ಗೋಪಾಲನ್ ಎಂಟರ್ಪ್ರೈಸೆಸ್'ನಿಂದ ಸರ್ಕಾರಿ ಕೆರೆ ಒತ್ತುವರಿ

Published : Feb 22, 2017, 04:04 AM ISTUpdated : Apr 11, 2018, 01:12 PM IST
ಗೋಪಾಲನ್ ಎಂಟರ್ಪ್ರೈಸೆಸ್'ನಿಂದ ಸರ್ಕಾರಿ ಕೆರೆ ಒತ್ತುವರಿ

ಸಾರಾಂಶ

ಬೆಂಗಳೂರಿನ ಪ್ರಸಿದ್ಧ  ಗೋಪಾಲನ್​ ಮಾಲ್ ಮತ್ತು ಗೋಪಾಲನ್​ ಎಂಟರ್​ ಪ್ರೈಸೆಸ್​​ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರ ಬೆನ್ನಲ್ಲೇ, ಅದೇ ಗೋಪಾಲನ್​ ಎಂಟರ್​ ಪ್ರೈಸೆಸ್​​ ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಹೈಕೋರ್ಟ್​ ಆದೇಶದಂತೆ ಸರ್ವೆ ನಡೆಸಿದ್ದ ಅಧಿಕಾರಿಗಳು ಒತ್ತುವರಿ ಆಗಿರೋದನ್ನು ಸಾಬೀತುಪಡಿಸಿ 2 ವರ್ಷದ ಹಿಂದೆಯೇ ವರದಿ ಸಲ್ಲಿಸಿದರೂ  ಇದುವರೆಗೂ ಒತ್ತುವರಿಯನ್ನು ತೆರವುಗೊಳಿಸ್ದೇ ಇರೋದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬೆಂಗಳೂರು(ಫೆ.22): ಬೆಂಗಳೂರಿನ ಪ್ರಸಿದ್ಧ  ಗೋಪಾಲನ್​ ಮಾಲ್ ಮತ್ತು ಗೋಪಾಲನ್​ ಎಂಟರ್​ ಪ್ರೈಸೆಸ್​​ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರ ಬೆನ್ನಲ್ಲೇ, ಅದೇ ಗೋಪಾಲನ್​ ಎಂಟರ್​ ಪ್ರೈಸೆಸ್​​ ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಹೈಕೋರ್ಟ್​ ಆದೇಶದಂತೆ ಸರ್ವೆ ನಡೆಸಿದ್ದ ಅಧಿಕಾರಿಗಳು ಒತ್ತುವರಿ ಆಗಿರೋದನ್ನು ಸಾಬೀತುಪಡಿಸಿ 2 ವರ್ಷದ ಹಿಂದೆಯೇ ವರದಿ ಸಲ್ಲಿಸಿದರೂ  ಇದುವರೆಗೂ ಒತ್ತುವರಿಯನ್ನು ತೆರವುಗೊಳಿಸ್ದೇ ಇರೋದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸರ್ಕಾರವೇ ಶ್ರೀರಕ್ಷೆ!

ಬೆಂಗಳೂರು ನಗರದ ಸರ್ಕಾರಿ ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವ ಪಟ್ಟಿಗೆ ಈಗ ಗೋಪಾಲನ್​ ಎಂಟರ್​ಪ್ರೈಸೆಸ್​ ಕೂಡ ಸೇರ್ಪಡೆ ಆಗಿದೆ. ಕೆ.ಆರ್​.ಪುರಂ ಹೋಬಳಿಯ ಚಿನ್ನಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್ 17ರಲ್ಲಿದ್ದ 11 ಎಕರೆ ವಿಸ್ತೀರ್ಣದ ಕೆರೆ ಪ್ರದೇಶದಲ್ಲಿ ಗೋಪಾಲನ್​ ಎಂಟರ್​ಪ್ರೈಸೆಸ್ 10 ಗುಂಟೆ ಒತ್ತುವರಿ ಮಾಡ್ಕೊಂಡಿದೆ. ಒತ್ತುವರಿ ಆಗಿರೋದನ್ನು ಭೂ ದಾಖಲೆಗಳ ಜಂಟಿ ನಿರ್ದೇಶಕ ಜಯಪ್ರಕಾಶ್​ ಅವರು ಸಾಬೀತುಪಡಿಸಿ 2 ವರ್ಷಗಳ ಹಿಂದೆಯೇ ವರದಿ ಕೊಟ್ಟಿದ್ದಾರೆ. ಆದರೆ ವರದಿ ಆಧರಿಸಿ ಇದುವರೆಗೂ ಒಂದೇ ಒಂದು ಕ್ರಮ ತೆಗೆದುಕೊಂಡಿಲ್ಲ.

ಸರ್ವೆ ನಂಬರ್​ 17ರಲ್ಲಿ 11 ಎಕರೆ ಸರ್ಕಾರಿ ಕೆರೆ ಎಂದು ಆರ್​ಟಿಸಿಯಲ್ಲಿ ನಮೂದಿಸಲಾಗಿದೆ. ಆದರೂ ಇದೇ ಕೆರೆ ಪ್ರದೇಶದಲ್ಲಿ ಗೋಪಾಲನ್​ ಎಂಟರ್​ ಪ್ರೈಸೆಸ್​​ 10 ಗುಂಟೆ ಒತ್ತುವರಿ ಮಾಡಿಕೊಂಡು ಬರೋಬ್ಬರಿ 99 ಅಪಾರ್ಟ್​ಮೆಂಟ್​ ಕಟ್ಟಿದೆ.

ಇನ್ನು, ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತ ಸರ್ಕಾರಿ ಕೆರೆಗಳ ಒತ್ತುವರಿ ತೆರವುಗೊಳಿಸುವ ಸಂಬಂಧ ಸ್ಪೀಕರ್​ ಕೆ.ಬಿ.ಕೋಳಿವಾಡ ನೇತೃತ್ವದಲ್ಲಿ ಇರುವ ಸದನ ಸಮಿತಿಯೂ ಈ ಪ್ರಕರಣದಲ್ಲಿ ಮೌನ ವಹಿಸಿದೆ. ಅಷ್ಟೇ ಏಕೆ, ಈ ಪ್ರಕರಣ ಬಿಬಿಎಂಪಿ ಗಮನದಲ್ಲಿದೆ. ಆದರೂ ಬಿಬಿಎಂಪಿ ಇದಕ್ಕೂ ತನಗೂ ಯಾವುದೇ ಸಂಬಂಧ ಇಲ್ಲದ ಹಾಗೆ ವರ್ತಿಸುತ್ತಿದೆ. ಬಿಬಿಎಂಪಿಯ ಈ ನಡೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ವರದಿ: ಜಿ.ಮಹಾಂತೇಶ್​, ಸುವರ್ಣನ್ಯೂಸ್​

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