ಅರ್ಚಕರ ಲೈಂಗಿಕ ಹಗರಣ : ಕರ್ನಾಟಕದ ಪ್ರಸಿದ್ಧ ದೇವಾಲಯ ಸರ್ಕಾರದ ವಶಕ್ಕೆ

By Web DeskFirst Published Jul 23, 2018, 9:10 AM IST
Highlights

ಕರ್ನಾಟಕದ ಪ್ರಸಿದ್ಧ ದೇವಾಲಯವೊಂದರ ಅರ್ಚಕರ ಲೈಂಗಿಕ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತವನ್ನು ಸರ್ಕಾರ ವಶಕ್ಕೆ ತೆಗೆದುಕೊಂಡಿದ್ದು ಈ ನಿಟ್ಟಿನಲ್ಲಿ ಭಕ್ತರು ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. 

ಬೆಂಗಳೂರು :  ಪ್ರಸಿದ್ಧ ಐತಿಹಾಸಿಕ ಸ್ಥಳವಾಗಿರುವ ಗಂಗಾವತಿ ತಾಲೂಕಿನ ಅಂಜನಾದ್ರಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಪಡೆದಿರುವ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರ ಆದೇಶವನ್ನು ಪ್ರಶ್ನಿಸಿ ಭಕ್ತರು ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ರಾಮಾಯಣ ಇತಿಹಾಸವುಳ್ಳ ಅಂಜನಾದ್ರಿ ಬೆಟ್ಟದಲ್ಲಿನ ಅಂಜನೇಯ ದೇವಸ್ಥಾನವನ್ನು ಈಗ ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದಿರುವುದು ಅಂಜನಾದ್ರಿ ಟ್ರಸ್ಟ್ ಮತ್ತು ಉಚ್ಚಾಟಿತ ವಿದ್ಯಾದಾಸ ಬಾಬಾ ಅವರಿಗೂ ಒಪ್ಪಿಗೆ ಇರಲಿಲ್ಲ. 

ಹಿಂದೂ ದೇವಾಲಯವನ್ನು ಸರ್ಕಾರದ ಸುರ್ಪದಿಗೆ ತೆಗೆದುಕೊಳ್ಳುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಹಲವಾರು ಭಕ್ತರು ಆರೋಪಿದ್ದಾರೆ. ಹೀಗಾಗಿ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

ವಿವಾದ ಏನು?: ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ದೇವಸ್ಥಾನ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಇಡೀ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.  ಆದರೆ, ಕಳೆದ  ತಿಂಗಳ ಹಿಂದೆ ವಿದ್ಯಾದಾಸ ಬಾಬಾ ಅವರ ಲೈಂಗಿಕ ಹಗರಣ ವೀಡಿಯೋ ವೈರಲ್ ಆಯಿತು. ಇದಾದ ಮೇಲೆ ಅವರನ್ನು ಇಲ್ಲಿಂದ ಜಾಗ ಖಾಲಿ ಮಾಡಿಸಲಾ ಯಿತು. ಅದಾದಮೇಲೆ ಬೇರೊಬ್ಬರು ನೋಡಿಕೊಳ್ಳುತ್ತಿದ್ದರು. ಕೆಲ ದಿನಗಳ ನಂತರ ವಿದ್ಯಾದಾಸ ಮತ್ತೆ ಆಗಮಿಸಿದರು. ಇದರಿಂದ ವಿವಾದ ಉಂಟಾಗಿ ಪರಿಸ್ಥಿತಿ ಕೈಮೀರಿ ಪದೇ ಪದೆ ಗಲಾಟೆಗಳು ನಡೆಯುತ್ತಿದ್ದವು.

ಇದನ್ನು ನಿಯಂತ್ರಣ ಮಾಡಿದ ಪೊಲೀಸ್ ಇಲಾಖೆ  ಜಿಲ್ಲಾಡಳಿತಕ್ಕೆ ವರದಿಯನ್ನು ನೀಡಿ, ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ದೇವಸ್ಥಾನ ವನ್ನು ಮುಜರಾಯ ಇಲಾಖೆಯ ವ್ಯಾಪ್ತಿಗೆ ತೆಗೆದುಕೊಳ್ಳುವುದು ಉತ್ತಮ ಎಂದು ಹೇಳಿತ್ತು. ನಂತರ ಜು.20  ರಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ದೇವಸ್ಥಾವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಪಡೆದು ಆದೇಶ ಹೊರಡಿಸಿದ್ದರು. ಆಡಾಳಿತಾಧಿಕಾರಿಯಾಗಿ ಚಂದ್ರಮೌಳಿರನ್ನು ನಿಯೋಜಿಸಲಾಗಿತ್ತು.

click me!