ಹೋಟೆಲ್'ನಲ್ಲಿ ನೆಮ್ಮದಿಯಾಗಿ ಊಟ ಮಾಡಿರಿ; ಜಿಎಸ್'ಟಿ ದರ ಇನ್ನೂ ಕಡಿಮೆ

Published : Nov 10, 2017, 09:09 PM ISTUpdated : Apr 11, 2018, 12:35 PM IST
ಹೋಟೆಲ್'ನಲ್ಲಿ ನೆಮ್ಮದಿಯಾಗಿ ಊಟ ಮಾಡಿರಿ; ಜಿಎಸ್'ಟಿ ದರ ಇನ್ನೂ ಕಡಿಮೆ

ಸಾರಾಂಶ

* ಬಹುತೇಕ ಹೋಟೆಲ್ ಮತ್ತು ರೆಸ್ಟೋರೆಂಟ್'ಗಳಿಗೆ ಜಿಎಸ್'ಟಿ ತೆರಿಗೆ 12%ನಿಂದ 5%ಗೆ ಇಳಿಕೆ * ಫೈವ್ ಸ್ಟಾರ್ ಹೋಟೆಲ್'ಗಳಿಗೆ ಜಿಎಸ್'ಟಿ ದರ 28%ನಿಂದ 18%ಗೆ ಇಳಿಕೆ * ಔಟ್'ಡೋರ್ ಕೆಟರಿಂಗ್ ಸೇವೆಗೆ 18% ಜಿಎಸ್'ಟಿ

ಬೆಂಗಳೂರು(ನ. 10): ಹೋಟೆಲ್ ಗ್ರಾಹಕರು ಮತ್ತು ಉದ್ಯಮಕ್ಕೆ ಖುಷಿಯ ಸುದ್ದಿ. ಜಿಎಸ್'ಟಿ ಕೌನ್ಸಿಲ್ ಹೋಟೆಲ್ ಮತ್ತು ರೆಸ್ಟೋರೆಂಟ್ ಮೇಲಿನ ಜಿಎಸ್'ಟಿ ದರವನ್ನು 5 ಪ್ರತಿಶತಕ್ಕೆ ತಗ್ಗಿಸಿದೆ. ಫೈವ್ ಸ್ಟಾರ್ ಹೋಟೆಲ್ ಹೊರತುಪಡಿಸಿ ಅದಕ್ಕಿಂತ ಕಡಿಮೆ ದರ್ಜೆಯ ಎಲ್ಲಾ ಹೋಟೆಲ್'ಗಳಿಗೂ ಈ ನೂತನ ದರ ಅನ್ವಯವಾಗಲಿದೆ.

ಫೈವ್ ಸ್ಟಾರ್ ಹೋಟೆಲ್'ಗಳು ಹಾಗೂ 7,500 ರೂಪಾಯಿಗಿಂತ ಹೆಚ್ಚು ಬೆಲೆಯ ರೂಮು ಬಾಡಿಗೆ ಇರುವ ಹೋಟೆಲ್'ಗಳ ಮೇಲೆ 18 ಪ್ರತಿಶತ ತೆರಿಗೆ ವಿಧಿಸಲು ಜಿಎಸ್'ಟಿ ಮಂಡಳಿ ನಿರ್ಧರಿಸಿದೆ. ಔಟ್'ಡೋರ್ ಕೆಟರಿಂಗ್ ಸೇವೆಗಳಿಗೂ 18% ಜಿಎಸ್'ಟಿ ವಿಧಿಸಲಾಗುವುದು.

ಈಗಿರುವ ಜಿಎಸ್'ಟಿ ವ್ಯವಸ್ಥೆಯಲ್ಲಿ ಎಸಿ ಇಲ್ಲದ ರೆಸ್ಟೋರೆಂಟ್'ಗಳಿಗೆ 12%, ಎಸಿ ರೆಸ್ಟೋರೆಂಟ್'ಗಳಿಗೆ 18%, ಪಂಚತಾರಾ ಹೋಟೆಲ್'ಗಳಿಗೆ 28% ಜಿಎಸ್'ಟಿ ಇದೆ.

ಉದ್ದಿಮೆಗಳಿಗೆ ಇನ್'ಪುಟ್ ಟ್ಯಾಕ್ಸ್ ಕ್ರೆಡಿಟ್'ನ ಅವಕಾಶ ಕೊಡಲಾಗಿದೆ. ಇನ್'ಪುಟ್ ಟ್ಯಾಕ್ಸ್ ಅಂದರೆ ಫೈನಲ್ ಪ್ರಾಡಕ್ಟ್'ಗೆ ಬಳಸುವ ವಸ್ತುಗಳ ಖರೀದಿ ವೇಳೆ ತೆರಿಗೆ ಪಾವತಿಸಿದ್ದರೆ ಅದು ಇನ್'ಪುಟ್ ಟ್ಯಾಕ್ಸ್ ಆಗುತ್ತದೆ. ಫೈನಲ್ ಪ್ರಾಡಕ್ಟ್'ಗೆ ತೆರಿಗೆ ಹಾಕುವಾಗ ಇನ್'ಪುಟ್ ಟ್ಯಾಕ್ಸ್'ನ ವಿನಾಯಿತಿಯನ್ನು ಜೋಡಿಸಿ ಅಂತಿಮ ತೆರಿಗೆ ಮೊತ್ತವನ್ನು ಕಡಿಮೆಗೊಳಿಸಬಹುದು.

ಅಸ್ಸಾಮ್ ರಾಜಧಾನಿ ಗುವಾಹತಿಯಲ್ಲಿ ಇಂದು ನಡೆದ ಜಿಎಸ್'ಟಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸುಮಾರು 170ಕ್ಕೂ ಹೆಚ್ಚು ವಸ್ತುಗಳ ಮೇಲಿನ ತೆರಿಗೆ ಮೊತ್ತವನ್ನು 28%ನಿಂದ 18%ಗೆ ಇಳಿಕೆ ಮಾಡಲಾಗಿದೆ. ಸಿಗರೇಟ್, ಆಲ್ಕೋಹಾಲ್ ಸೇರಿದಂತೆ 50 ಐಟಂಗಳನ್ನು ಮಾತ್ರ 28% ತೆರಿಗೆ ಬ್ರಾಕೆಟ್'ನಲ್ಲಿ ಉಳಿಸಿಕೊಳ್ಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಂಗ್ಲಾ: ಹೊತ್ತಿ ಉರಿದ ಹಿಂದೂ ಶಿಕ್ಷಕನ ಮನೆ
ದಿಲ್ಲಿ ಸ್ಫೋಟ ನಂಟಿನ ಅಲ್‌ ಫಲಾ ವಿವಿಯ ₹140 ಕೋಟಿ ಆಸ್ತಿ ಜಪ್ತಿ