ಪಾಕ್ –ಚೀನಾ ಗಡಿಗೆಂದೆ 15 ಸೇನಾ ತುಕಡಿ ರಚನೆಗೆ ಚಿಂತನೆ

By Suvarna Web DeskFirst Published Jan 15, 2018, 9:41 AM IST
Highlights

ಚೀನಾದಿಂದ ಡೋಕ್ಲಾಮ್ ಬಿಕ್ಕಟ್ಟು ಮತ್ತು ಪಾಕಿಸ್ತಾನದ ಉಪಟಳದಿಂದಾಗಿ ಗಡಿಯಲ್ಲಿ ಇನ್ನಷ್ಟು ಭದ್ರತೆಗಾಗಿ ಹೊಸದಾಗಿ 15 ಸೇನಾ ತುಕಡಿ ರಚಿಸಲು ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಗೃಹ ಸಚಿವಾಲಯದ ಮೂಲಗಳ ಪ್ರಕಾರ ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶ ಗಡಿ ರಕ್ಷಣೆಗಾಗಿ ಈ ಹೆಚ್ಚುವರಿ ತುಕಡಿ ರಚನೆಗೆ ಚಿಂತಿಸಲಾಗಿದೆ.

ನವದೆಹಲಿ: ಚೀನಾದಿಂದ ಡೋಕ್ಲಾಮ್ ಬಿಕ್ಕಟ್ಟು ಮತ್ತು ಪಾಕಿಸ್ತಾನದ ಉಪಟಳದಿಂದಾಗಿ ಗಡಿಯಲ್ಲಿ ಇನ್ನಷ್ಟು ಭದ್ರತೆಗಾಗಿ ಹೊಸದಾಗಿ 15 ಸೇನಾ ತುಕಡಿ ರಚಿಸಲು ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಗೃಹ ಸಚಿವಾಲಯದ ಮೂಲಗಳ ಪ್ರಕಾರ ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶ ಗಡಿ ರಕ್ಷಣೆಗಾಗಿ ಈ ಹೆಚ್ಚುವರಿ ತುಕಡಿ ರಚನೆಗೆ ಚಿಂತಿಸಲಾಗಿದೆ.

ಸದ್ಯದ ಚಿಂತನೆ ಪ್ರಕಾರ ಪಾಕ್ ಗಡಿ ಕಾಯುವ ಬಿಎಸ್‌ಎಫ್‌ಗೆ 6, ಚೀನಾ, ಬಾಂಗ್ಲಾ ಗಡಿಕಾಯುವ ಐಟಿಬಿಪಿಗೆ 9 ತುಕಡಿ ಸೇರಿಸಲು ಉದ್ದೇಶಿಸಲಾಗಿದೆ.

ಒಂದು ತುಕಡಿ 1000 ಯೋಧರನ್ನು ಹೊಂದಿರಲಿದೆ. ಹಾಲಿ ಬಿಎಸ್‌ಎಫ್‌ನಲ್ಲಿ 2.5 ಲಕ್ಷ ಮತ್ತು ಐಟಿಬಿಪಿಯಲ್ಲಿ 90000 ಯೋಧರಿದ್ದಾರೆ.

click me!