ವಾರಾಂತ್ಯಕ್ಕೆ ಡಿಸ್ಚಾರ್ಜ್ ಆಗ್ತಿದ್ದಾರೆ ‘ಅಮ್ಮ’: ಮನೆಯಲ್ಲೇ ಮುಂದುವರೆಯಲಿದೆ ಚಿಕಿತ್ಸೆ

By Internet DeskFirst Published Oct 6, 2016, 3:12 AM IST
Highlights

ಚೆನ್ನೈ(ಅ.06): ಕಳೆದ 14 ದಿನಗಳಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಅವರನ್ನು ಮನೆಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ. ಆಸ್ಪತ್ರೆಯಲ್ಲಿ ಸಿಎಂ ದಾಖಲಾಗಿರುವುದರಿಂದ ಬೇರೆ ರೋಗಿಗಳು ತೊಂದರೆಯಾಗುತ್ತಿದೆ. ಹೀಗಾಗಿ ಅವರಿಗೆ ತೊಂದರೆಯಾಗ ಬಾರದೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ.

ತಮಿಳುನಾಡು ಸಿಎಂ ಜಯಲಿಲತಾ, ಇಡೀ ತಮಿಳುನಾಡಿನ ಜನತೆ ಇವರನ್ನ ಅಮ್ಮ ಎಂದೇ ಕರೆಯುತ್ತಾರೆ. ಅನಾರೋಗ್ಯದಿಂದ ಜಯಲಲಿತಾ ಆಸ್ಪತ್ರೆ ಸೇರಿದ್ದಾಗ ಇವರೆಲ್ಲ ಆತಂಕಕ್ಕೀಡಾಗಿದ್ದರು. ಆದರೆ ಈಗ ಇವರಿಗೊಂದು ಸಂತಸ ಸುದ್ದಿ ಇದೆ. ಸಿಎಂ ಜಯಲಲಿತಾ ವಾರಾಂತ್ಯಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರಂತೆ.

Latest Videos

ಹೌದು, ಇತರೆ ರೋಗಿಗಳಿಗೆ ತೊಂದರೆಯಾಗುತ್ತಿರುವ ಕಾರಣ ಆಸ್ಪತ್ರೆಯಿಂದ ಮನೆಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ. ಸೆಪ್ಸೀಸ್ ನಿಂದ ಬಳಲುತ್ತಿರುವ ಜಯಲಲಿತಾ ಕಳೆದ 14 ದಿನಗಳಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಆಸ್ಪತ್ರೆ ಸುತ್ತ 500 ಮೀಟರ್ ವ್ಯಾಪ್ತಿವರೆಗೆ ಸಂಚಾರ ನಿಷೇಧಿಸಿದ್ದಾರೆ. ಇದರಿಂದ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ಬೇರೆ ರೋಗಿಗಳಿಗೆ ತೊಂದರೆ ಆಗುವುದು ಬೇಡ ಎಂದು ಅವರನ್ನ ಮನೆಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ.

ಇನ್ನು ಚೆನ್ನೈನ ಪೋಯಾಸ್ ಗಾರ್ಡನ್'ನಲ್ಲಿ ಅದ್ಭುತವಾದ ಭವ್ಯ ಬಂಗಲೆ ಹೊಂದಿರುವ ಸಿಎಂ ಜಯಲಲಿತಾ ಅವರ ನಿವಾಸದಲ್ಲೇ ಆಸ್ಪತ್ರೆ ಸೆಟ್ ಅಪ್ ರೆಡಿಯಾಗುತ್ತಿದ್ದು ವೆಂಟಿಲೇಟರ್ ವ್ಯವಸ್ಥೆಯೂ ಅಲ್ಲಿಯೇ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ  ಲಂಡನ್ ನ ಖ್ಯಾತ ವೈದ್ಯ ಡಾ.ರಿಚರ್ಡ್ ಅವರಿಂದಲೂ ಅನುಮತಿ ಕೊಟ್ಟಿದ್ದಾರೆ.. ಈ ಮಧ್ಯೆ ಚಿಕಿತ್ಸೆಗೆಂದು  ದೆಹಲಿಯ ಏಮ್ಸ್​ ವೈದ್ಯರ ತಂಡ ನಿನ್ನೆ ಚೆನ್ನೈನ ಅಪೋಲೋ ಆಸ್ಪತ್ರೆಗೆ ತೆರಳಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಜಯಲಲಿತಾರ ಆಸ್ಪತ್ರೆ ವಾಸ ಈ ವಾರ ಅಂತ್ಯವಾಗಲಿದೆ. ಅದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ದೇವರಲ್ಲಿ  ಪ್ರಾರ್ಥಿಸುತ್ತಿದ್ದಾರೆ

 

click me!