
ಬೆಂಗಳೂರು[ಫೆ.03] ರಾಜ್ಯ ರಾಜಕಾರಣದಲ್ಲಿ ಇನ್ನು ಆಪರೇಶನ್ ಮುಗಿದಿಲ್ಲವಾ? ಹೀಗೊಂದು ಪ್ರಶ್ನೆ ಎದ್ದರೆ ಅಚ್ಚರಿ ಏನೂ ಇಲ್ಲ. ಪ್ರತಿದಿನ ನಡೆಯುತ್ತಿರುವ ಬೆಳವಣಿಗೆಗಳು, ಪ್ರಮುಖ ನಾಯಕರ ಭೇಟಿ ಹೊಸ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿರುವುದೆಂತೂ ನಿಜ.
ಭೇಟಿ ನಂ. 1: ಬಿಎಸ್‌ವೈ ಮತ್ತು ರೇವಣ್ಣ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂಬ ವದಂತಿ ಕಳೆದ ವಾರ ಕೇಳಿ ಬಂದಿತ್ತು. ನಾಯಕರ ಭೇಟಿ ನಡುವಿನ ವಿಚಾರವನ್ನು ಪರಿಶೀಲನೆ ಮಾಡಿದಾಗ ಅಂತಹ ಯಾವುದೆ ರಾಜಕಾರಣದ ಬೆಳವಣಿಗೆ ನಡೆದಿಲ್ಲ ಎಂಬುದು ಗೊತ್ತಾಗಿತ್ತು. ಆದರೂ ಸಹ ಈ ವದಂತಿ ಎಲ್ಲಿಂದ ಹಬ್ಬಿತು ಎನ್ನುವುದು ಈಗಲೂ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
ಇದು ಆಪರೇಶನ್ ಕಮಲ ಅಲ್ಲ, ಆಪರೇಶನ್ ಅವಿಶ್ವಾಸ
ಭೇಟಿ ನಂ. 2: ರೇಣುಕಾಚಾರ್ಯ ಮತ್ತು ಸಿಎಸ್ ಪುಟ್ಟರಾಜು: ಬಿಜೆಪಿ ಶಾಸಕ ಮತ್ತು ಬಿಎಸ್ ಯಡಿಯೂರಪ್ಪ ಆಪ್ತ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಮತ್ತು ಸಚಿವ ಪುಟ್ಟರಾಜು ಪರಸ್ಪರ ಶನಿವಾರ ಭೇಟಿಯಾಗಿದ್ದರು. ಪುಟ್ಟರಾಜು ಅವರ ಬಳಿಗೆ ತೆರಳಿ ರೇಣುಕಾಚಾರ್ಯ ಮಾತು ಕತೆ ನಡೆಸಿದ್ದರು.
ಭೇಟಿ ನಂ. 3: ಎಸ್.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ: ಇಬ್ಬರು ಮಾಜಿ ಸಿಎಂಗಳ ಭೇಟಿ ಸಹಜವಾಗಿಯೇ ಕುತೂಹಲ ತಂದಿದೆ. ಜೆಡಿಎಸ್ ಮತ್ತು ಬಿಜೆಪಿ ನಾಯಕರು ಭೇಟಿಯಾಗುತ್ತಿದ್ದರೆ ಇದು ಕಾಂಗ್ರೆಸ್ ನಾಯಕ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಒಂದು ಕಾಲದಲ್ಲಿ ರಾಜ್ಯ ಕಾಂಗ್ರೆಸ್ ಮುನ್ನಡೆಸಿದ್ದ ಇದೀಗ ಬಿಜೆಪಿಯಲ್ಲಿರುವ ನಾಯಕ ಕೃಷ್ಣ ಅವರು ಪರಸ್ಪರ ಭೇಟಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.