ಸಪ್ತಪದಿಯ ಬಳಿಕ ವರನ ಈ ಬೇಡಿಕೆ ಕೇಳಿ ಮುಖ ಮೂತಿ ನೋಡದೆ ಥಳಿಸಿದ ಮದುಮಗಳು!: ಕೇಳಿದ್ದೇನು ಗೊತ್ತಾ?

By Suvarna Web DeskFirst Published Jun 8, 2017, 3:51 PM IST
Highlights

ಹಲವಾರು ಮದುವೆ ಕಾರ್ಯಕ್ರಮಗಳಲ್ಲಿ ತಲೆದೋರುವ ಸಮಸ್ಯೆಗಳಿಂದ ವಿವಾದಗಳುಂಟಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುವುದೂ ಇದೆ. ಇಂತಹುದೇ ಘಟನೆ ಇದೀಗ ರಾಜಸ್ಥಾನದಲ್ಲೂ ನಡೆದಿದೆ. ಸಪ್ತಪದಿಯ ಸಂದರ್ಭದಲ್ಲಿ ವರ ಮದುಮಗಳೆದುರು ಇಟ್ಟ ಬೇಡಿಕೆಯಿಂದಾಗಿ ಜಗಳವೇರ್ಪಟ್ಟಿದ್ದಲ್ಲದೇ ಮದುವೆಯೇ ಮುರಿದು ಬಿದ್ದಿದೆ.

ರಾಜಸ್ಥಾನ(ಜೂ.08): ಹಲವಾರು ಮದುವೆ ಕಾರ್ಯಕ್ರಮಗಳಲ್ಲಿ ತಲೆದೋರುವ ಸಮಸ್ಯೆಗಳಿಂದ ವಿವಾದಗಳುಂಟಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುವುದೂ ಇದೆ. ಇಂತಹುದೇ ಘಟನೆ ಇದೀಗ ರಾಜಸ್ಥಾನದಲ್ಲೂ ನಡೆದಿದೆ. ಸಪ್ತಪದಿಯ ಸಂದರ್ಭದಲ್ಲಿ ವರ ಮದುಮಗಳೆದುರು ಇಟ್ಟ ಬೇಡಿಕೆಯಿಂದಾಗಿ ಜಗಳವೇರ್ಪಟ್ಟಿದ್ದಲ್ಲದೇ ಮದುವೆಯೇ ಮುರಿದು ಬಿದ್ದಿದೆ.

ಮಾಧ್ಯಮಗಳಲ್ಲಿ ಪ್ರಸಾರವಾಗದ ವರದಿಗಳನ್ವಯ ಭಂವರ್'ಲಾಲ್ ಬಂಗ್ ಎಂಬಾತನ ಮಗಳ ಮದುವೆ ದಿನೇಶ್ ಎಂಬಾತನ ಮಗ ವಿವೇಕ್'ನೊಂದಿಗೆ ನಿಶ್ಚಯವಾಗಿತ್ತು. ವರ ಯುವಕ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದರೆ, ಮಧುಮಗಳೂ ಎಲ್'ಎಲ್'ಬಿ ಮುಗಿಸಿದ್ದಳು. ಹೀಗಿರುವಾಗ ಇವರಿಬ್ಬರ ಮದುವೆ ದಿನದಂದು ಮದುಮಗಳ ಮನೆಗೆ ವರ ಹಾಗೂ ದಿಬ್ಬಣವನ್ನು ಅದ್ಧೂರಿಯಾಗಿಯೇ ಸ್ವಾಗತಿಸಲಾಯಿತು.

