ಜಿಎಸ್'ಟಿ: ನವೆಂವರ್'ನಿಂದ ತುಟ್ಟಿಯಾಗಲಿದೆ ಮದುವೆ ವೆಚ್ಚ

Published : Oct 24, 2017, 03:35 PM ISTUpdated : Apr 11, 2018, 12:54 PM IST
ಜಿಎಸ್'ಟಿ: ನವೆಂವರ್'ನಿಂದ ತುಟ್ಟಿಯಾಗಲಿದೆ ಮದುವೆ ವೆಚ್ಚ

ಸಾರಾಂಶ

ನವೆಂಬರ್‌ ತಿಂಗಳಿನಿಂದ ಆರಂಭಗೊಳ್ಳಲಿರುವ ಮದುವೆ ಋತುವಿನಲ್ಲಿ ಕುಟುಂಬವೊಂದು ಮಾಡುವ ವೆಚ್ಚವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾರಣಕ್ಕೆ ಶೇ 10 ರಿಂದ ಶೇ 15ರಷ್ಟು ತುಟ್ಟಿಯಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ವರದಿಯು ಅಂದಾಜಿಸಿದೆ.

ನವದೆಹಲಿ ((ಅ.24): ನವೆಂಬರ್‌ ತಿಂಗಳಿನಿಂದ ಆರಂಭಗೊಳ್ಳಲಿರುವ ಮದುವೆ ಋತುವಿನಲ್ಲಿ ಕುಟುಂಬವೊಂದು ಮಾಡುವ ವೆಚ್ಚವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾರಣಕ್ಕೆ ಶೇ 10 ರಿಂದ ಶೇ 15ರಷ್ಟು ತುಟ್ಟಿಯಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ವರದಿಯು ಅಂದಾಜಿಸಿದೆ.

ಮದುವೆ ಸಂಭ್ರಮ ಹೆಚ್ಚಿಸುವ ವಸ್ತ್ರ, ಚಿನ್ನಾಭರಣ ಖರೀದಿ, ಸಮಾರಂಭ ನಡೆಯುವ ಸಭಾಂಗಣದ ಬಾಡಿಗೆ, ಊಟೋಪಚಾರ, ಛಾಯಾಚಿತ್ರ, ವಿಡಿಯೊ ಚಿತ್ರೀಕರಣ ಸೇವೆಗೆ ಹೆಚ್ಚು ಹಣ ಪಾವತಿಸುವುದು ಈಗ ಅನಿವಾರ್ಯವಾಗಲಿದೆ. ಗರಿಷ್ಠ ಬೆಲೆಯ ನೋಟುಗಳ ರದ್ದತಿ ಮತ್ತು ಜಿಎಸ್‌ಟಿ ಫಲವಾಗಿ  ಮದುವೆ ಸಿದ್ಧತೆಗಳ ವೆಚ್ಚ ದುಬಾರಿಯಾಗಿ ಪರಿಣಮಿಸಲಿದೆ. ಬ್ಯೂಟಿಪಾರ್ಲರ್‌, ಮದುವೆ ಕರೆಯೋಲೆಗಳ ಕೊರಿಯರ್‌, ಅತಿಥಿಗಳಿಗಾಗಿ ಹೋಟೆಲ್‌ ಕೋಣೆಗಳ ಬಾಡಿಗೆ ವೆಚ್ಚಗಳೂ ತುಟ್ಟಿಯಾಗಲಿವೆ. ವಿವಿಧ ಬಗೆಯ ಸೇವೆಗಳ ‘ಜಿಎಸ್‌ಟಿ’ಯು ಶೇ 18 ರಿಂದ 28ರವರೆಗೆ ಇರಲಿದೆ. ಜಿಎಸ್‌ಟಿ ಜಾರಿ ಮುನ್ನ ಮದುವೆ ಸಿದ್ಧತೆಗಳಿಗೆ ಮಾಡುವ ವೆಚ್ಚಗಳಿಗೂ ಅಧಿಕೃತ ರಸೀದಿ ನೀಡುವ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ. ಹೀಗಾಗಿ ತೆರಿಗೆ ಕಟ್ಟುವ ಅಗತ್ಯ ಉದ್ಭವಿಸುತ್ತಿರಲಿಲ್ಲ. ಜಿಎಸ್‌ಟಿ ವ್ಯವಸ್ಥೆಯಡಿ ತೆರಿಗೆ ಪಾವತಿಸುವ ಬದ್ಧತೆ ಹೆಚ್ಚಿದೆ.

ಅನಿವಾಸಿ ಭಾರತೀಯರು, ಆಗರ್ಭ ಸಿರಿವಂತರು ಕಡಲದಂಡೆ, ವಿಲಾಸಿ ತಾಣಗಳಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ಏರ್ಪಡಿಸುತ್ತಾರೆ. ಇಂತಹ ಮದುವೆಗಳಲ್ಲಿ ಅಪಾರ ಪ್ರಮಾಣದ ಹಣ ವೆಚ್ಚ ಮಾಡಲಾಗುತ್ತಿದೆ. ಜಿಎಸ್‌ಟಿ ಕಾರಣಕ್ಕೆ ಇಂತಹ ಮದುವೆಗಳ ವೆಚ್ಚವೂ ಗಮನಾರ್ಹ ಏರಿಕೆ ಕಾಣಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಂದಾಜಿನ ಪ್ರಕಾರ, ಭಾರತೀಯರು ತಮ್ಮ ಸಂಪತ್ತಿನ ಒಂದು ಐದಾಂಶದಷ್ಟನ್ನು ಮದುವೆ ಸಮಾರಂಭಗಳಿಗೆ ವೆಚ್ಚ ಮಾಡುತ್ತಾರೆ. ಜಿಎಸ್‌ಟಿ ಫಲವಾಗಿ ಮದುವೆ ವೆಚ್ಚ  ಏರಿಕೆಯಾಗಲಿರುವುದರಿಂದ ಅನೇಕರು ಮದುವೆ ಬಜೆಟ್‌ ಪರಿಷ್ಕರಿಸಲು ಮುಂದಾಗಲಿದ್ದಾರೆ. ವೆಚ್ಚಕ್ಕೆ ಕಡಿವಾಣ ಹಾಕಲಿದ್ದಾರೆ ಎಂದು ‘ಅಸೋಚಾಂ’ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್