ಜಿ-20 ಶೃಂಗಸಭೆ: ಪಾಕ್ ವಿರುದ್ಧ ಮೋದಿ ದಾಳಿ

By Suvarna Web DeskFirst Published Jul 8, 2017, 1:14 PM IST
Highlights

ಜರ್ಮನಿಯ ಹ್ಯಾಂಬರ್ಗಿನಲ್ಲಿ ನಡೆಯುತ್ತಿರುವ ಜಿ-20 ಶರಂಗಸಭೆಯಲಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮ ಭಾಷಣದಲ್ಲಿ ಐಸಿಸ್, ಬೋಕೋ ಹರಾಮ್,  ಲಷ್ಕರೆ ತೊಯ್ಬಾ ಹಾಗೂ ಜೈಶೆ ಮೊಹಮ್ಮದ್ ಸಂಘಟನೆಗಳ ಹೆಸರನ್ನು ಪ್ರಸ್ತಾಪ ಮಾಡಿದ ಮೋದಿ, ದ್ವೇಷವನ್ನು ಹರಡುವುದು ಹಾಗೂ ಜನರನ್ನು ಸಾಯಿಸುವುದು ಆ ಸಂಘಟನೆಗಳ ಸಿದ್ಧಾಂತವಾಗಿದೆ ಎಂದಿದ್ದಾರೆ.

ಹ್ಯಾಂಬರ್ಗ್/ ನವದೆಹಲಿ: ಜರ್ಮನಿಯ ಹ್ಯಾಂಬರ್ಗಿನಲ್ಲಿ ನಡೆಯುತ್ತಿರುವ ಜಿ-20 ಶರಂಗಸಭೆಯಲಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ.

ತಮ್ಮ ಭಾಷಣದಲ್ಲಿ ಐಸಿಸ್, ಬೋಕೋ ಹರಾಮ್,  ಲಷ್ಕರೆ ತೊಯ್ಬಾ ಹಾಗೂ ಜೈಶೆ ಮೊಹಮ್ಮದ್ ಸಂಘಟನೆಗಳ ಹೆಸರನ್ನು ಪ್ರಸ್ತಾಪ ಮಾಡಿದ ಮೋದಿ, ದ್ವೇಷವನ್ನು ಹರಡುವುದು ಹಾಗೂ ಜನರನ್ನು ಸಾಯಿಸುವುದು ಆ ಸಂಘಟನೆಗಳ ಸಿದ್ಧಾಂತವಾಗಿದೆ ಎಂದಿದ್ದಾರೆ.

ಕೆಲವು ದೇಶಗಳು ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯನ್ನು ಬಳಸಿಕೊಳ್ಳುತ್ತಿವೆ ಎಂದು ಪಾಕಿಸ್ತಾನದ ಹೆಸರನ್ನತ್ತದೆ ಮೋದಿ ವಾಗ್ದಾಳಿ ನಡೆಸಿದ್ದಾರೆ. ಜಾಗತಿಕ ಸಮಸ್ಯೆಯಾಗಿರುವ ಭಯೋತ್ಪಾದನೆ ಪಿಡುಗನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ 11-ಅಂಶಗಳ ಕಾರ್ಯಸೂಚಿಯನ್ನು ಸಭೆಯಲ್ಲಿ ಮಂಡಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುತಿನ್ ಹಾಗೂ ಚೀನಾ ಅಧ್ಯಕ್ಷ ಶೀ ಜಿನ್’ಪಿಂಗ್ ಉಪಸ್ಥಿತಿಯಲ್ಲೇ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಜಾಗತಿಕ ಪ್ರತಿಕ್ರಿಯೆ ಬಗ್ಗೆ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನೆ ಹೋರಾಟದಲ್ಲಿ ಜಾಗತಿಕ ಪ್ರತಿಕ್ರಿಯೆ ಬಹಳ ದುರ್ಬಲವಾಗಿದೆ, ದೇಶಗಳ ನಡುವೆ ಹೆಚ್ಚಿನ ಸಹಕಾರದ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ.

click me!