
ಗಾಂಧಿನಗರ[ಜು.28]: ಗುಜರಾತ್ ವಿಧಾನಸಭೆ 1993ರ ದಾಖಲೆಯೊಂದನ್ನು ಬ್ರೇಕ್ ಮಾಡಿದೆ. ದಿನವೊಂದರಲ್ಲಿ 12 ಗಂಟೆ ಒಂಬತ್ತು ನಿಮಿಷಗಳ ಕಾಲ ಕಲಾಪ ನಡೆಸುವ ಮೂಲಕ ವಿಧಾನಸಭೆ ಸದಸ್ಯರು ಈ ಹಿಂದಿನ ದಾಖಲೆಯನ್ನು ಬದಿಗಟ್ಟಿ, ಹೊಸ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾದರು.
ಶುಕ್ರವಾರ-ಶನಿವಾರ ನಿರಂತರವಾಗಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿಧಾನಸಭೆ ಸದಸ್ಯರನ್ನು ಅಭಿನಂದಿಸಿದ ಸ್ಪೀಕರ್, ಈ ಸುದೀರ್ಘ ಕಲಾಪ ಗುಜರಾತ್ ವಿಧಾನಸಭೆಯ ಐತಿಹಾಸಿಕ ದಾಖಲೆಯಾಗಿದೆ ಎಂದು ತಿಳಿಸಿದರು. 1993, ಜ.6ರಂದು 12 ಗಂಟೆ ಎಂಟು ನಿಮಿಷಗಳ ಸುದೀರ್ಘ ಕಲಾಪ ಈ ಹಿಂದಿನ ದಾಖಲೆಯಾಗಿತ್ತು. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಆರಂಭವಾದ ಕಲಾಪ ರಾತ್ರಿ 12.09ರ ತನಕ ನಡೆದಿದ್ದು, ಇದು ದಾಖಲೆಯಾಗಿದೆ.
ಅಷ್ಟೇ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಆರೋಗ್ಯಕರ ಬೆಳವಣಿಗೆ ಎಂದು ಸ್ಪೀಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.