾ ಜಾಫ್ರಿ ಮೇಲ್ಮನವಿ ಸಲ್ಲಿಸಿದ್ದರು. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಗಲಭೆಯಲ್ಲಿ ಭಾರೀ ಪಿತೂರಿ ನಡೆಸಿದ್ದರು ಎಂದು ಆರೋಪಿಸಿದ್ದರು. ಇವರ ಆರೋಪವನ್ನು ಕೋರ್ಟ್ ತಳ್ಳಿ ಹಾಕಿದೆ. ಹೆಚ್ಚಿನ ತನಿಖೆಗೆ ಉನ್ನತ ಮಟ್ಟದ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅಹ್ಮದಾಬಾದ್ ಹೈಕೋರ್ಟ್ ಜಾಕಿಯಾ ಜಾಫ್ರಿಗೆ ಅವಕಾಶ ನೀಡಿದೆ.

click me!