ಮದುವೆಯ ಸಂಪ್ರದಾಯಗಳನ್ನು ಒಂದಾದ ಬಳಿಕ ಒಂದರಂತೆ ನಡೆಯುತ್ತಿದ್ದವು ಹೀಗಿರುವಾಗ ಮದುವೆಯ ಪ್ರಮುಖ ಭಾಗವೆಂದೇ ಪರಿಗಣಿಸುವ ಸಪ್ತಪದಿಯೂ ನಡೆದಿತ್ತು. ಆದರೆ ಅಷ್ಟರಲ್ಲೇ ವರ ಮಧುಮಗಳ ಕಿವಿಯಲ್ಲಿ ತನ್ನದೊಂದು ಬೇಡಿಕೆ ಇದೆ ಎಂದು ಹೇಳಿಕೊಂಡಿದ್ದಾರೆ. ಈತನ ಆ ಬೇಡಿಕೆ ಕೇಳಿ ಕೆರಳಿದ ವಧು ಬೇಡಿಕೆ ಪೂರೈಸಲು ಸಾಧ್ಯವೇ ಇಲ್ಲ ಎಂದಿದ್ದಾಳೆ.  ವಾಸ್ತವವಾಗಿ ವರ ತನಗೆ ಇಷ್ಟವಾಗುವಂತೆ ಫೋಟೋಗೆ ಫೋಸ್ ನೀಡಬೇಕೆಂದು ಕೇಳಿಕೊಂಡಿದ್ದಾನೆ. ಈ ವೇಳೆ ವಧು ಎಲ್ಲರೆದುರು ಅಂತಹ ಭಂಗಿಯಲ್ಲಿ ಫೋಟೋ ತೆಗೆಸುವುದು ಸರಿಯಲ್ಲ ಎಂದು ನಿರಾಕರಿಸಿದ್ದಾಳೆ.

ಮದುಮಗಳ ಈ ಪ್ರತಿಕ್ರಿಯೆ ಕೇಳಿ ಯುವಕ ಕೋಪಗೊಂಡಿದ್ದಾನೆ. ವಧು ಕೂಡಾ ತಾನೂ ಕಮ್ಮಿ ಇಲ್ಲ ಎನ್ನುವಂತೆ ತನ್ನ ನಿರ್ಧಾರದಿಂದ ಹಿಒಂದೆ ಸರಿದಿಲ್ಲ. ನಿಧಾನವಾಗಿ ಈ ವಿವಾದ ಹೆಚ್ಚಾಗಿದ್ದು, ಎರಡೂ ಕಡೆಯ ಸಂಬಂಧಿಕರ ನಡುವೆ ಜಗಳವೇರ್ಪಟ್ಟಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ವರ ವಧು ಕೂಡಾ ಹೊಡೆದಾಡಿಕೊಂಡಿದ್ದಾರೆ. ಮದುವೆ ಮಂಟಪದಲ್ಲಿ ನಡೆದ ಈ ಜಗಳದಲ್ಲಿ ವರನ ಸಹೋದರನ ತಲೆಗೆ ಗಂಭೀರ ಗಾಯವೂ ಆಗಿದೆ ಎಂದು ವರದಿಯಾಗಿದೆ. ಆದರೆ ಈ ಜಗಳ ನೋಡಿದ ವ್ಯಕ್ತಿಯೊಬ್ಬ ಆ ಕೂಡಲೇ ಪೊಲೀಸರಿಗೆ ಕರೆ ಮಾಡಿ ಸೂಚನೆ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಈ ಜಗಳವನ್ನು ಮಾತುಕತೆಯಲ್ಲೇ ಕೊನೆಗೊಳಿಸಲು ಯತ್ನಿಸಿದ್ದಾರೆ.

ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಗಿ ಬೇರೆ ವಿಧಿ ಇಲ್ಲದೇ ವರ ಹಾಗೂ ಕೆಲ ಸಂಬಂಧಿಗಳನ್ನು ಬಂಧಿಸಿದ ಪೊಲೀಸರು ಠಾಣೆಗೊಯ್ದಿದ್ದು, ಅಲ್ಲಿ ಅವರನ್ನು ಸಮಾಧಾನಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಅಷ್ಟರಲ್ಲೇ ವಧುವಿನ ತಂದೆಯೂ ಇಂತಹ ಜಗಳಕಾಯುವ ಕುಟುಂಬಕ್ಕೆ ನನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದು ಈ ಸಂಬಂಧವನ್ನೇ ಮುರಿದಿದ್ದಾನೆ.

ಕೃಪೆ: NDTv

click me!