
ಬೆಂಗಳೂರು(ಅ.24): ನಟ ಪ್ರಕಾಶ್ ರೈ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ಪ್ರತಿಕ್ರಿಯಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸುದ್ದಿಯಲ್ಲಿ ಇದ್ದಾರೆ. ಇತ್ತೀಚೆಗೆ ತಾಜ್ ಮಹಲ್ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಆ ಕಟ್ಟಡ ದೇಗುಲವಾಗಿತ್ತು, ಶಹಜಹಾನ್ ಕಬಳಿಸಿದ ಭೂಮಿಯಲ್ಲಿ ಆ ಕಟ್ಟಡ ಕಟ್ಟಿಸಿದರು ಎಂಬಿತ್ಯಾದಿ ಹೇಳಿಕೆಗಳನ್ನು ಕೆಲವರು ನೀಡುತ್ತಿದ್ದಾರೆ. ಒಂದು ಹಂತದಲ್ಲಿ ಕೆಲವರು ತಾಜ್ ಮಹಲ್'ನ್ನು ಕೆಡವಬೇಕು ಎನ್ನುವವರೆಗೆ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈ ಉತ್ತರ ಪ್ರದೇಶ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ವ್ಯಂಗದ ಬಾಣ ಬೀಸಿದ್ದಾರೆ.
ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಭವಿಷ್ಯದ ದಿನಗಳಲ್ಲಿ ಇತಿಹಾಸ ಆಗಿ ಹೋಗುತ್ತಾ ಎಂದು ಟ್ವಿಟ್ಟರ್'ನಲ್ಲಿ ಪ್ರಶ್ನಿಸಿರುವ ರೈ, 'ನೀವು ತಾಜ್ ಮಹಲ್'ನ ಬುನಾದಿ ಅಗೆಯುತ್ತಿದ್ದೀರಿ. ಯಾವಾಗ ಆ ಕಟ್ಟಡ ಉರುಳಿಸ್ತೀರಿ ಹೇಳಿ. ನನ್ನ ಮಕ್ಕಳಿಗೆ ಆ ಅದ್ಭುತ ಕಟ್ಟಡವನ್ನು ಕೊನೆಯದಾಗಿ ತೋರಿಸಲು ಬಯಸುತ್ತಿದ್ದೇನೆ' ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.