ಜಿಎಸ್ಟಿ ದರ ಬಗ್ಗೆ ಗೊಂದಲವೇ? ಇಲ್ಲಿದೆ ‘ಆ್ಯಪ್’ ಪರಿಹಾರ

Published : Jul 08, 2017, 01:51 PM ISTUpdated : Apr 11, 2018, 12:37 PM IST
ಜಿಎಸ್ಟಿ ದರ ಬಗ್ಗೆ ಗೊಂದಲವೇ? ಇಲ್ಲಿದೆ ‘ಆ್ಯಪ್’ ಪರಿಹಾರ

ಸಾರಾಂಶ

ದೇಶದಲ್ಲಿ ನೂತನವಾಗಿ ಜಾರಿಗೆ ಬಂದಿರುವ ಜಿಎಸ್ಟಿ ವ್ಯವಸ್ಥೆಯಲ್ಲಿ ಹೊಸ ತೆರಿಗೆ ದರಗಳ ಬಗ್ಗೆ ಗೊಂದಲಕ್ಕೊಳಗಾಗಿದ್ದೀರಾ? ಹಾಗಾದರೆ ಚಿಂತೆ ಬಿಡಿ. ಜಿಎಸ್ಟಿ ದರಗಳ ವಿವರವೀಗ ನಿಮ್ಮ ಬೆರಳ ತುದಿಯಲ್ಲೇ ಇದೆ. ಸಾರ್ವಜನಿಕರು/ ಗ್ರಾಹಕರು ಜಿಎಸ್ಟಿ ದರಗಳನ್ನು ಸುಲಭವಾಗಿ ತಿಳಿದುಕೊಳ್ಳುವಂತಾಗಲು ಸರ್ಕಾರ ಮೊಬೈಲ್ ಆ್ಯಪ್‌’ನ್ನು ಬಿಡುಗಡೆಮಾಡಿದೆ.

ನವದೆಹಲಿ (ಜು. 08): ದೇಶದಲ್ಲಿ ನೂತನವಾಗಿ ಜಾರಿಗೆ ಬಂದಿರುವ ಜಿಎಸ್ಟಿ ವ್ಯವಸ್ಥೆಯಲ್ಲಿ ಹೊಸ ತೆರಿಗೆ ದರಗಳ ಬಗ್ಗೆ ಗೊಂದಲಕ್ಕೊಳಗಾಗಿದ್ದೀರಾ? ಹಾಗಾದರೆ ಚಿಂತೆ ಬಿಡಿ.

ಜಿಎಸ್ಟಿ ದರಗಳ ವಿವರವೀಗ ನಿಮ್ಮ ಬೆರಳ ತುದಿಯಲ್ಲೇ ಇದೆ. ಸಾರ್ವಜನಿಕರು/ ಗ್ರಾಹಕರು ಜಿಎಸ್ಟಿ ದರಗಳನ್ನು ಸುಲಭವಾಗಿ ತಿಳಿದುಕೊಳ್ಳುವಂತಾಗಲು ಸರ್ಕಾರ ಮೊಬೈಲ್ ಆ್ಯಪ್‌’ನ್ನು ಬಿಡುಗಡೆಮಾಡಿದೆ.

ಜಿಎಸ್ಟಿಯ ಸಮಗ್ರ ಮಾಹಿತಿಯನ್ನೊಳಗೊಂಡ ಜಿಎಸ್ಟಿ ಫೈಂಡರ್ ಆ್ಯಪ್‌’ನ್ನು ಗ್ರಾಹಕರು, ವರ್ತಕರು, ಅಥವಾ ವಿದ್ಯಾರ್ಥಿಗಳು ಯಾರೇ ಬೇಕಾದರೂ ಎಲ್ಲೂ ಬೇಕಾದರೂ ಬಳಸಬಹುದಾಗಿದೆ, ಎಂದು ಆ್ಯಪ್‌’ನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಸಿಬಿಇಸಿ ಅಧ್ಯಕ್ಷೆ ವನಜಾ ಸರ್ನಾ ಹೇಳಿದ್ದಾರೆ.

ಆ್ಯ0ಡ್ರಾಯಿಡ್ ಫೋನ್ಗಳಿಗೆ ಸೂಕ್ತವಾದ ಆವೃತ್ತಿ ಗೂಗಲ್ ಪ್ಲೇಸ್ಟೋರ್’ನಲ್ಲಿ  ಉಚಿತವಾಗಿ ಲಭ್ಯವಿದ್ದು, ಆ್ಯಪಲ್ ಐಓಎಸ್ ಫೋನ್’ಗಳಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಹಣಕಾಸು ಇಲಾಖೆ ಹೇಳಿದೆ. [ಆ್ಯಪ್‌’ನ್ನು ಡೌನ್'ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ]. CBEC ಇಲಾಖೆಯ ವೆಬ್’ಸೈಟ್’ನಿಂದಲೂ ಈ ಆ್ಯಪನ್ನು ಸಾರ್ವಜನಿಕರು ಡೌನ್’ಲೋಡ್ ಮಾಡಿಕೊಳ್ಳಬಹುದಾಗಿದೆ.

ಡೌನ್’ಲೋಡ್ ಮಾಡಿದ ಬಳಿಕ ಆಫ್’ಲೈನ್ ಆಗಿದ್ದುಕೊಂಡೇ ಈ ಆ್ಯಪನ್ನು ಬಳಸಬಹುದಾಗಿದೆ ಕೂಡಾ. ವಿವಿಧ ವಸ್ತುಗಳಿಗೆ ಅನ್ವಯವಾಗುವ ಜಿಎಸ್ಟಿ ದರವನ್ನು ಗ್ರಾಹಕರು ಈ ಆ್ಯಪ್ನಲ್ಲಿ ಹುಡುಕಬಹುದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!