ಇಂಟರ್ನೆಟ್ ಅಪಾಯದ ಕುರಿತು ಶಾಲಾ ಮಕ್ಕಳಿಗೆ ನೈತಿಕತೆ ಪಾಠ

By Suvarna Web DeskFirst Published Jan 15, 2018, 9:21 AM IST
Highlights

ಇಂಟರ್ನೆಟ್‌ಗೆ ಅಂಟಿಕೊಂಡರೆ ಆಗುವ ಪ್ರತಿಕೂಲ ಪರಿಣಾಮಗಳು ಹಾಗೂ ಸೈಬರ್ ನೈತಿಕತೆ ಕುರಿತಾದ ಪಾಠಗಳನ್ನು ಶಾಲಾಪಠ್ಯ ಕ್ರಮದಲ್ಲಿ ಅಳವಡಿಸುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಮಹತ್ವದ ಸಲಹೆ ನೀಡಿದೆ. ಸೋಮವಾರ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅಧ್ಯಕ್ಷತೆಯಲ್ಲಿ ಶೈಕ್ಷಣಿಕ ಸಲಹಾ ಮಂಡಳಿ ಸಭೆ ನಡೆಯಲಿದ್ದು, ಆಗ ಈ ವಿಚಾರ ಚರ್ಚೆಗೆ ಬರಲಿದೆ

ನವದೆಹಲಿ(ಜ.15): ಇಂಟರ್ನೆಟ್‌ಗೆ ಅಂಟಿಕೊಂಡರೆ ಆಗುವ ಪ್ರತಿಕೂಲ ಪರಿಣಾಮಗಳು ಹಾಗೂ ಸೈಬರ್ ನೈತಿಕತೆ ಕುರಿತಾದ ಪಾಠಗಳನ್ನು ಶಾಲಾಪಠ್ಯ ಕ್ರಮದಲ್ಲಿ ಅಳವಡಿಸುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಮಹತ್ವದ ಸಲಹೆ ನೀಡಿದೆ. ಸೋಮವಾರ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅಧ್ಯಕ್ಷತೆಯಲ್ಲಿ ಶೈಕ್ಷಣಿಕ ಸಲಹಾ ಮಂಡಳಿ ಸಭೆ ನಡೆಯಲಿದ್ದು, ಆಗ ಈ ವಿಚಾರ ಚರ್ಚೆಗೆ ಬರಲಿದೆ.

ಸ್ಮಾರ್ಟ್‌ಫೋನ್ ಹಾಗೂ ಕಂಪ್ಯೂಟರ್‌ಗಳಿಗೆ ಮಕ್ಕಳು ಅಂಟಿಕೊ ಳ್ಳುತ್ತಿದ್ದಾರೆ. ಮಕ್ಕಳಿಗೆ ಇಂಟರ್ನೆಟ್ ಹಾಗೂ ಮೊಬೈಲ್‌ಗಳು ಸನಿಹವಾಗುತ್ತಿವೆ. ಮಕ್ಕಳಲ್ಲಿ ಏಕಾಂತವನ್ನು ಹೋಗಲಾಡಿಸಲು ಕೌನ್ಸೆಲಿಂಗ್ ನಡೆಸಬೇಕೆಂಬ ಸಲಹೆಯನ್ನೂ ನೀಡಲಾಗಿದೆ.

click me!