ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವುದು ಹೇಗೆ? ಇಲ್ಲಿವೆ 5 ಸರಳ ವಿಧಾನಗಳು

Published : Jun 08, 2017, 03:08 PM ISTUpdated : Apr 11, 2018, 01:06 PM IST
ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವುದು ಹೇಗೆ? ಇಲ್ಲಿವೆ 5 ಸರಳ ವಿಧಾನಗಳು

ಸಾರಾಂಶ

ಇತ್ತೀಚೆಗೆ ಎಲ್ಲೆಡೆ ಪ್ಲಾಸ್ಟಿಕ್ ಅಕ್ಕಿಯದ್ದೇ ಸುದ್ದಿ. ದೇಶದ ಮೂಲೆ ಮೂಲೆಗಳಿಂದ ಪ್ಲಾಸ್ಟಿಕ್ ಅಕ್ಕಿ ಮಾರಾಟವಾಗುತ್ತಿರುವ ಸುದ್ದಿ ಮಾಡುತ್ತಿದೆ. ಕರ್ನಾಟಕದಲ್ಲೂ ಪ್ಲಾಸ್ಟಿಕ್ ಅಕ್ಕಿ ಮಾರಾಟವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ರಾಜಧಾನಿ ಬೆಂಗಳೂರಿನಲ್ಲೂ ಪ್ಲಾಸ್ಟಿಕ್ ಅಕ್ಕಿ ಮಾರಾಟವಾಗುತ್ತಿದೆ. ಇನ್ನು ಇ ಪ್ಲಾಸ್ಟಿಕ್ ಅಕ್ಕಿ ತಿಂದರೆ ಅಪಾಯ ತಪ್ಪಿದ್ದಲ್ಲ. ಹಾಗಾದ್ರೆ ಈ ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವುದು ಹೇಗೆ? ನೋಡಲು ನೈಜವಾಗಿಯೇ ಕಾಣುವ ಇದನ್ನು ಗುರುತಿಸುವುದೇ ಸಮಸ್ಯೆಯಾಗಿದೆ. ಚಿಂತಿಸಬೇಡಿ ಇದೀಗ ತಲೆನೋವಾಗಿ ಕಾಡುತ್ತಿರುವ ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವ ಸರಳ ವಿಧಾನಗಳು ಇಲ್ಲಿವೆ ನೋಡಿ

1. ಸ್ವಲ್ಪ ಅಕ್ಕಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು, ಬೆಂಕಿ ಕಡ್ಡಿ ಇಲ್ಲವೇ ಲೈಟರ್ ಮೂಲಕ ಬೆಂಕಿ ಹಚ್ಚಿ. ಈ ವೇಳೆ ನಿಮ್ಮ ಕೈಯ್ಯಲ್ಲಿರುವ ಅಕ್ಕಿ ಪ್ಲಾಸ್ಟಿಕ್ ಅಕ್ಕಿಯಾಗಿದ್ದರೆ, ಸುಟ್ಟ ಅಕ್ಕಿಯಿಂದ ಪ್ಲಾಸ್ಟಿಕ್'ನಂತಹ ವಾಸನೆ ಬರುತ್ತದೆ.

2. ಸ್ವಲ್ಪ ಅಕ್ಕಿಯನ್ನು ಬೇಯಿಸಿ ಎರಡು ಮೂರು ದಿನಗಳ ಕಾಲ ಬಾಟಲ್ ಒಂದರಲ್ಲಿ ಹಾಕಿ ಇಡಿ. ಒಂದು ವೇಳೆ ಬಾಟಲ್'ನಲ್ಲಿ ಹಾಕಿಟ್ಟ ಅಕ್ಕಿಗೆ ಪಂಗಸ್ ತಗುಲಿರದಿದ್ದರೆ ಅದು ಪ್ಲಾಸ್ಟಿಕ್ ಅಕ್ಕಿ ಆಗಿರುತ್ತದೆ.

3. ಸ್ವಲ್ಪ ಅಕ್ಕಿ ತೆಗೆದುಕೊಂಡು ಅದರ ಮೇಲೆ ಬಿಸಿಯಾದ ಎಣ್ಣೆಯನ್ನು ಹಾಕಿ. ಒಂದು ವೇಳೆ ಆ ಅಕ್ಕಿ ಪ್ಲಾಸ್ಟಿಕ್'ನದ್ದಾಗಿದ್ದರೆ ಬಿಸಿ ಎಣ್ಣೆ ಹಾಕುತ್ತಿದ್ದಂತೆಯೇ ಕರಗಲಾರಂಭಿಸುತ್ತದೆ.

4. ನೀರಿನ ಮೂಲಕ ಪ್ರಯೋಗ: ಒಂದು ಬಾಟಲಿಯಲ್ಲಿ ನೀರು ತೆಗೆದುಕೊಂಡು ಒಂದು ಟೇಬಲ್ ಸ್ಪೂನ್ ಅಕ್ಕಿ ಹಾಕಿ ಬಳಿಕ ಚೆನ್ನಾಗಿ ಅಲುಗಾಡಿಸಿ. ಈ ವೇಳೆ ಅಕ್ಕಿ ಬಾಟಲ್ ಮೇಲಿನ ಭಾಗದಲ್ಲಿ ನೀರಿನ ಮೇಲೆ ತೇಲುತ್ತಿದ್ದರೆ ಅದು ಪ್ಲಾಸ್ಟಿಕ್ ಆಕ್ಕಿಯಾಗಿರುತ್ತದೆ. ಯಾಕೆಂದರೆ ಮಾಮೂಲಿ ಅಕ್ಕಿ ಯಾವತ್ತೂ ನೀರಿನಲ್ಲಿ ತೇಲುವುದಿಲ್ಲ.

5.ಪ್ಲಾಸ್ಟಿಕ್ ಅಕ್ಕಿಯನ್ನು ಬೇಯಿಸುವ ಸಂದರ್ಭದಲ್ಲಿ ಸುಲಭವಾಗಿ ಗುರುತಿಸಬಹುದು. ಅಕ್ಕಿಯು ಪ್ಲಾಸ್ಟಿಕ್'ನದ್ದಾಗಿದ್ದರೆ ಬೇಯಿಸುವ ಸಂದರ್ಭದಲ್ಲಿ ಪಾತ್ರೆಯ ಸುತ್ತ ದಪ್ಪವಾದ ಪದರ ಏರ್ಪಡುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!