ಗೋಕರ್ಣ ಮಠಕ್ಕೆ ಆಡಳಿತಾಧಿಕಾರಿ ನೇಮಕ: ಸರ್ಕಾರದ ದುಸ್ಸಾಹಸದ ವಿರುದ್ಧ ಸಿಡಿದ ಮಠಾಧೀಶರು

By Internet DeskFirst Published Oct 6, 2016, 3:43 AM IST
Highlights

ಗೋಕರ್ಣದ ಶ್ರೀರಾಮಚಂದ್ರಾಪುರ ಮಠಕ್ಕೆ ರಾಜ್ಯ ಸರಕಾರ ಆಡಳಿತಾಧಿಕಾರಿ ನೇಮಿಸಿರುವುದನ್ನು ಕಲಬುರಗಿ ಜಿಲ್ಲೆಯ ಮಠಾಧೀಶರು ತೀವ್ರವಾಗಿ ಖಂಡಿಸುವ ಜೊತೆಗೆ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಮಠಾಧೀಶರು ಸರ್ಕಾರಕ್ಕೆ ಎಚ್ಚರಿಕೆ ಕೂಡ ನೀಡಿದ್ದಾರೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ ನೋಡಿ.

ರಾಜ್ಯ ಸರ್ಕಾರ ಇತ್ತೀಚಿಗೆ ಮಠಗಳತ್ತ ವಾರೆ ನೋಟ ಬೀರುತ್ತಿದೆ. ರಾಮಚಂದ್ರಾಪುರ ಮಠದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಬಂದ ಕೂಡಲೇ ಸರ್ಕಾರ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದೆ.

Latest Videos

ಗವರ್ನಮೆಂಟ್‌'ಗೆ ಬೇಕಂತೆ ಗೋಕರ್ಣದ ಗುಡಿ..!

ಸರ್ಕಾರ ಮಠಗಳ ಮೇಲೆ ಹಿಡಿತ ಸಾಧಿಸುವ ದುಸ್ಸಾಹಸಕ್ಕೆ ಮುಂದಾಗುತ್ತಿದೆ. ಇಂತಹ ಧೋರಣೆ ಮುಂದುವರೆಸಿದ್ರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಅಂತಾ ಮಠಾಧೀಶರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ನೂರಾರು ವರ್ಷಗಳಿಂದ ಮಠಗಳು ಭಕ್ತರ ಸಹಕಾರದಿಂದ ಸಮಾಜ ಮುಖಿ ಕೆಲಸ ಮಾಡುತ್ತಿವೆ. ಸರಕಾರ ಮಾಡದೇ ಇರೋ ಕೆಲಸಗಳನ್ನೂ ಮಠಗಳು ಮಾಡಿವೆ. ಇಂತಹ ಮಠಗಳ ಪರಂಪರೆಗೆ ಧಕ್ಕೆ ತರುತ್ತಿರುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಮಸೀದಿ, ಚರ್ಚ್​ಗಳಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ಗಮನಿಸಲು ಆಡಳಿತಾಧಿಕಾರಿ ನೇಮಿಸಲಿ ಅಂತಾ ಮಠಾಧೀಶರು ಸವಾಲು ಹಾಕಿದ್ದಾರೆ.

ಇನ್ನೊಂದು ಕಡೆ ಗೋಕರ್ಣ ಮಠದಲ್ಲಿ ಇರೋ ಸ್ವಾಮೀಜಿಗಳೇ ಸರ್ಕಾರದ ಆಡಳಿತಾಧಿಕಾರಿ ನೇಮಕ ಮಾಡುವುದರಿಂದ ಮಠದ ಅಭಿವೃದ್ಧಿಯಾಗುತ್ತದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ  ಮಾಡಿರುವುದನ್ನು ಖಂಡಿಸಿ ಇತರೆ ಮಠಾಧೀಶರು ಸರ್ಕಾರದ ವಿರುದ್ಧ  ಈಗ ತಿರುಗಿ ಬಿದ್ದಿದ್ದಾರೆ. 

click me!