ಸರ್ಕಾರಿ ವೈದ್ಯನಿಂದ ಆ್ಯಂಬುಲೆನ್ಸ್ ದುರ್ಬಳಕೆ; ಪೀಠೋಪಕರಣ ಸಾಗಿಸುವಾಗ ಸಿಕ್ಕಿಬಿದ್ದ ಖದೀಮ ವೈದ್ಯ

Published : Sep 04, 2017, 06:14 PM ISTUpdated : Apr 11, 2018, 01:08 PM IST
ಸರ್ಕಾರಿ ವೈದ್ಯನಿಂದ ಆ್ಯಂಬುಲೆನ್ಸ್ ದುರ್ಬಳಕೆ; ಪೀಠೋಪಕರಣ ಸಾಗಿಸುವಾಗ ಸಿಕ್ಕಿಬಿದ್ದ ಖದೀಮ ವೈದ್ಯ

ಸಾರಾಂಶ

ಸರ್ಕಾರಿ ಅಂಬ್ಯೂಲೆನ್ಸ್ ರೋಗಿಗಳ ಹಾಗೂ ಅಪಘಾತಕ್ಕೀಡಾದವರ ಪ್ರಾಣ ಉಳಿಸಲು ಇರ್ತಾವೆ. ಆದ್ರೆ ಅದೇ ಅಂಬ್ಯೂಲೆನ್ಸ್ ಗಳನ್ನು ಸರ್ಕಾರಿ ವೈದ್ಯರ ಮನೆ ಕೆಲಸಕ್ಕೆ ಬಳಸಿದರೆ? ಹೌದು ಇಂಥದ್ದೊಂದು ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ (ಸೆ.04): ಸರ್ಕಾರಿ ಅಂಬ್ಯೂಲೆನ್ಸ್ ರೋಗಿಗಳ ಹಾಗೂ ಅಪಘಾತಕ್ಕೀಡಾದವರ ಪ್ರಾಣ ಉಳಿಸಲು ಇರ್ತಾವೆ. ಆದ್ರೆ ಅದೇ ಅಂಬ್ಯೂಲೆನ್ಸ್ ಗಳನ್ನು ಸರ್ಕಾರಿ ವೈದ್ಯರ ಮನೆ ಕೆಲಸಕ್ಕೆ ಬಳಸಿದರೆ? ಹೌದು ಇಂಥದ್ದೊಂದು ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರದ ಕೀರ್ತಿ ನಗರದ ರವಿ ಕಟ್ಟಿಮನಿ ಎಂಬ ವೈದ್ಯ ಕೊಪ್ಪಳ ಜಿಲ್ಲೆ ಯಲ್ಬುರ್ಗಿ ತಾಲೂಕಿನ  ಹನುಮಸಾಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ವೈದ್ಯ ರವಿ ಹನುಮಸಾಗರದಲ್ಲಿ ಖಾಸಗಿ ಕ್ಲಿನಿಕ್ ತೆರೆಯಲು ಸಿದ್ಧತೆ ನಡೆಸಿದ್ದರು. ಅದಕ್ಕಾಗಿ ವಿಜಯಪುರದಿಂದ ಪಿಠೋಪಕರಣ ಸಾಗಿಸಲು ಯಲಬುರ್ಗಾ ತಾಲೂಕಿನ ಮಂಗಳೂರು ಆರೋಗ್ಯ ಕೇಂದ್ರದ ಅಂಬ್ಯೂಲೆನ್ಸ್'ನ್ನು ವೈದ್ಯ ರವಿ ದುರುಪಯೋಗಪಡಿಸಿಕೊಂಡಿದ್ದಾರೆ. ಅಂಬ್ಯೂಲೆನ್ಸ್'ನಲ್ಲಿ ಗ್ಯಾಸ್, ಸಿಲೆಂಡರ್, ಕುರ್ಚಿ, ಟೇಬಲ್, ಮಾತ್ರೆ, ಔಷಧಿ ಸೇರಿದಂತೆ ಅಗತ್ಯ ಪರಿಕರಗಳನ್ನು ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಜನರು ಮಾಧ್ಯಮಗಳಿಗೆ ಮಾಹಿತಿ ತಿಳಿಸಿದ್ದಾರೆ. ಸುದ್ದಿ ತಿಳಿದ ವೈದ್ಯ ರವಿ ವೇಗವಾಗಿ ರಾಷ್ಟ್ರೀಯ ಹೆದ್ದಾರಿ 51 ರಲ್ಲಿ ಸಾಗುತ್ತಿದ್ದ. ಅಷ್ಟರಲ್ಲೇ ವಾಹನವನ್ನು ಹಿಡಿದ ಜನರು ವೈದ್ಯನಿಗೆ ಛೀಮಾರಿ ಹಾಕಿದರು. ಬಳಿಕ ಜಿಲ್ ಲಾಆರೋಗ್ಯಾಧಿಕಾರಿ ಯರಗಲ್ ಅವರಿಗೆ ಕರೆ ಮಾಡಿ ತಿಳಿಸಿದರೆ ಅದನ್ನು ಕೊಪ್ಪಳ ಡಿಹೆಚ್ಓ ಅವರಿಗೆ ತಿಳಿಸಿ ಎಂದು ನುಣಚಿಕೊಂಡರು. ಈ ಬಗ್ಗೆ ಅಂಬ್ಯೂಲೆನ್ಸ್ ಚಾಲಕನಿಗೆ ಇದು ತಪ್ಪಲ್ವಾ ಎಂದು ಕೇಳಿದರೆ ಹಿರಿಯ ವೈದ್ಯರು ರೇಗ್ತಾರೆ ಸರ್. ನಾನು ಹೇಳಿದ ಹಾಗೆ ಕೇಳದೇ ಹೋದ್ರೆ ಕೆಲಸಕ್ಕೆ ಕುತ್ತು ಬರುತ್ತೆಂದು ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.

ಸಧ್ಯ ಅಂಬ್ಯೂಲೆನ್ಸ್'ನ್ನು ಜಲನಗರ ಠಾಣೆಗೆ ತರಲಾಗಿದ್ದು ಮೇಲಾಧಿಕಾರಿಗಳು ವೈದ್ಯನ ಮೇಳೆ ಯಾವ ಕ್ರಮ ಕೈಗೊಂಡಿಲ್ಲ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಿ: ಸಿಎಂಗೆ ಮಹಿಳಾ ಆಯೋಗ ಮನವಿ
ಬಿಪಿಎಲ್ ಕಾರ್ಡ್‌ನ 2.95 ಲಕ್ಷ ಅರ್ಜಿ ವಿಲೇವಾರಿ: ಮುನಿಯಪ್ಪ